ಲೋಕಾಯುಕ್ತವನ್ನು ಬಿಜೆಪಿ ಬಲಗೊಳಿಸಲಿದೆ ಅನ್ನುವ ನಂಬಿಕೆಯಂತೂ ಇಲ್ಲ ( ACB Karnataka)
ಬೆಂಗಳೂರು : 2016ರಲ್ಲಿ ಸ್ವಹಿತಾಸಕ್ತಿಗಾಗಿ ಲೋಕಾಯುಕ್ತ ಅಧಿಕಾರವನ್ನು ಮೊಟಕುಗೊಳಿಸಿ, ಅದನ್ನು ಮೂಲೆಗುಂಪು ಮಾಡಿದ್ದ ಸಿದ್ದರಾಮಯ್ಯ ಎಸಿಬಿಯನ್ನು ರಚಿಸಿದ್ದರು.ಎಸಿಬಿ ರಚಿಸುವಾಗ ಎಲ್ಲವೂ ಚೆನ್ನಾಗಿತ್ತು. ಇನ್ನೇನು ರಾಜ್ಯದಲ್ಲಿ ಭ್ರಷ್ಟಚಾರವೇ ಇರೋದಿಲ್ಲ ಅನ್ನುವಂತಿತ್ತು. ಆದರೆ ಸಣ್ಣ ಪುಟ್ಟ ಪ್ರಕರಣಗಳನ್ನು ಎಸಿಬಿ ಪತ್ತೆ ಹಚ್ಚಿದ್ದು ಬಿಟ್ಟರೆ, ರಾಜಕಾರಣಿಗಳ, ದೊಡ್ಡ ದೊಡ್ಡ ಅಧಿಕಾರಿಗಳ ಲಂಚ ಪ್ರಕರಣಗಳು ಕಣ್ಣಿಗೆ ಕಾಣಲೇ ಇಲ್ಲ.
ಇನ್ನು ಎಸಿಬಿ ಮಾಡಿದ ದಾಳಿಗಳ ಪೈಕಿ ಅದೆಷ್ಟು ಮಂದಿಗೆ ಶಿಕ್ಷೆಯಾಗಿದೆಯೋ ಅಂದ್ರೆ ಬೆರಳೆಣಿಕೆಯ ಪ್ರಕರಣಗಳಲ್ಲಿ ಮಾತ್ರ ಆರೋಪ ಸಾಬೀತಾಗಿದೆ.
ಇದನ್ನು ಓದಿ : CT Ravi ಬಿಜೆಪಿ ರಾಜ್ಯಾಧ್ಯಕ್ಷರಾಗೋದು ಖಚಿತವಂತೆ
ಈ ನಡುವೆ ಕರ್ನಾಟಕ ಹೈಕೋರ್ಟ್ ಭ್ರಷ್ಟಾಚಾರ ನಿಗ್ರಹ ದಳವನ್ನು ( ಎಸಿಬಿ )ಯನ್ನು ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಎಸಿಬಿ ಪೊಲೀಸ್ ಠಾಣೆಗಳನ್ನು ಲೋಕಾಯುಕ್ತದೊಂದಿಗೆ ವಿಲೀನ, ಎಸಿಬಿಯಲ್ಲಿರುವ ಎಲ್ಲಾ ಪ್ರಕರಣಗಳನ್ನು ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ವರ್ಗಾಯಿಸಲು ಹೈಕೋರ್ಟ್ ಆದೇಶಿಸಿದೆ. ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ನ್ಯಾ.ಕೆಎಸ್. ಹೇಮಲೇಖ ಅವರಿದ್ದ ಈ ಪೀಠ ಆದೇಶ ಹೊರಡಿಸಿದೆ.
Discussion about this post