ನೇರ ನಡೆ ನುಡಿಯ ಕಾರಣಕ್ಕೆ ಎಡಪಂಥೀಯರು ಹಾಗೂ ಕಾಂಗ್ರೆಸ್ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ರೈತರ ಮೇಲೆ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ಶುಕ್ರವಾರ ಪಂಜಾಬ್‌ನ ಕಿರಾತ್‌ಪುರದಲ್ಲಿ ತಮ್ಮ ಕಾರನ್ನು ರೈತರು ಸುತ್ತುವರಿದಿದ್ದಾರೆ ಎಂದು ನಟಿ ಕಂಗನಾ ರಣಾವತ್ ಆರೋಪಿಸಿದ್ದು, ಚಂಡೀಗಢ-ಉನಾ ಹೆದ್ದಾರಿಯಲ್ಲಿರುವ ಕಿರಾತ್‌ಪುರ ಸಾಹಿಬ್‌ನ ಬುಂಗಾ ಸಾಹಿಬ್‌ನಲ್ಲಿ ಈ ಘಟನೆ ನಡೆದಿದೆ ಅಂದಿರುವ ಅವರು ಈ ಕುರಿತ ವಿಡಿಯೋ ಕೂಡಾ ಪೋಸ್ಟ್ ಮಾಡಿದ್ದಾರೆ.
ಕಂಗನಾ ಅವರು ಹಿಮಾಚಲ ಪ್ರದೇಶದ ಕುಲುವಿನಿಂದ ಚಂಡೀಗಢಕ್ಕೆ ತೆರಳುತ್ತಿದ್ದಾಗ ಭಾರತೀಯ ಕಿಸಾನ್ ಯೂನಿಯನ್‌ನ ಸದಸ್ಯರು ಹಿಮಾಚಲ ಪ್ರದೇಶದ ಬಿಲಾಸ್‌ಪುರ್‌ನಿಂದ ನಟಿಯನ್ನು ಹಿಂಬಾಲಿಸುತ್ತಿದ್ದಾರೆ. ಬಳಿಕ ರೈತರು ಕಾರನ್ನು ತಡೆದಿದ್ದಾರೆ. ಬುಂಗಾ ಸಾಹಿಬ್ ತಲುಪಿದಾಗ ಮಹಿಳಾ ಹೋರಾಟಗಾರ್ತಿಯರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದಾರೆ.
ಈ ವೇಳೆ ಕಂಗನಾ ಅವರಿಗೆ `ವೈ’ ಕೆಟಗರಿ ಭದ್ರತೆ ಇದ್ದರೂ ಪ್ರತಿಭಟನಕಾರರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಬಳಿಕ ಭಾರೀ ಸಂಖ್ಯೆಯಲ್ಲಿ ರಾಜ್ಯ ಪೊಲೀಸ್ ಪಡೆಯನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಯ್ತು.
ಇನ್ನು ಸ್ಥಳದಲ್ಲಿದ್ದ ಕೆಲ ರೈತರ ಮಾಹಿತಿ ಪ್ರಕಾರ ಇಬ್ಬರು ಮಹಿಳಾ ಪ್ರತಿಭಟನಾಕಾರರು ನಟಿಯೊಂದಿಗೆ ಮಾತನಾಡಿದ್ದಾರೆ. ಜೊತೆಗೆ ಈ ವೇಳೆ ನಟಿ ಕ್ಷಮೆಯಾಚಿಸಿದ್ದೆರೆ. ಕಾರಿನ ಕಿಟಕಿ ಗಾಜು ಕೆಳಗಿಳಿಸಿದ ನಟಿ ನೀವು ನನ್ನ ತಾಯಿ ಇದ್ದಂತೆ ಅಂದಿದ್ದು ಜೊತೆಗೆ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಏನೂ ಹೇಳಿಲ್ಲ ಅಂದಿದ್ದಾರೆ. ಇನ್ನು ಕಾರಿನಿಂದ ಇಳಿದ ನಟಿ ಮಹಿಳಾ ಪ್ರತಿಭಟನಾಕಾರರನ್ನು ಅಪ್ಪಿಕೊಂಡರು ನಂತರ ಅವರಿಗೆ ಹೋಗಲು ಅನುಮತಿ ನೀಡಲಾಯ್ತು ಅಂದಿದ್ದಾರೆ.
ಈ ನಡುವೆ ಘಟನೆ ಕುರಿತಂತೆ ಹಾರಿಕೆ ಉತ್ತರ ನೀಡಿರುವ ರೈತ ಮುಖಂಡ ರಾಕೇಶ್ ಟಿಕಾಯತ್, ನಟಿಯ ಕಾರಿನ ಮೇಲೆ ದಾಳಿ ನಡೆದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಅಂದಿದ್ದಾರೆ.
WATCH: Actor #KanganaRanaut calls out 'shocking behaviour by some anti-social elements' in Punjab; shames people for playing politics with her name that has resulted in this kind of 'mob lynching'. pic.twitter.com/O4xJ5Q5PSm
— Asianet Newsable (@AsianetNewsEN) December 3, 2021
Kangana talks to the protesting farmers who surrounded her car in Punjab today. The actress is met with greetings after the misunderstanding about her comments got cleared up.#KanganaRanaut pic.twitter.com/gjJIPeKi7L
— Kangana Ranaut Daily (@KanganaDaily) December 3, 2021
Discussion about this post