ಕಾನೂನು, ನಿಯಮಗಳನ್ನು ಉದ್ದೇಶಪೂರ್ವಕವಾಗಿ ಗಾಳಿಗೆ ತೂರುವುದನ್ನು ( LuLu mall namaz ) ನಿಲ್ಲಿಸಿದ್ರೆ ದೇಶ ಸರ್ವ ಜನಾಂಗ ಶಾಂತಿಯ ತೋಟವಾಗಿರುತ್ತದೆ
ಕೆಲ ದಿನಗಳ ಹಿಂದಷ್ಟೇ ಲಖನೌದಲ್ಲಿ ತೆರೆದ ಲುಲು ಮಾಲ್ ( LuLu mall namaz ) ಇದೀಗ ವಿವಾದಕ್ಕೆ ಗುರಿಯಾಗಿದೆ. ಮಾಲ್ ನಲ್ಲಿ ನಮಾಜ್ ಮಾಡಲು ಅವಕಾಶ ಕೊಡಲಾಗಿದೆ ಅನ್ನುವ ಆರೋಪ ಕೇಳಿ ಬಂದಿದ್ದು, ಮುಸ್ಲಿಮರು ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಜುಲೈ 10 ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಮಾಲ್ ಅನ್ನು ಉದ್ಘಾಟಿಸಿದ್ದರು.
ವೈರಲ್ ಆಗಿರುವ ವಿಡಿಯೋ ಜುಲೈ 12 ರಂದು ಎಂದು ಹೇಳಲಾಗುತ್ತಿದೆ. ಇನ್ನು ವಿಡಿಯೋ ವೈರಲ್ ಆದ ಬೆನ್ನಲ್ಲೇ ಘಟನೆಯನ್ನು ಹಿಂದೂ ಮಹಾಸಭಾ ಖಂಡಿಸಿದ್ದು, ಮಾಲ್ ಬಹಿಷ್ಕಾರಕ್ಕೆ ಬಹಿರಂಗ ಕರೆ ನೀಡಿದೆ. ಜೊತೆಗೆ ಹನುಮಾನ್ ಚಾಲೀಸಾ ಪಠಣೆಗೆ ಅವಕಾಶ ಕೋರಿದೆ.
ಈ ಬಗ್ಗೆ ಹಿಂದೂ ಮಹಾಸಭಾ ರಾಷ್ಟ್ರೀಯ ವಕ್ತಾರ ಶಿಶಿರ್ ಚತುರ್ವೇದಿ ಪ್ರತಿಕ್ರಿಯೆ ನೀಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದು ಸರ್ಕಾರಿ ಆದೇಶದ ಉಲ್ಲಂಘನೆಯಾಗಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡುವುದಾಗಿ ಹೇಳಿದ್ದಾರೆ.
ಇನ್ನು ಈ ಬಗ್ಗೆ ಲುಲುಮಾಲ್ ಕೂಡಾ ಪ್ರತಿಕ್ರಿಯಿಸಿದ್ದು, ಇಂತಹ ಚಟುವಟಿಕೆಗಳಿಗೆ ಮಾಲ್ ನಲ್ಲಿ ಅವಕಾಶವಿಲ್ಲ. ನಮಾಜ್ ಮಾಡಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಹೀಗೆ ಮಾಡಿದವರ ಗುರುತು ಪತ್ತೆ ಮಾಡಲಾಗುವುದು ಅಂದಿದ್ದಾರೆ.
ಮಹಿಳೆಯರ ಗುಪ್ತಾಂಗದ ಮೂಲಕ ಜೈಲಿಗೆ ಡ್ರಗ್ಸ್ : ಗುಪ್ತಾಂಗಕ್ಕೆ 50 ML ಕೊಬ್ಬರಿ ಎಣ್ಣೆ ಬಾಟಲಿ ತುರುಕಿದ್ದ ಕಿಲಾಡಿ
ಶಿವಮೊಗ್ಗ ಹರ್ಷನ ಕೊಲೆ ಪ್ರಕರಣದ ಆರೋಪಿ ಅಟ್ಟಹಾಸ ವೈರಲ್ ಆದ ಬೆನ್ನಲ್ಲೇ ಪರಪ್ಪನ ಆಗ್ರಹಾರದಲ್ಲಿ ( parappana agrahara jail ) ಇದೀಗ ಎಲ್ಲವೂ ಕಟ್ಟುನಿಟ್ಟಾಗಿದೆ. ಗೃಹ ಸಚಿವರ ಭೇಟಿಯ ಬಳಿಕ ಭಿಕ್ಷೆ ಬೇಡುತ್ತಿದ್ದ ಜೈಲು ಸಿಬ್ಬಂದಿಯೂ ಇದೀಗ ಬದಲಾಗಿದ್ದಾರೆ
ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನೊಳಗೆ ಅನೇಕ ಮಾರ್ಗಗಳಲ್ಲಿ ಡ್ರಗ್ಸ್ ಪೂರೈಕೆಯಾಗುತ್ತಿತ್ತು. ಕಾಸಿನಾಸೆಗೆ ಬಿದ್ದ ಜೈಲು ಸಿಬ್ಬಂದಿ ಇದಕ್ಕೆ ಅವಕಾಶವನ್ನೂ ಕೊಟ್ಟಿದ್ದರು. ಆದರೆ ಇದೀಗ ಕೇಂದ್ರ ಕಾರಾಗೃಹದ ( parappana agrahara jail ) ಭ್ರಷ್ಟರನ್ನು ಬೇರೆ ಕಡೆಗೆ ವರ್ಗಾಯಿಸಲಾಗಿದೆ. ಹೀಗಾಗಿ ಇದೀಗ ಒಂದು ಹಂತಕ್ಕೆ ಎಲ್ಲವೂ ಕಟ್ಟುನಿಟ್ಟಾಗಿದೆ. ಎಷ್ಟು ದಿನಗಳ ಕಾಲ ಈ ಕಟ್ಟು ನಿಟ್ಟು ಅನ್ನುವುದೇ ಪ್ರಶ್ನೆ.
ಈ ನಡುವೆ ವಿಚಾರಣಾಧೀನ ಖೈದಿಗಳಿಗೆ ಗುಪ್ತಾಂಗದಲ್ಲಿ ಬಚ್ಚಿಟ್ಟು ಡ್ರಗ್ಸ್ ತಂದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಚಾಮರಾಜಪೇಟೆಯ ಸಂಗೀತಾ ಮತ್ತು ಶಿವಮೊಗ್ಗದ ಛಾಯಾ ಎಂದು ಗುರುತಿಸಲಾಗಿದೆ. ಬಂಧಿತರಿಂದ 20 ಲಕ್ಷ ಮೌಲ್ಯದ 270 ಗ್ರಾಂ ಹಶೀಶ್ ಆಯಿಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ : unparliamentary words : ನಿತ್ಯದ ಬದುಕಲ್ಲಿ ಬಳಸುವ ಪದಗಳು ಆಸಂಸದೀಯವಂತೆ : ಪ್ರತಿಪಕ್ಷಗಳು ಇನ್ಮುಂದೆ ಬೈಯೋ ಹಾಗಿಲ್ಲ
ಕಳ್ಳತನ ಪ್ರಕರಣವೊಂದರಲ್ಲಿ ಬಂಧಿತನಾಗಿರುವ ಚಾಮರಾಜಪೇಟೆಯ ಲೋಹಿತ್ ಕೇಂದ್ರ ಕಾರಾಗೃಹದಲ್ಲಿದ್ದು ಆತನ ಸಂದರ್ಶನಕ್ಕೆ ಸ್ನೇಹಿತೆ ಸಂಗೀತಾ ಬಂದಿದ್ದಾಳೆ. ಜೈಲು ಪ್ರವೇಶ ದ್ವಾರದಲ್ಲಿ ಆಕೆ ನಡೆಯುವ ಶೈಲಿ ನೋಡಿದ ಜೈಲು ಸಿಬ್ಬಂದಿಗೆ ಅನುಮಾನ ಬಂದಿದೆ. ತಕ್ಷಣ ಮಹಿಳಾ ಸಿಬ್ಬಂದಿ ಸಂಗೀತಾಳನ್ನು ಪರಿಶೀಲನೆ ನಡೆಸಿದಾಗ ಗುಪ್ತಾಂಗದಲ್ಲಿ 250 ಗ್ರಾಂ ಹಶೀಶ್ ಎಣ್ಣೆ ಪ್ಯಾಕೆಟ್ ಪತ್ತೆಯಾಗಿದೆ.
ಮನೆಗಳ್ಳತನ ಪ್ರಕರಣದಲ್ಲಿ ಜೈಲು ಸೇರಿರುವ ಕಾಳಪ್ಪ ಎಂಬಾತನನ್ನು ನೋಡಲು ಶಿವಮೊಗ್ಗದ ಭದ್ರಾವತಿ ತಾಲೂಕಿನ ಛಾಯಾ ಕೇಂದ್ರ ಕಾರಾಗೃಹಕ್ಕೆ ಬಂದಿದ್ದಳು. ಈಕೆ ನಡೆಯುವ ಶೈಲಿ ಕೂಡಾ ಜೈಲು ಸಿಬ್ಬಂದಿಗೆ ಅನುಮಾನ ಮೂಡಿಸಿದೆ. ಹೀಗಾಗಿ ತಕ್ಷಣ ಮಹಿಳಾ ಸಿಬ್ಬಂದಿ ಮೂಲಕ ಪರಿಶೀಲನೆ ನಡೆಸಿದಾಗ 50ml ಕೊಬ್ಬರಿ ಎಣ್ಣೆ ಬಾಟಲಿಯಲ್ಲಿ ಹಶೀಶ್ ಆಯಿಲ್ ತುಂಬಿದ್ದ ಈಕೆ ಬಾಟಲಿಯನ್ನು ಗುಪ್ತಾಂಗಕ್ಕೆ ತುರಿಸಿಕೊಂಡಿದ್ದಳು.
ಇದೀಗ ಇಬ್ಬರ ವಿರುದ್ಧ ಪರಪ್ಪನ ಆಗ್ರಹಾರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಬಂಧಿಸಿ ಗೆಳೆಯರಿರುವ ಜಾಗಕ್ಕೆ ಕಳುಹಿಸಿಕೊಡಲಾಗಿದೆ.
Discussion about this post