ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ( Dharmasthala veerendra hegde ) ರಾಜ್ಯಸಭಾ ಸದಸ್ಯರಾಗಿ ನೇಮಿಸಲಾಗಿದೆ. ಅರ್ಹರೊಬ್ಬರಿಗೆ ಈ ಅವಕಾಶ ಸಿಕ್ಕಿದೆ ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಈ ಆಯ್ಕೆಯನ್ನು ರಾಜಕೀಯ ಹೊರತುಪಡಿಸಿ ನೋಡುವುದು ಇಂದಿನ ಅಗತ್ಯವಾಗಿದೆ
ಬೆಂಗಳೂರು : ಧರ್ಮಸ್ಥಳ ಧರ್ಮಾಧಿಕಾರಿ ( Dharmasthala veerendra hegde ) ವೀರೇಂದ್ರ ಹೆಗ್ಗಡೆಯವರು ರಾಜ್ಯಸಭಾ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಈ ಮೂಲಕ ಶಾಸನ ಸಭೆಗೆ 2ನೇ ಜೈನ ಸಮುದಾಯದ ಪ್ರತಿನಿಧಿ ಪ್ರವೇಶಿಸಿದಂತಾಗಿದೆ.
ಹಾಗೇ ನೋಡಿದರೆ ಶ್ರೀಕ್ಷೇತ್ರದ ಧರ್ಮಸ್ಥಳ ಧರ್ಮಾಧಿಕಾರಿ ಪರಂಪರೆಗೆ ಶಾಸನ ಸಭೆ ಹೊಸದಲ್ಲ. ಡಾ, ವೀರೇಂದ್ರ ಹೆಗ್ಗಡೆಯವರ ತಾತಾ ಮಂಜಯ್ಯ ಹೆಗ್ಗಡೆ ( manjayya heggad ) 1927 ರಿಂದ 15 ವರ್ಷಗಳ ಕಾಲ ಮದ್ರಾಸ್ ಶಾಸನ ಸಭೆಯ ಸದಸ್ಯರಾಗಿದ್ದರು. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ( veerendra heggade) ತಂದೆ ರತ್ನವರ್ಮ ಹೆಗ್ಗಡೆ ( ratnavarma heggade) 1957ರಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪ್ರಥಮ ಕಾಂಗ್ರೆಸ್ ಶಾಸಕರಾಗಿದ್ದರು.
1967ರಲ್ಲಿ ಕಾಪು ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರೂ ಅವರು ಗೆದ್ದಿರಲಿಲ್ಲ. ಇದೀಗ ಡಾ. ವೀರೇಂದ್ರ ಹೆಗ್ಗಡೆ ರಾಜ್ಯಸಭೆಗೆ ನೇಮಕಗೊಂಡಿದ್ದಾರೆ.
ಇದನ್ನೂ ಓದಿ : PSI Exam Scam Amrut Paul : ಹರ್ಷನ ಕೊಲೆ ಆರೋಪಿಗಳಿಗೆ ಮೊಬೈಲ್ ಸಿಗುತ್ತದೆ… ಅಮೃತ ಪಾಲ್ ಗೆ ಎಣ್ಣೆ ಸಿಗಲ್ವ….
ಬಾಂಬೆ ಸಲೀಂ ವಿರುದ್ಧ ಕ್ರಮ ಕೈಗೊಳ್ಳಲು ಉದಾಸೀನ : ಕಲಾಸಿಪಾಳ್ಯ ಪೊಲೀಸ್ ಇನ್ಸ್ ಪೆಕ್ಟರ್ ಅಮಾನತು
ರವಿಕೃಷ್ಣಾ ರೆಡ್ಡಿ ನಾಯಕತ್ವದ ಕೆ.ಆರ್.ಎಸ್ ಪಕ್ಷ ರಾಜ್ಯದ ಪೊಲೀಸ್ ಠಾಣೆಗಳ ಕಥೆಯೇನು ಅನ್ನುವುದನ್ನು ಬಹಿರಂಗಪಡಿಸಿತ್ತು. ಆದರೆ ಬೊಮ್ಮಾಯಿ ನೇತೃತ್ವದ ಸರ್ಕಾರದ ಕಣ್ಣಿಗೆ ಕಾಣಿಸಲಿಲ್ಲ, ಕಿವಿಗೆ ಕೇಳಲಿಲ್ಲ. ಈಗ ಅದರ ಫಲ ಅನ್ನುವಂತೆ ಕಲಾಸಿಪಾಳ್ಯದ ಇನ್ಸ್ ಪೆಕ್ಟರ್ ಮತ್ತು ಸಬ್ ಇನ್ಸ್ ಪೆಕ್ಟರ್ ( Kalasipalyam police suspended) ಅಮಾನತುಗೊಂಡಿದ್ದಾರೆ.
ಬೆಂಗಳೂರು : ರೌಡಿಯೊಬ್ಬನ ವಿರುದ್ಧ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ಆರೋಪದ ಹಿನ್ನಲೆಯಲ್ಲಿ ಕಲಾಸಿಪಾಳ್ಯ ಠಾಣೆ ಇನ್ಸ್ ಪೆಕ್ಟರ್ ಹಾಗೂ ಸಬ್ ಇನ್ಸ್ ಪೆಕ್ಟರ್ ಸೇರಿ ಇಬ್ಬರನ್ನು ಅಮಾನತು ( Kalasipalyam police suspended) ಮಾಡಲಾಗಿದೆ. ಅಮಾನತುಗೊಂಡವರನ್ನು ಇನ್ಸ್ ಪೆಕ್ಟರ್ ಎಂ.ಎಲ್. ಚೇತನ್ ಕುಮಾರ್ ಹಾಗೂ ಸಬ್ ಇನ್ಸ್ ಪೆಕ್ಟರ್ ಪ್ರಸನ್ನಕುಮಾರ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ : Kalasipalyam police suspended : ಬಾಂಬೆ ಸಲೀಂ ವಿರುದ್ಧ ಕ್ರಮ ಕೈಗೊಳ್ಳಲು ಉದಾಸೀನ : ಕಲಾಸಿಪಾಳ್ಯ ಪೊಲೀಸ್ ಇನ್ಸ್ ಪೆಕ್ಟರ್ ಅಮಾನತು
ಏನಿದು ಪ್ರಕರಣ…?
ಬೆಂಗಳೂರಿನ ಸಿದ್ದಯ್ಯ ರಸ್ತೆಯ 2ನೇ ಕ್ರಾಸ್ ನಲ್ಲಿ ನೆಲೆಸಿರುವ ಮುಯೀಜ್ ಅಹಮ್ಮದ್ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು.ಈ ನಡುವೆ ಶಿವಾಜಿನಗರದ ಆಸ್ತಿ ವಿಚಾರವಾಗಿ ಅಹಮದ್ ಮತ್ತು ರಿಯಾಜ್ ನಡುವೆ ವಿವಾದ ಉಂಟಾಗಿತ್ತು. ಈ ವೇಳೆ ಸಮಸ್ಯೆ ಇತ್ಯರ್ಥ ಪಡಿಸಲು ರಿಯಾಜ್, ಶಿವಾಜಿ ನಗರದ ರೌಡಿ ಸಲೀಂ ಅಲಿಯಾಸ್ ಬಾಂಬೆ ಸಲೀಂನ ಸಹಚರರನ್ನು ಸಂಪರ್ಕಿಸಿದ್ದ.
ಇದಾದ ಬಳಿಕ ಸಲೀಂ ಸಹಚರರಾದ ಝಾಪರ್ ಮತ್ತು ಆಲಿ ಎಂಬವರು ಮುಯೀಜ್ ಅಹಮ್ಮದ್ ಮನೆಗೆ ತೆರಳಿ ವಿವಾದವನ್ನು ಬಗೆ ಹರಿಸಿಕೊಳ್ಳುವಂತೆ ರಿಯಾಜ್ ಪರವಾಗಿ ಒತ್ತಾಯಿಸಿದ್ದರು. ಮಾತ್ರವಲ್ಲದೆ ಜೈಲಿನಿಂದಲೇ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದ ಬಾಂಬೆ ಸಲೀಂ 8 ಲಕ್ಷ ರೂಪಾಯಿ ಕೊಡದಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದ. ಕಾಸು ಕೊಡದ ಕಾರಣ ಸಲೀಂ ಸಹಚರರು ಕಾರು ಅಡ್ಡಗಟ್ಟಿ ಬೆದರಿಕೆ ಹಾಕಿದ್ದರು.
ಈ ಸಂಬಂಧ ಮುಯೀಜ್ ಅಹಮ್ಮದ್ ಕಲಾಸಿಪಾಳ್ಯ ಠಾಣೆಗೆ ತೆರಳಿ ಚೇತನ್ ಕುಮಾರ್ ( M L Chethan Kumar ) ಅವರಿಗೆ ದೂರು ಸಲ್ಲಿಸಿದ್ದರು. ಈ ವೇಳೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ NCR ದಾಖಲಿಸಿಕೊಂಡಿದ್ದರು. ಇದಾದ ಬಳಿಕ ಜೈಲಿನಿಂದ ಜೀವ ಬೆದರಿಕೆ ಬರುವುದು ಹೆಚ್ಚಾಯ್ತು. ಹೀಗಾಗಿ ಆತಂಕಗೊಂಡ ಮುಯೀಜ್ ಅಹಮ್ಮದ್ ಕಾರಾಗೃಹ ಡಿಜಿಪಿ ಅಲೋಕ್ ಮೋಹನ್ ಗೆ ( Alok Mohan IPS ) ದೂರು ಸಲ್ಲಿಸಿದರು.
ಅಲೋಕ್ ಮೋಹನ್ ( Alok Mohan IPS ) ಈ ದೂರನ್ನು ಬೆಂಗಳೂರು ಪೊಲೀಸ್ ಆಯುಕ್ತರಿಗೆ ರವಾನಿಸಿದರು. ನಗರ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿ ( ch pratap reddy ips ) ಈ ಬಗ್ಗೆ ವಿಚಾರಣೆ ನಡೆಸುವಂತೆ ಸಿಸಿಬಿಗೆ ಸೂಚನೆ ಕೊಟ್ಟರು.
ಆಯುಕ್ತರ ಸೂಚನೆಯಂತೆ ಕಲಾಸಿಪಾಳ್ಯ ಠಾಣೆಯಲ್ಲಿ ಅಹಮದ್ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಬಾಂಬೆ ಸಲೀಂ ಸಹಚರರಾದ ಅಬ್ದುಲ್ ಜಾಫರ್, ಶೂಟರ್ ಖದೀಮ, ಇಮ್ರಾನ್, ಬಾಂಬೆ ರಿಯಾಜ್, ಖದೀರ್ ಹಾಗೂ ಆಲಿಯನ್ನು ಬಂಧಿಸಿದ್ದಾರೆ. ಧಾರವಾಡ ಕೇಂದ್ರ ಜೈಲಿನಲ್ಲಿದ್ದ ಬಾಂಬೆ ಸಲೀಂನನ್ನು ವಾರೆಂಟ್ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿ ಕ್ರಮ ಕೈಗೊಂಡಿದ್ದಾರೆ. ಬಳಿಕ ಸಿಸಿಬಿ ಆಯುಕ್ತರಿಗೆ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ಕಲ್ಯಾಸಿಪಾಳ್ಯ ಠಾಣೆಯ ಸಿಬ್ಬಂದಿಯ ನಿರ್ಲಕ್ಷ್ಯವನ್ನೂ ಉಲ್ಲೇಖಿಸಲಾಗಿತ್ತು.
ಇದೇ ವರದಿಯ ಆಧಾರದಲ್ಲಿ ಇದೀಗ ಇನ್ಸ್ ಪೆಕ್ಟರ್ ಎಂ.ಎಲ್. ಚೇತನ್ ಕುಮಾರ್ ಹಾಗೂ ಸಬ್ ಇನ್ಸ್ ಪೆಕ್ಟರ್ ಪ್ರಸನ್ನಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ.
Discussion about this post