ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಈಗಾಗಲೇ ಟ್ವೀಟ್ ವಾರ್ ಪ್ರಾರಂಭಿಸಿರುವ ಇಂದು ಮತ್ತೊಂದು ಟ್ವೀಟ್ ಮಾಡಿದ್ದು, ಅದರಲ್ಲಿ ರಾಜ್ಯ ಮೂವರು ಸಿಎಂಗಳನ್ನು ಹೊಂದಿದೆ ಎಂದು ಹೇಳಿದೆ.
ರಾಜ್ಯದಲ್ಲಿ ಸದ್ಯ ಮೂವರು ಮುಖ್ಯಮಂತ್ರಿಗಳಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ ವಿಕಲಾಂಗ ಸಿಎಂ, ಹೆಚ್.ಡಿ.ರೇವಣ್ಣ ಸೂಪರ್ ಸಿ.ಎಂ, ಹೆಚ್.ಡಿ.ದೇವೆಗೌಡ ಸುಪ್ರೀಂ ಸಿಎಂ ಎಂದು ಟ್ವೀಟ್ ಮಾಡಿದೆ.
ಇಷ್ಟು ಮುಖ್ಯಮಂತ್ರಿಗಳಿದ್ದರು ಸರ್ಕಾರ ಯಾವಾಗ ಕೆಲಸ ಆರಂಭಿಸುತ್ತದೆ ಎಂದು ರಾಜ್ಯ ಕಾಯುವಂತಾಗಿದೆ. ನಿಜವಾದ ಮುಖ್ಯಮಂತ್ರಿ ಯಾರು ಎಂಬುದನ್ನು ಮೊದಲು ದೇವೇಗೌಡರ ಕುಟುಂಬ ನಿರ್ಧಾರ ಮಾಡಲಿ ಎಂದು ಇದೇ ಟ್ವೀಟ್ ನಲ್ಲಿ ಟೀಕಿಸಲಾಗಿದೆ.
ಇದ್ಯಾಕೋ ಬಿಜೆಪಿಯದ್ದು ಅತೀಯಾಯ್ತು. ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ವಿವೇಚನೆಯಿಂದ ಟ್ವೀಟ್ ಮಾಡುವುದನ್ನು ಕಲಿಯುವ ಅಗತ್ಯವಿದೆ. ಒಂದು ವೇಳೆ ಕುಮಾರಸ್ವಾಮಿಯವರನ್ನು ವಿಕಲಾಂಗ ಎಂದು ಕರೆಯುವುದಿದ್ದರೆ ಬಿಜೆಪಿ ಇದಕ್ಕೆ ಕಾರಣಗಳನ್ನು ಕೊಡಬೇಕು.
Discussion about this post