ಬೆಂಗಳೂರು : ದೇಶದಲ್ಲಿ ಕೊರೋನಾ ಅಬ್ಬರ ಕಡಿಮೆಯಾಗತೊಡಗಿದೆ. ಹೀಗಾಗಿ ಜನ ಕೂಡಾ ಕೊರೋನಾ ಆತಂಕವಿಲ್ಲದೆ ಬೀದಿಗಿಳಿದಿದ್ದಾರೆ. ಮುಂದೂಡಿದ ಮದುವೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಕೂಡಾ ಮರು ನಿಗದಿಯಾಗಿದೆ. ಮಾಸ್ಕ್, ದೈಹಿಕ ಅಂತರವನ್ನು ಮರೆತು ಜನ ಒಂದೆಡೆ ಸೇರುತ್ತಿದ್ದಾರೆ.ಈಗಾಗಲೇ ಮಾಸ್ಕ್ ರಹಿತವಾಗಿಯೇ ಜನ ಬೀದಿಗಿಳಿದಿದ್ದು ಮಾರುಕಟ್ಟೆಗಳನ್ನು ನೋಡಿದರೆ ಕೊರೋನಾ ಅನ್ನುವ ಸಾಂಕ್ರಾಮಿಕ ಸೋಂಕು ಇದೆ ಅನ್ನುವುದನ್ನು ಸುಳ್ಳು ಅಂದುಕೊಳ್ಳಬೇಕು.
ಈ ನಡುವೆ ಮಾಸ್ಕ್ ಧರಿಸುವುದು, ದೈಹಿಕ ಅಂತಕ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ದೇಶದಲ್ಲಿ ಶೀಘ್ರದಲ್ಲೇ 3ನೇ ಅಲೆ ಪ್ರಾರಂಭವಾಗಲಿದೆ ಅನ್ನುವ ಎಚ್ಚರಿಕೆಯನ್ನು ತಜ್ಞರು ಕೊಟ್ಟಿದ್ದಾರೆ. ಈ ಹಿಂದಿನ ತಜ್ಞರ ಹೇಳಿಕೆ ಪ್ರಕಾರ ಇಷ್ಟು ಹೊತ್ತಿಗೆ ಮೂರನೇ ಅಲೆ ಬರಬೇಕಾಗಿತ್ತು. ಲಸಿಕೆ ಮತ್ತು ಕೊರೋನಾ ನಿಯಮಗಳ ಭಯದಿಂದ ಮೂರನೇ ಅಲೆ ಮುಂದೂಡಿಕೆಯಾಗಿತ್ತು. ಆದರೆ ಈಗಿರುವ ಪರಿಸ್ಥಿತಿಯಲ್ಲಿ ಮೂರನೇ ಅಲೆ ಮುಂದೂಡಲು ಸಾಧ್ಯವೇ ಇಲ್ವಂತೆ.
ಆದರೆ ಈ ಆತಂಕದ ನಡುವೆ ಗುಡ್ ನ್ಯೂಸ್ ಕೂಡಾ ಸಿಕ್ಕಿದ್ದು, ಚಳಿಗಾಲದಲ್ಲಿ ಕೊರೋನಾ ಪ್ರಕರಣಗಳು ಏರಿಕೆಯಾದರೂ ಲಸಿಕಾ ಅಭಿಯಾನ ಉತ್ತಮವಾಗಿ ನಡೆಯುತ್ತಿರುವುದರಿಂದ 2ನೇ ಅಲೆಯ ತೀವ್ರತೆ ಮೂರನೇ ಅಲೆಯಲ್ಲಿ ಇರುವುದಿಲ್ವಂತೆ. ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಜನ ಸೋಂಕಿಗೆ ತುತ್ತಾಗಿದ್ದಾರೆ ಹೀಗಾಗಿ ಅವರಲ್ಲಿ ರೋಗ ನಿರೋಧಕ ಶಕ್ತಿ ಬೆಳೆದಿದೆ ಜೊತೆಗೆ ಲಸಿಕೆಯೂ ಕೂಡಾ ಮೂರನೇ ಅಲೆಯ ಅಬ್ಬರ ನಿಯಂತ್ರಿಸುವಲ್ಲಿ ದೊಡ್ಡ ಪಾತ್ರ ನಿಭಾಯಿಸಲಿದೆಯಂತೆ.
Discussion about this post