ಬಿಜೆಪಿ ನಾಯಕರು ಮನವೊಲಿಸಿ ಘರ್ ವಾಪ್ಸಿ ಆಯ್ತು ಅನ್ನಲಾಗಿದ್ದು, ಆದರೆ ಅಸಲಿ ಕಥೆಯೇ ಬೇರೆಯಂತೆ (Tumakuru)
ತುಮಕೂರು : ಅರ್ಚಕರೊಬ್ಬರು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು ಹೋಗಿ ವಾಪಾಸ್ ಆಗಿರುವ ಘಟನೆ Tumakuru ಊರ್ಡಿಗೆರೆ ಹೋಬಳಿ ಹಿರೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಓಂಕಾರೇಶ್ವರ ದೇವಾಲಯದ ಎಚ್.ಆರ್. ಚಂದ್ರಶೇಖರಯ್ಯ ಅನ್ನುವವರು ಹಿಂದೂ ಧರ್ಮವನ್ನು ತ್ಯಜಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು ಹೋಗಿದ್ದರು. ಕೊನೆಯ ಕ್ಷಣದಲ್ಲಿ ತಮ್ಮ ನಿರ್ಧಾರ ಬದಲಿಸಿದ ಅವರು ಮಾತೃ ಧರ್ಮಕ್ಕೆ ಮರಳಿದ್ದರು. ಬಿಜೆಪಿ ಮುಖಂಡ ಸೊಗಡು ಶಿವಣ್ಣ ಮತ್ತು ಹಿಂದೂ ಸಂಘಟನೆಗಳ ಮನವೊಲಿಕೆ ಕಾರಣದಿಂದ ಅವರು ವಾಪಾಸ್ ಬಂದಿದ್ದಾರೆ ಅನ್ನಲಾಗಿತ್ತು. ಆದರೆ ಅವರು ಮಾತೃ ಧರ್ಮಕ್ಕೆ ಮರಳಲು ಕಾರಣವೇ ಬೇರೆಯಂತೆ.
ಇದನ್ನೂ ಓದಿ : Saipura bagh palace : ರಾಜಸ್ಥಾನದಲ್ಲಿ ರಾಜ್ಯ ಮರ್ಯಾದೆ ತೆಗೆದ ಅಧಿಕಾರಿಗಳು : ತಹಶೀಲ್ದಾರ್, ಎಸ್ಐ ಬಂಧನ
ತಮ್ಮ ಮತಾಂತರ ನಿರ್ಧಾರ ಕುರಿತಂತೆ ಪ್ರಕಟಣೆ ಹೊರಡಿಸಿದ್ದ ಚಂದ್ರಶೇಖರಯ್ಯ , ಸ್ವ ಇಚ್ಛೆಯಿಂದ ಇಸ್ಲಾಂ ಧರ್ಮಕ್ಕೆ ಮತಾಂತರವಾಗುತ್ತಿದ್ದೇನೆ ಅಂದಿದ್ದರು. ಜೊತೆಗೆ ಮುಬಾರಕ್ ಪಾಷಾ ಎಂದು ಹೆಸರು ಕೂಡಾ ಬದಲಾಯಿಸಿಕೊಂಡಿದ್ದರು.
ಆದರೆ ಯಾವಾಗ ಮುಸ್ಲಿಂ ಧರ್ಮಕ್ಕೆ ಸೇರಲು ಹೋದರೋ, ಮುಂಜಿ ಮಾಡಿದರೆ ಮಾತ್ರ ಮುಸ್ಲಿಂರಲ್ಲಿ ಶವ ಸಂಸ್ಕಾರ ಮಾಡಲಾಗುತ್ತದೆ ಅನ್ನುವುದು ಇವರಿಗೆ ಗೊತ್ತಾಗಿದೆ. ನನಗೆ ಮಧುಮೇಹ ಇರುವ ಕಾರಣ ಮುಂಜಿ ಮಾಡಿಸಿಕೊಳ್ಳಲು ಭಯವಾಯ್ತು. ಹೀಗಾಗಿ ವಾಪಾಸ್ ಬಂದೆ ಅಂದಿರುವ ಚಂದ್ರಶೇಖರಯ್ಯ ನಾನು ಮತಾಂತರವೇ ಆಗಿಲ್ಲ ಎಂದು ವಾದಿಸಿದ್ದಾರೆ.
Discussion about this post