ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ನಟ ಆಲೆಕ್ ಬಾಲ್ಡ್ವಿನ್ ಸಿಡಿಸಿದ ಗುಂಡು ಗುರಿ ತಪ್ಪಿ ಛಾಯಾಗ್ರಾಹಕಿಗೆ ತಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ನ್ಯೂ ಮೆಕ್ಸಿಕೊದಲ್ಲಿ ಈ ಘಟನೆ ನಡೆದಿದೆ.
19ನೇ ಶತಮಾನದ ಕಥೆಯಾಧಾರಿತ ರಸ್ಟ್ (Rust) ಹೆಸರಿನ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ನಟ ಆಲೆಕ್ ಬಾಲ್ಡ್ವಿನ್ ಕೈಯಲ್ಲಿದ್ದ ರಿವಾಲ್ವರ್ ನಿಂದ ಹಾರಿದ ಗುಂಡು ನೇರವಾಗಿ ಛಾಯಾಗ್ರಾಹಕಿಗೆ ತಾಗಿದೆ. ಚಿತ್ರೀಕರಣದ ಸೆಟ್ನಲ್ಲಿ ಈ ದುರ್ಘಟನೆ ನಡೆದಿದೆ.
ಮೃತ ಛಾಯಾಗ್ರಾಹಕಿಯನ್ನು ಹಲಿನಾ ಹಚಿನ್ಸ್ (42) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ನಿರ್ದೇಶಕ ಜೋಲ್ ಸೌಜಾ (48) ಕೂಡಾ ಗಾಯಗೊಂಡಿದ್ದಾರೆ.
Discussion about this post