ನವದೆಹಲಿ : ರಾಷ್ಟ್ರ ರಾಜಧಾನಿಗೆ ಭೇಟಿ ನೀಡುವ ಪ್ರತಿಯೊಬ್ಬರು ಇಂಡಿಯಾ ಗೇಟ್ ಬಳಿ ತೆರಳುತ್ತಾರೆ, ಅಮರ್ ಜವಾನ್ ಜ್ಯೋತಿಗೆ ನಮಿಸುತ್ತಾರೆ. ಆದರೆ ಇಂದಿನಿಂದ ಇಂಡಿಯಾ ಗೇಟ್ ಬಳಿಯ ಅಮರ್ ಜ್ಯೋತಿ ಉರಿಯೋದಿಲ್ಲ. ಶುಕ್ರವಾರ ಈ ಜ್ಯೋತಿಯನ್ನು ಶಾಂತಗೊಳಿಸಲಾಗುತ್ತಿದೆ.
ಬಾಂಗ್ಲಾ ವಿಮೋಚನೆಗಾಗಿ 1971ರಲ್ಲಿ ಪಾಕ್ ವಿರುದ್ಧ ನಡೆದ ಯುದ್ದದಲ್ಲಿ ಭಾರತ ವಿಜಯ ಪತಾಕೆ ಹಾರಿಸಿತ್ತು. ಈ ಹೋರಾಟದಲ್ಲಿ ಮಡಿದ ಸೈನಿಕರ ನೆನಪಿಗಾಗಿ ಅಮರ್ ಜವಾನ್ ಜ್ಯೋತಿಯನ್ನು ಸ್ಥಾಪಿಸಲಾಗಿತ್ತು. ಆಗಿನ ಪ್ರಧಾನಿ ಇಂದಿರಾ ಗಾಂಧಿ 1971ರಲ್ಲಿ ಇದನ್ನು ಉದ್ಘಾಟಿಸಿದ್ದರು.
ಈ ನಡುವೆ ಅಮರ್ ಜ್ಯೋತಿ ಸ್ಥಳದಿಂದ 400 ಮೀಟರ್ ಅಂತರದಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕವಿದ್ದು, ಅಲ್ಲೂ ಜ್ಯೋತಿ ಉರಿಯುತ್ತಿದೆ. ಇದೀಗ ಅಮರ್ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ಯೋತಿಯೊಂದಿಗೆ ವಿಲೀನ ಮಾಡಲಾಗುತ್ತಿದೆ.

ಅಂದ ಹಾಗೇ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು 2019ರ ಫೆಬ್ರವರಿ 25 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.

Discussion about this post