ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆಯಲ್ಲಿ ಲೋಪವಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ದುರಂತ ಅಂದ್ರೆ ದೇಶದ ಪ್ರಧಾನಮಂತ್ರಿಯ ಭದ್ರತೆ ವಿಚಾರವೂ ರಾಜಕೀಯ ಬಣ್ಣ ಪಡೆದುಕೊಂಡಿರುವುದು. ಇದನ್ನು ವಿಪರ್ಯಾಸ ಅನ್ನದೆ ವಿಧಿಯಿಲ್ಲ. ಪಾಕಿಸ್ತಾನದ ಗಡಿಗಿಂತ 10 ಕಿಮೀ ದೂರದಲ್ಲಿ ಅತ್ಯಂತ ಬಿಗಿ ಭದ್ರತೆ ಅತೀ ಗಣ್ಯರ ಪರಿಸ್ಥಿತಿ ಹೀಗಾಗಿದೆ ಅಂದ್ರೆ ಪಂಜಾಬ್ ಸರ್ಕಾರ ತಲೆ ತಗ್ಗಿಸಲೇಬೇಕು.
ಅಂದ ಹಾಗೇ ಭಾರತದ ಪ್ರಧಾನಿಯ ಸಂಪೂರ್ಣ ರಕ್ಷಣೆಯ ಹೊಣೆ SPGಯದ್ದಾಗಿರುತ್ತದೆ. ವಿಶೇಷ ರೀತಿಯಲ್ಲಿ ತರಬೇತು ಪಡೆದ ಯೋಧರು ಇವರಾಗಿದ್ದು, Z+ ಭದ್ರತೆಯನ್ನು ಪ್ರಧಾನಿಯವರಿಗೆ ನೀಡಲಾಗುತ್ತದೆ. 36 ಮಂದಿ ಏಕಕಾಲಕ್ಕೆ ಪ್ರಧಾನಿಯವರಿಗೆ ಭದ್ರತೆ ನೀಡುತ್ತಾರೆ. ಇವರೊಂದಿಗೆ ಕೇಂದ್ರ ಮಟ್ಟದ ಕೆಳ ಭದ್ರತಾ ಪಡೆಗಳ ಸಿಬ್ಬಂದಿಯೂ ಕೈ ಜೋಡಿಸುತ್ತಾರೆ.
ಇನ್ನು ಪ್ರಧಾನಿಯ ಭದ್ರತೆಗೆ ನಿಯೋಜಿತರಾಗಿರುವ ಈ SPG ಯೋಧರು ಶಾರ್ಪ್ ಶೂಟರ್ ಗಳಾಗಿದ್ದು, ಒಂದು ನಿಮಿಷಕ್ಕೆ 850 ಗುಂಡು ಹಾರಿಸುವ ರೈಫಲ್ ಗಳನ್ನು ಹೊಂದಿರುತ್ತೆ. 500 ಮೀಟರ್ ದೂರದ ತನಕವೂ ಗುಂಡು ಹಾರಿಸುವ ಸಾಮರ್ಥ್ಯ ಇವರಿಗಿರುತ್ತದೆ.
ಇನ್ನು ಈ ಎಸ್ಪಿಜಿ ಸೇರುವ ಯೋಧರು ತಾವು ಯಾವುದೇ ವಿಧದಲ್ಲೂ ಟ್ರೇಡ್ ಯೂನಿಯನ್ ಆಗಲಿ, ಲೇಬರ್ ಯೂನಿಯನ್ ಆಗಲಿ ರಾಜಕೀಯ ಪಕ್ಷಗಳ ಜೊತೆ ಸಂಬಂಧ , ಸದಸ್ಯತ್ವ ಹೊಂದಿಲ್ಲ ಎಂದು ದೃಢೀಕರಿಸಬೇಕು. ಜೊತೆಗೆ ಸಾಮಾಜಿಕ ಸಂಘಟನೆ, ಸದಸ್ಯತ್ವ ಹೊಂದಿಲ್ಲ, ಮಾಧ್ಯಮಗಳ ಜೊತೆಗೆ ಸಂಪರ್ಕ ಹೊಂದುವುದಿಲ್ಲ, ಜೊತೆಗೆ ಯಾವುದೇ ಪುಸ್ತಕ ಬರೆಯೋದಿಲ್ಲ ಅನ್ನುವುದನ್ನು ಕೂಡಾ ಒಪ್ಪಿಕೊಳಬೇಕಾಗುತ್ತೆ.
ಎಸ್ ಪಿ ಜಿ ಸದಸ್ಯರು ಯಾವುದೇ ಸಮಾರಂಭದಲ್ಲಿ ಭಾಗವಹಿಸುವ ಹಾಗಿಲ್ಲ. ಸಭೆ, ಸಮಾರಂಭ ಉದ್ದೇಶಿಸಿ ಮಾತನಾಡುವುದು, ಪ್ರತಿಭಟನೆಯಲ್ಲಿ ಇವರು ಪಾಲ್ಗೊಳ್ಳುವಂತಿಲ್ಲ.
Discussion about this post