ರಾಜಕೀಯದಲ್ಲಿ ಕ್ಷಣ ಮಾತ್ರದಲ್ಲಿ ಏನು ಬೇಕಾದರೂ ಸಂಭವಿಸಬಹುದು ಅನ್ನುವುದಕ್ಕೆ ಇತಿಹಾಸ ಪುಟಗಳಲ್ಲಿ ರಾಶಿಗಟ್ಟಲೆ ಸಾಕ್ಷಿಗಳಿವೆ.
ಇದೀಗ ತೆಲಂಗಾಣದಲ್ಲೂ ಹಾಗೇ ಆಗಿದೆ. ರಾಜಕೀಯದಲ್ಲಿ ಯಾರು ಮಿತ್ರರು, ಯಾರು ಶತ್ರುಗಳು ಎಂದು ಅರಿಯುವ ಪ್ರಯತ್ನದಲ್ಲಿರುವಾಗಲೇ ಮಿತ್ರರು ಶತ್ರುಗಳಾಗಿರುತ್ತಾರೆ, ಶತ್ರುಗಳು ಮಿತ್ರರಾಗಿರುತ್ತಾರೆ.
2019ರ ಚುನಾವಣೆಯಲ್ಲಿ ಮೋದಿಯನ್ನು ಏಕಾಂಗಿಯಾಗಿ ಎದುರಿಸಬಲ್ಲ ನಾಯಕನ ಕೊರೆತೆ ಎದುರಿಸುತ್ತಿರುವ ಪ್ರತಿಪಕ್ಷಗಳು ಸಂಘಟಿತ ಹೋರಾಟಕ್ಕೆ ಮುಂದಾಗಿವೆ.
ಕುಮಾರಸ್ವಾಮಿ ಪ್ರಮಾಣ ವಚನಕ್ಕೂ ಮುನ್ನ ಪ್ರಾರಂಭವಾದ ಮಹಾಘಟಬಂಧನ್ ರಚನೆ ಪ್ರಕ್ರಿಯೆ, ಕುಮಾರಸ್ವಾಮಿ ಸಿಎಂ ಆಗುತ್ತಿದ್ದಂತೆ ಮತ್ತಷ್ಟು ಚುರುಕು ಪಡೆಯಿತು.
ಅದ್ರಲ್ಲೂ ಈ ಮಹಾಘಟಬಂಧನದ ಮತ್ತೊಂದು ಮಹಾಶಕ್ತಿಯಾಗಿ ತೆಲಂಗಾಣ ಸಿಎಂ ಕೆಚ. ಮಹಾಘಟಬಂಧನ್ ನಲ್ಲಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಕೂಡ ದೊಡ್ಡ ನಾಯಕರಾಗಿರುತ್ತಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದರು.
ಮಾತ್ರವಲ್ಲದೆ ಮಹಾಘಟಬಂಧನ್ ನೊಳಗಿನ ನಾಯಕರು ಕೂಡಾ ಚಂದ್ರಶೇಖರ ರಾವ್ ಮೇಲೆ ಸಿಕ್ಕಾಪಟ್ಟೆ ನಂಬಿಕೆ ಇಟ್ಟಿದ್ದರು.
ಆದರೆ ಇದೀಗ ರಾಜಕೀಯ ಪಂಡಿತರು ಲೆಕ್ಕಚಾರ ಉಲ್ಟಾ ಆಗಿದೆ.
ಇಂದು ಹೈದರಾಬಾದ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆ. ಚಂದ್ರಶೇಖರ್ ರಾವ್, ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸಿಕ್ಕಾಪಟ್ಟೆ ಟೀಕಾ ಪ್ರಹಾರ ನಡೆಸಿದ್ದಾರೆ.
ರಾಹುಲ್ ಗಾಂಧಿ ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ. ಅವರು ದೇಶದ ಬಹುದೊಡ್ಡ ಬಫೂನ್. ಹೇಗೆ ಮೋದಿಯವರನ್ನು ತಬ್ಬಿಕೊಂಡರು,ಸಂಸತ್ತಿನಲ್ಲಿ ಹೇಗೆ ಕಣ್ಣು ಮಿಟಿಕಿಸಿದ್ರು ಅನ್ನೋದನ್ನು ಜನ ನೋಡಿದ್ದಾರೆ. ಇದೀಗ ಅವರು ನಮಗೆ ದೊಡ್ಡ ಆಸ್ತಿಯಾಗಿದ್ದು, ಅವರು ನಮ್ಮ ವಿರುದ್ಧ ಪ್ರಚಾರಕ್ಕೆ ಬಂದರೆ ನಮಗೆ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯ ಎಂದು ಹೇಳಿದ್ದಾರೆ.
ಅಲ್ಲಿಗೆ ರಾಹುಲ್ ಗಾಂಧಿ ಆಟ ತೆಲಂಗಾಣದಲ್ಲಿ ನಡೆಯೋದಿಲ್ಲ ಅನ್ನೋದು ಪಕ್ಕಾ ಆಗಿದೆ.
Discussion about this post