ನವದೆಹಲಿ : ಕೊನೆಗೂ ಸುದೀರ್ಘ ಕಾಲ ನಡೆದ ರೈತ ಹೋರಾಟಕ್ಕೆ ಜಯ ಸಿಕ್ಕಿದೆ. ವಿವಾದಿತ ಕೃಷಿ ಕಾಯ್ದೆ ಕುರಿತಂತೆ ಗಂಟೆಗಟ್ಟಲೆ ಭಾಷಣ ಮಾಡಿದ ಬಿಜೆಪಿ ನಾಯಕರು ಮುಖಭಂಗ ಅನುಭವಿಸಿದ್ದಾರೆ. ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮೂರು ವಿವಾದಿತ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ತಿರುವುದಾಗಿ ಘೋಷಿಸಿದ್ದಾರೆ.
ಪ್ರಾರಂಭದಲ್ಲಿ ದೇಶದ ರೈತರ ಸಮಸ್ಯೆಯ ಕುರಿತಂತೆ ಮಾತನಾಡಿದ ನರೇಂದ್ರ ಮೋದಿಯವರು ರೈತರ ಸಮಸ್ಯೆಗಳನ್ನು ಬಗೆಹರಿಸುವುದೇ ನಮ್ಮ ಸರ್ಕಾರದ ಆದ್ಯತೆ. ಸಣ್ಣ ಹಿಡುವಳಿ ರೈತರ ಸಮಸ್ಯೆಗಳನ್ನು ನಾನು ತಿಳಿದುಕೊಂಡಿದ್ದೇನೆ, ಹೀಗಾಗಿಯೇ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಕೃಷಿ ಮಾರುಕಟ್ಟೆ ಆಧುನೀಕರಣಗೊಳ್ಳುತ್ತಿದು ರೈತರು ಈಗ ಎಲ್ಲಿ ಬೇಕಾದರೂ ತಮ್ಮ ಬೆಳೆ ಮಾರಬಹುದು ಅಂದರು.
ಇದಾದ ಬಳಿಕ ಮೂರು ಕೃಷಿ ಕಾಯ್ದೆ ಪ್ರಸ್ತಾಪಿಸಿದ ನರೇಂದ್ರ ಮೋದಿಯವರು ಅನ್ನದಾತನ ಆರ್ಥಿಕ, ಸಾಮಾಜಿಕ ಸ್ಥಿತಿ ಸುಧಾರಿಸಲು ಕಾಯ್ದೆ ಜಾರಿಗೆ ತರಲಾಗಿತ್ತು. ಸಣ್ಣ ರೈತರ ಒಳಿತಿಗಾಗಿಯೇ ಈ ಕೃಷಿ ಕಾಯ್ದೆ ಇತ್ತು. ಇದರಲ್ಲಿರುವ ಕಾನೂನುಗಳು ರೈತರ ಪರವಾಗಿತ್ತು. ಆದರೆ ರೈತರ ಸಲಹೆ ಒಪ್ಪಿಕೊಂಡ ಮೇಲೂ ಕೆಲ ರೈತರು ಕಾಯ್ದೆ ವಿರೋಧಿಸುತ್ತಿದ್ದಾರೆ. ಹೀಗಾಗಿ ಮೂರು ಕೃಷಿ ಕಾಯ್ದೆ ವಾಪಸ್ ಪಡೆಯಲು ನಿರ್ಧರಿಸಲಾಗಿದೆ. ಹೀಗಾಗಿ ಹೋರಾಟದಲ್ಲಿರುವ ರೈತರು ಮನೆಗೆ ಮರಳಿ ಎಂದು ಮೋದಿ ಮನವಿ ಮಾಡಿದ್ದಾರೆ.
#WATCH | PM Narendra Modi says, "Whatever I did, I did for farmers. What I'm doing, is for the country. With your blessings, I never left out anything in my hard work. Today I assure you that I'll now work even harder, so that your dreams, nation's dreams can be realised." pic.twitter.com/pTWTEAut4P
— ANI (@ANI) November 19, 2021
Discussion about this post