ಪಂಚೆಯೊಂದು ಗಟ್ಟಿ ಇಲ್ಲದೆ ಹೋದರೆ ಸಮಾಜದಲ್ಲಿ ಮಾನ ಮರ್ಯಾದೆ ಹೊರಟು ಹೋಗುತ್ತದೆ ಅನ್ನುವುದಕ್ಕೆ ಸಾವಿರ ಸಾಕ್ಷಿಗಳು ನಮ್ಮಲ್ಲಿವೆ. ಅದರಲ್ಲೂ ಖಾವಿಧಾರಿಗಳು ಜಾರಿದರೆ ಸಮಾಜ ಅವರನ್ನು ಕೆಟ್ಟದಾಗಿ ಟೀಕಿಸುತ್ತದೆ.
ಇದಕ್ಕೆ ಸಾಕ್ಷಿ ಶಿರೂರು ಶ್ರೀಗಳ ಸಾವು. ಹಾಗೇ ನೋಡಿದರೆ ಶಿರೂರು ಶ್ರೀಗಳ ಸಾವು ಸುದ್ದಿಯಾಗಬೇಕಿತ್ತು. ಅವರ ಕೆಲಸಗಳು ಸದ್ದು ಮಾಡಬೇಕಿತ್ತು. ಆದರೆ ಶ್ರೀಗಳ ಸಾವಿನ ಸುದ್ದಿಗಿಂತ ಸಾವಿನ ಕಾರಣವೇ ದೊಡ್ಡ ಸುದ್ದಿಯಾಗಿದೆ.
ಸ್ವಾಮೀಜಿ ಸಾವಿಗೆ ಕಾರಣವೇನು, ವಿಷ ಕನ್ಯೆ ಕಾರಣವೇ.. ರಿಯಲ್ ಎಸ್ಟೇಟ್ ಉದ್ಯಮ ಕುತ್ತಿಗೆ ಬಿಗಿಯಿತೇ ಅನ್ನುವುದು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.
ಆದರೆ ಶಿರೂರು ಶ್ರೀಗಳ ಹಲವು ರಹಸ್ಯಗಳು ಇದೀಗ ಬಯಲಾಗತೊಡಗಿದೆ. ಶಿರೂರು ಶ್ರೀಗಳು ಹೊರ ಪ್ರಪಂಚಕ್ಕೆ ತೋರಿದ ಮುಖವೇ ಬೇರೆ. ಮಠದೊಳಗೆ ಆಡಿದ ಆಟವೇ ಬೇರೆ ಅನ್ನುವ ಮಾತುಗಳು ಉಡುಪಿಯಲ್ಲಿ ಓಡಾಡುತ್ತಿದೆ.
ಸ್ವಯಂ ಕೃತ್ಯ ಅಪರಾಧ, ಖಾವಿ ತೊಟ್ಟು ಕಂಡವರ ಕಣ್ಣಿಗೆ ಮಣ್ಣು ಎರಚಿದ್ದು ಶಾಪವಾಗಿ ಪರಿಣಮಿಸಿದೆ. ಅತ್ತ ಕೃಷ್ಣ ಕೂಡಾ ಸ್ವಾಮೀಜಿಯ ಪಾಪದ ಕೊಡ ತುಂಬುವುದನ್ನೇ ಕಾಯುತ್ತಿದ್ದ.
ಖಾವಿ ತೊಟ್ಟ ಸ್ವಾಮಿಗೆ, ವಿಠ್ಠಲ ಪೂಜೆಗಿಂತ, ಪಲ್ಲಂಗ ಧ್ಯಾನ ಹೆಚ್ಚಾಗಿತ್ತು. ಹಾಗಂತ ಅದು ಅವರ ತಪ್ಪು ಅನ್ನುವ ಹಾಗಿಲ್ಲ. ತಾನು ಎಡವಿದ್ದೇವೆ ಎಂದು ಗೊತ್ತಾದ ತಕ್ಷಣ ಖಾವಿ ತೊರೆದು ಸಂಸಾರಿಯಾಗಬಹುದಿತ್ತು. ಸಮಾಜ ಅವರನ್ನು ಮೆಚ್ಚಿಕೊಳ್ಳುತ್ತಿತ್ತು. ಆದರೆ ಹಾಗೇ ಮಾಡಲಿಲ್ಲ.
ಆಸೆಗೆ ಬೇಲಿ ಹಾಕಿಕೊಂಡು ಸನ್ಯಾಸ ಸ್ವೀಕರಿಸಿದವರಿಗೆ ಹರೆಯ ಬಂದಾಗ ಖಾವಿಯೊಳಗಿನ ಮನಸ್ಸು ಕೇಳಲಿಲ್ಲ. ಇಂದ್ರಿಯ ನಿಗ್ರಹಿಸುವ ತಾಕತ್ತನ್ನು ರೂಢಿಸಿಕೊಳ್ಳುವುದು ಅಸಾಧ್ಯವಾಯ್ತು. ಆ ವೇಳೆ ಸಂಪರ್ಕಕ್ಕೆ ಸಿಕ್ಕ ಮಂದಿ ಕಾಸಿನ ರುಚಿ ತೋರಿಸಿದ್ದರು.
ಶಿರೂರು ಶ್ರೀಗಳಿಗೆ ಯಾವಾಗ ಪಟ್ಟದ ದೇವರಿಗಿಂತ, ಪಟ್ಟದರಿಸಿಯರ ಕಾಟ ಶುರುವಾಯ್ತೋ ಸ್ವಾಮೀಜಿ ಕುಗ್ಗಿ ಹೋಗಿದ್ದರು. ಕೈ ಹಾಕಿದ ವ್ಯವಹಾರಗಳು ಸುಡ ತೊಡಗಿತ್ತು. ಹೀಗಾಗಿ ಮರ್ಯಾದೆ ಉಳಿಸಿಕೊಳ್ಳಲು ಉಳಿದವರ ಮೇಲೆ ಆರೋಪ ಹೊರೆ ಹೊರಿಸಿದರು. ಅವರಿಗೆ ಗೊತ್ತಿಲ್ಲದಂತೆ ತಮ್ಮ ಕಾವಿಯ ಮೇಲೆ ಕೆಸರು ಅಂಟಿಸಿತೊಡಗಿದ್ದರು. ತನ್ನ ಮೈ ಮೇಲೆ ಸತ್ತರೂ ಮಾಯವಾಗದ ಕಲೆ ಉಂಟಾಗುತ್ತಿದೆ ಅನ್ನುವುದು ಅವರ ಅರಿವಿಗೆ ಬರಲೇ ಇಲ್ಲ. ಅರಿವಿಗೆ ಬರುವಷ್ಟು ಹೊತ್ತಿಗೆ ಯಮ ಧರ್ಮನ ದೂತರ ಆಗಮನವಾಗಿತ್ತು.
ಮಾಧ್ಯಮವೊಂದರ ವರದಿ ಪ್ರಕಾರ ಶಿರೂರು ಶ್ರೀಗಳಿಗೆ 25 ವರ್ಷಗಳ ಹಿಂದೆ ಮಹಿಳೆಯೊಂದಿಗೆ ಸಂಬಂಧ ಇತ್ತು ಎನ್ನಲಾಗಿದೆ. ಲೌಕಿಕ ಲೋಕದತ್ತ ಒಲವು ತೋರಿದ್ದ ಸ್ವಾಮಿ ಸಿಕ್ಕಾಪಟ್ಟೆ ಸೋಷಿಯಲ್ ಆಗಿದ್ದರು. ಇತರ ಸ್ವಾಮೀಜಿಗಳಂತೆ ಮಡಿವಂತಿಕೆ ಕಡಿಮೆ ಇದ್ದ ಕಾರಣ ಜನ ಸಾಮಾನ್ಯರಿಗೆ ಇಷ್ಟವಾಗಿ ಹೋದರು.
ಆದರೆ 25 ವರ್ಷಗ ಹಿಂದೆ ಬೆಳೆಸಿ ಸಂಬಂಧವನ್ನು ಏನೂ ಮಾಡುವಂತಿರಲಿಲ್ಲ. ಸೆರಗಿನಲ್ಲಿ ಕಟ್ಟಿಕೊಂಡ ಕೆಂಡವಾಗಿತ್ತು.ಸಂಬಂಧಕ್ಕೆ ಸಾಕ್ಷಿಯಾಗಿ ಪುತ್ರ ಸಂತಾನ ಬೇರೆ ಇತ್ತು. ಜೊತೆಗೆ ಜೊತೆಗಿದ್ದವಳ ಪ್ರೀತಿ, ಅಕ್ಕರೆ, ಆರೈಕೆ ಎಲ್ಲವೂ ಸ್ವಾಮೀಜಿಯನ್ನು ಮೈ ಮರೆಯುವಂತೆ ಮಾಡಿತ್ತು.
ಶ್ರೀಗೆ ಸ್ತ್ರೀ ಸಂಬಂಧ ಇದೆ ಇಡೀ ಉಡುಪಿಗೆ ಗೊತ್ತಿತ್ತು. ಆದರೆ ಬಹಿರಂಗವಾಗಿ ಮಾತನಾಡುವ ಸ್ಥಿತಿ ಇರಲಿಲ್ಲ. ಜೊತೆಗೆ ಪಟ್ಟದರಿಸಿಯಂತೆ ಬಂದವಳು ಸ್ವಾಮೀಜಿಯನ್ನು ಮೀರಾ ಕೃಷ್ಣನನ್ನು ಪ್ರೀತಿಸಿದಂತೆ ಪ್ರೀತಿಸಿದ್ದಳು. ಮಠದ ಮೇಲು ಅಂತಸ್ತಿನಲ್ಲಿ ವಾಸವಾಗಿದ್ದ ಆಕೆ ಶ್ರೀಗಳ ಸೇವೆಗಾಗಿ ಬದುಕು ಮುಡಿಪಾಗಿಟ್ಟಿದ್ದಳು. ಕೃಷ್ಣನ ಮೇಲೆ ಭಕ್ತಿ ಇತ್ತೋ ಇಲ್ಲವೋ, ಸ್ವಾಮೀಜಿ ಅಂದರೆ ಆಕೆಗೆ ಪಂಚಪ್ರಾಣ. ಸ್ವಾಮೀಜಿ ಗೌರವಕ್ಕೆ ಕುತ್ತು ಬರಬಾರದು ಎಂದು ಪುತ್ರನನ್ನು ಹಾಗೇ ಬೆಳೆಸಿದ್ದಳು.
ಆದರೆ ಯಾವಾಗ ಎರಡು ವರ್ಷದ ಹಿಂದೆ ಸ್ವಾಮೀಜಿ ಬದುಕಿನಲ್ಲಿ ಮತ್ತೊಬ್ಬ ಮಹಿಳೆಯ ಎಂಟ್ರಿ ಹೊಡೆಯಿತೋ, ಮೊದಲಾಕೆ ಕಾದ ಕೆಂಡವಾದಳು. ತನ್ನ ಸ್ಥಾನಕ್ಕೆ ಮತ್ತೊಬ್ಬಳನ್ನು ಸ್ವಾಮೀಜಿ ಕರೆದುಕೊಂಡು ಬಂದಿರುವುದನ್ನು ಆಕೆ ಸಹಿಸಲಿಲ್ಲ.
ಇಡೀ ಮಠದಲ್ಲಿ ಅಧಿಕಾರಕ್ಕಾಗಿ ಹೋರಾಟ ಪ್ರಾರಂಭವಾಯ್ತು. ಪಟ್ಟದರಿಸಿಯ ಸ್ಥಾನಕ್ಕಾಗಿ ಹಳೆ ಮತ್ತು ಹೊಸ ಸಂಬಂಧದ ನಡುವೆ ಕಿತ್ತಾಟ ಪ್ರಾರಂಭವಾಯ್ತು.
ಕಿರಿಯವಳು ಮಠದಲ್ಲಿ ಅಧಿಕಾರ ಚಲಾವಣೆ ಶುರು ಮಾಡುತ್ತಿದ್ದಂತೆ,ಸಂತೆ ಕಟ್ಟೆಯ ಶಾಖಾ ಮಠಕ್ಕೆ ಸ್ವಾಮೀಜಿ ಮತ್ತು ಹಿರಿಯವಳು ಶಿಫ್ಟ್ ಆದರು. ಆದರೆ ಅಲ್ಲೂ ಕಿರಿಯವಳ ಕಾಟ ಶುರುವಾಯ್ತು. ಹೀಗಾಗಿ ಮತ್ತೆ ಮೂಲ ಮಠಕ್ಕೆ ಸ್ವಾಮೀಜಿ ಹಿಂತಿರುಗಿದರು
ಆರಾಧ್ಯ ದೈವ ಎಂದೇ ಪೂಜಿಸಿದ್ದ ತನಗೆ ಸ್ವಾಮೀಜಿ ಮಾಡಿದ ದ್ರೋಹವನ್ನು ಹಿರಿಯವಳಿಗೆ ಸಹಿಸಲು ಸಾಧ್ಯವಾಗಲಿಲ್ಲ.ಕಿರಿಯವಳು ಹಿರಿಯವಳನ್ನು ಬೈದ್ರೆ ಸ್ವಾಮೀಜಿ ಮೌನವಾಗಿರುತ್ತಿದ್ದರು. ಅದು ಮತ್ತಷ್ಟು ನೋವಿಗೆ ಕಾರಣವಾಯ್ತು.
ಹೀಗಾಗಿ ನೊಂದ ಹೆಂಗರುಳು,ಮಗನಿದ್ದಾನೆ ಎಂದು ಮರೆತು ಬಿಟ್ಟ ನಿಮನ್ನು ಕೃಷ್ಣ ಕ್ಷಮಿಸುವುದಿಲ್ಲ ಎಂದು ಶಾಪವಿಟ್ಟು ಹೊರಟು ಹೋದ ಹಿರಿಯವಳು ಮತ್ತೆ ಬರಲಿಲ್ಲ. ಆದರೆ ತೆರೆ ಮರೆಯಲ್ಲಿ ಆಟ ಮುಂದುವರಿದಿತ್ತು.
ಹಿರಿಯವಳು ಹೋಗುತ್ತಿದ್ದಂತೆ ಕಿರಿಯವಳ ಆಟ ಶುರುವಾಯ್ತು. ರಮ್ಯ ಮನೋಹರವಾಗಿ ಕಾವಿ ಸಂಸಾರ ಪ್ರಾರಂಭವಾಯ್ತು. ಮಠದ ಉಸ್ತುವಾರಿಯಾಗಿ ರಮ್ಯ ಪಟ್ಟಾಭಿಷೇಕ ಮಾಡಿಸಿಕೊಂಡಳು. ಆಮೇಲೆ ಏನು ನಡೆಯಿತು ಅನ್ನುವುದು ಎಲ್ಲರಿಗೂ ಗೊತ್ತಿದೆ.
Discussion about this post