ಶನಿವಾರ ಪಿಯುಸಿ ದ್ವಿತೀಯ ವರ್ಷದ ಭೂಗೋಳಶಾಸ್ತ್ರದ ಮರು ಪರೀಕ್ಷೆ ರಾಜ್ಯಾದ್ಯಂತ ನಡೆದಿತ್ತು. ಇದೇ ರೀತಿ ಜಮಖಂಡಿ ತಾಲೂಕಿನ ತೊದಲ ಬಾಗಿ ಮಲ್ಲಿಕಾರ್ಜುನ ಪದವಿ ಪೂರ್ವ ಕಾಲೇಜಿನಲ್ಲೂ ಪರೀಕ್ಷೆಗೆ ಎಲ್ಲಾ ಸಿದ್ದತೆಗಳನ್ನು ನಡೆಸಲಾಗಿತ್ತು.
ವಿಶೇಷ ಅಂದ್ರೆ ಮರು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದು ಏಕೈಕ ವಿದ್ಯಾರ್ಥಿ. ಆದರೂ ನಿಯಮಗಳ ಪ್ರಕಾರ ಒಬ್ಬನೋ ನೂರು ಜನರೋ 13 ಸಿಬ್ಬಂದಿ ಪರೀಕ್ಷೆ ಬರೆಸಲು ಸಕಲ ಸಿದ್ದತೆಗಳನ್ನು ಮಾಡಿಕೊಂಡು ಬಂದಿದ್ದರು.
ಒಬ್ಬ ವಿದ್ಯಾರ್ಥಿಯ ಪರೀಕ್ಷೆಗೆ ಮುಖ್ಯ ಅಧೀಕ್ಷ ಕರು, ಸಹಾಯಕ ಮುಖ್ಯ ಅಧೀಕ್ಷ ಕರು, ಉತ್ತರ ಪತ್ರಿಕೆ ಪಾಲಕರು, ವೀಕ್ಷ ಕರು, ಜಾಗೃತ ದಳದ ಸದಸ್ಯರು, ಕಚೇರಿ ಅಧೀಕ್ಷಕರು ಸೇರಿದಂತೆ 13ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆಗೊಂಡಿದ್ದರು.
ಈ ಪೆನ್ ಬಾಕ್ಸ್ ಖರೀದಿಗಾಗಿ ಕೆಳಗಿನ ಇಮೇಜ್ ಕ್ಲಿಕ್ ಮಾಡಿ
ಆದರೆ ವಿದ್ಯಾರ್ಥಿ ಸದಾಶಿವ ಪಾರ್ಥನಳ್ಳಿ ಗಂಟೆ 10 ಕಳೆದರೂ ಪರೀಕ್ಷೆ ಕೇಂದ್ರದತ್ತ ಸುಳಿಯಲಿಲ್ಲ. ಒಬ್ಬ ಪರೀಕ್ಷಾರ್ಥಿಗಾಗಿ 13 ಸಿಬ್ಬಂದಿ ಗಂಟೆಗಟ್ಟಲೇ ಕಾಯ್ದರೂ ಆ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಲೇ ಇಲ್ಲ.
ಪರೀಕ್ಷಾ ಅವಧಿ ಮುಗಿಯೋ ತನಕ ಕಾದ ಸಿಬ್ಬಂದಿ ಕೊನೆಗೆ ವಿದ್ಯಾರ್ಥಿ ಗೈರು ಹಾಜರಾಗಿದ್ದಾನೆ ಎಂದು ದಾಖಲೆಗಳನ್ನು ಹಿರಿಯ ಅಧಿಕಾರಿಗಳ ಕಚೇರಿಗೆ ಕಳುಹಿಸಿಕೊಟ್ಟಿದ್ದಾರೆ.
Discussion about this post