ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆಯವರಿಗೆ (Mallikarjun kharge) ಕೊಟ್ಟ ಸೀಟು ಬಗ್ಗೆ ತಕರಾರು ಎದ್ದಿದೆ
ನವದೆಹಲಿ : ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಸಮಾರಂಭದಲ್ಲಿ ದೇಶದ ಅನೇಕ ಗಣ್ಯರು ಪಾಲ್ಗೊಂಡಿದ್ದರು. (Mallikarjun kharge)
ಆದರೆ ಇದೀಗ ಮಲ್ಲಿಕಾರ್ಜುನ ಖರ್ಗೆಯವರಿಗೆ (Mallikarjun kharge) ಪ್ರಮಾಣ ವಚನ ಸಮಾರಂಭದಲ್ಲಿ ನೀಡಲಾದ ಆಸನದ ಬಗ್ಗೆ ಪ್ರತಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದೆ. ಈ ಸಂಬಂಧ ರಾಜ್ಯಸಭಾ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದ್ದು, ತಮ್ಮ ಆಕ್ರೋಶ ಹೊರ ಹಾಕಿದೆ. ಇನ್ನು ಕಾಂಗ್ರೆಸ್ ಎತ್ತಿರುವ ಆಕ್ಷೇಪಕ್ಕೆ ಇತರ ಪಕ್ಷಗಳು ಕೂಡಾ ದನಿಗೂಡಿಸಿದೆ.
ಇದನ್ನೂ ಓದಿ : kannadathi : ಅಮೆರಿಕಾ ಯಾತ್ರೆ ಮುಗಿಸಿದ ಚಿತ್ಕಲಾ : ಶೀಘ್ರದಲ್ಲೇ ರತ್ನಮಾಲಾ ರೀ ಎಂಟ್ರೀ
ನೂತನ ರಾಷ್ಟ್ರಪತಿಗಳ ಪ್ರಮಾಣವಚನ ಸಮಾರಂಭದಲ್ಲಿ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ನೀಡಲಾದ ಆಸನ ಅವರು ಹೊಂದಿರುವ ಸ್ಥಾನಕ್ಕೆ ಅನುಗುಣವಾಗಿರಲಿಲ್ಲ. ಈ ವಿಚಾರದಲ್ಲಿ ಶಿಷ್ಟಚಾರ ಪಾಲಿಸದಿರುವುದರಿಂದ ನಮಗೆ ಅಘಾತವಾಗಿದೆ. ಈ ವಿಚಾರದಲ್ಲಿ ನಾವು ನಮ್ಮ ಪ್ರತಿಭಟನೆಯನ್ನು ದಾಖಲಿಸುವ ಸಲುವಾಗಿ ಪತ್ರ ಬರೆಯುತ್ತಿದ್ದೇವೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಆದರೆ ಬಿಜೆಪಿ ನಾಯಕರು ಕಾಂಗ್ರೆಸ್ ವರ್ತನೆಯನ್ನು ಖಂಡಿಸಿದ್ದು, ಮಲ್ಲಿಕಾರ್ಜುನ ಖರ್ಗೆಯವರಿಗೆ ಮೊದಲ ಸಾಲಿನಲ್ಲೇ ಆಸನ ನೀಡಲಾಗಿತ್ತು. ಇದೇ ಸಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ಆಸೀನರಾಗಿದ್ದರು ಎಂದು ಹೇಳಿದ್ದಾರೆ.
ತಿಲಕ್ ನಗರದಲ್ಲಿ ಬಂಧಿತ ಅಖ್ತರ್ಗೆ ಅಲ್ಖೈದಾ ನಂಟು..!
ಬೆಂಗಳೂರು ಮತ್ತು ತೆಲಂಗಾಣದಲ್ಲಿ ವಿದ್ವಂಸಕರ ಕೃತ್ಯ ಎಸಗಲು ಅಲ್ಖೈದಾ ಸಂಚು ನಡೆಸಿತ್ತು ಎಂದು ಹೇಳಲಾಗುತ್ತಿದೆ
ಬೆಂಗಳೂರು : ರಾಜಧಾನಿಯ ತಿಲಕನಗರದಲ್ಲಿ ಬಂಧಿತನಾಗಿರುವ ಶಂಕಿತ ಉಗ್ರನ ಕರಾಳ ಮುಖಗಳು ಇದೀಗ ಬಯಲಾಗಲಾರಂಭಿಸಿದೆ. ಸ್ವಿಗ್ಗಿ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಸೇರಿಕೊಂಡಿದ್ದ ಈತ ಫುಡ್ ಡೆಲಿವರಿ ಕೆಲಸದೊಂದಿಗೆ ಬೆಂಗಳೂರಿನ ಮೂಲೆ ಮೂಲೆಯನ್ನು ಪರಿಚಯಿಸಿಕೊಳ್ಳುತ್ತಿದ್ದ ಎಂದು ಗೊತ್ತಾಗಿದೆ.
ಸ್ಪಷ್ಟ ಮಾಹಿತಿ ಹಿನ್ನಲೆಯಲ್ಲಿ ಕಳೆದ ಕೆಲವು ದಿನಗಳಿಂದ ಅಖ್ತರ್ ಹುಸೇನ್ ನನ್ನು ಫಾಲೋ ಮಾಡುತ್ತಿದ್ದ ಸಿಸಿಬಿ ತಂಡ ಸಾಕಷ್ಟು ತಾಂತ್ರಿಕ ಮಾಹಿತಿಗಳನ್ನು ಕೂಡಾ ಕಲೆ ಹಾಕಿತ್ತು. ಹೀಗಾಗಿ ಭಾನುವಾರ ಸಂಜೆ 5 ಗಂಟೆಗೆ ಅಖ್ತರ್ ವಾಸವಿದ್ದ ಮನೆಯನ್ನು 5 ಗಂಟೆಯ ಸುಮಾರಿಗೆ 30 ಜನರ ಪೊಲೀಸ್ ಟೀಂ ಸುತ್ತುವರಿದಿತ್ತು. ಈ ಹೊತ್ತಿನಲ್ಲಿ ಶಂಕಿತ ಉಗ್ರ ಮನೆಯಲ್ಲಿ ಇರಲಿಲ್ಲ. 7 ಗಂಟೆ ಸುಮಾರಿಗೆ ಆತ ಮನೆಗೆ ಬರುತ್ತಿದ್ದಂತೆ ಏಕಾಏಕಿ ದಾಳಿ ನಡೆಸಿದ ಪೊಲೀಸ್ ತಂಡ ಶಂಕಿತನನ್ನು ವಶಕ್ಕೆ ಪಡೆದಿತ್ತು.
ಇದನ್ನೂ ಓದಿ : ra ra rakkamma : ರಾ ರಾ ರಕ್ಕಮ್ಮ ತಂದಿಟ್ಲು ಸಂಕಷ್ಟ
ಇದೀಗ ಈತನ ಹಲವು ಮಾಹಿತಿಗಳು ಹೊರ ಬಿದ್ದಿದ್ದು, ಕಳೆದ 1 ವರ್ಷದಿಂದ ಅಲ್ ಖೈದಾ ಜೊತೆಗೆ ನಿರಂತರ ಸಂಪರ್ಕ ಹೊಂದಿದ್ದ ಈತ ಟೆಲಿಗ್ರಾಮ್ ಮತ್ತು ಫೇಸ್ ಬುಕ್ ಮೂಲಕ ಉಗ್ರರ ಸಂಪರ್ಕ ಬೆಳೆಸಿದ್ದ. ಜಿಹಾದ್ ಸಲುವಾಗಿ ಹೋರಾಟಕ್ಕೆ ತಯಾರಾಗಿದ್ದ ಈತ ಮುಂದಿನ ಹದಿನೈದು ದಿನಗಳ ಒಳಗಾಗಿ ಕಾಶ್ಮೀರ ಮಾರ್ಗವಾಗಿ ಅಲ್ ಖೈದಾ ಸೇರುವವನಿದ್ದನಂತೆ.
ಮತ್ತೊಂದು ಮಾಹಿತಿಗಳ ಪ್ರಕಾರ ಬೆಂಗಳೂರು ಮತ್ತು ತೆಲಂಗಾಣದಲ್ಲಿ ಸ್ಪೋಟಕ್ಕೆ ಸಂಚು ರೂಪಿಸಲಾಗುತ್ತಿತ್ತು. ಈ ಕೆಲಸಕ್ಕಾಗಿ ಅಖ್ತರ್ ನ ಬಳಕೆ ಮಾಡಲಾಗುತ್ತಿತ್ತು. ಸ್ಫೋಟಕ ಸೂಕ್ತ ಸ್ಥಳವನ್ನು ಈತ ಹುಡುಕಾಡುತ್ತಿದ್ದ ಅನ್ನಲಾಗಿದೆ.
Discussion about this post