ಕೇರಳ : ಮದ್ಯದಂಗಡಿಗಳ ಮುಂದೆ ಮದ್ಯ ಖರೀದಿಗಾಗಿ ಜನರು ಶಿಸ್ತಿನಿಂದ ಸಾಲಿನಲ್ಲಿ ನಿಲ್ಲುವವರನ್ನು ನೋಡಿ ನಾನೇ ಮುಜುಗರಕ್ಕೆ ಒಳಗಾಗಿದ್ದೇನೆ ಎಂದು ಕೇರಳ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಹೇಳಿದ್ದಾರೆ. ಬ್ಯಾಂಕ್ ಶಾಖೆಯೊಂದರ ಹತ್ತಿರಕ್ಕೆ ಮದ್ಯದಂಗಡಿ ಸ್ಥಳಾಂತರಿಸುವುದನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಹೈಕೋರ್ಟ್ಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ವೇಳೆ ನ್ಯಾಯಮೂರ್ತಿಗಳು ಈ ಮಾತು ಹೇಳಿದ್ದಾರೆ.
ಈ ಸಂಬಂಧ ಕೇರಳ ಅಬಕಾರಿ ಇಲಾಖೆಗೆ ನೋಟೀಸ್ ನೀಡಿರುವ ಹೈಕೋರ್ಟ್, ಮದ್ಯದಂಗಡಿಗಳ ಮುಂದೆ ಖರೀದಿದಾಗಿ ಸಾಲು ನಿಂತವರನ್ನು ಕೀಳಾಗಿ ಕಾಣಬಾರದು. ಜೊತೆಗೆ ಅವರಿಗೆ ಮುಜುಗರವಾಗುವಂಥ ಪರಿಸ್ಥಿತಿ ಇರಬಾರದು ಎಂದು ಅಭಿಪ್ರಾಯಪಟ್ಟಿದ್ದು, ಮದ್ಯಂಗಡಿಗೆ ಬರುವವರವನ್ನು ಗೌರವದಿಂದ ಕಾಣುವಂತೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಒಂದು ತಿಂಗಳ ಒಳಗೆ ವರದಿ ಸಲ್ಲಿಸುವಂತೆ ಕೇರಳ ಅಬಕಾರಿ ಇಲಾಖೆಗೆ ನ್ಯಾ| ದೇವನ್ ರಾಮಚಂದ್ರನ್ ನೇತೃತ್ವದ ನ್ಯಾಯಪೀಠ ಆದೇಶ ನೀಡಿದೆ.
ಹಾಗೇ ನೋಡಿದರೆ ಕೇರಳ ಹೈಕೋರ್ಟ್ ಮಾತುಗಳು ಸರಿಯಾಗಿಯೇ ಇದೆ, ಕೊರೋನಾ ಕಾಲದಲ್ಲಿ ಮದ್ಯದಂಗಡಿಗಳು ಅಗತ್ಯ ಸೇವೆಯ ವ್ಯಾಪ್ತಿಯಲ್ಲಿತ್ತು. ಅಷ್ಟೇ ಅಲ್ಲದೆ ಸರ್ಕಾರಕ್ಕೆ ಬೊಕ್ಕಸಕ್ಕೆ ದೊಡ್ಡ ಮಟ್ಟದಲ್ಲಿ ಆದಾಯ ಬರುವುದು ಮದ್ಯದಂಗಡಿಗಳಿಂದ ಅಂದ ಮೇಲೆ ಅವರನ್ನು ಗೌರವದಿಂದ ಕಾಣಬೇಕು ತಾನೇ. ಮುಂದಿನ ದಿನಗಳಲ್ಲಿ ಎಣ್ಣೆ ಖರೀದಿಗೆ ಬಂದವರನ್ನು ಹಾರ ಹಾಕಿ ಸ್ವಾಗತಿಸಬೇಕಾಗುತ್ತದೆ. ಈಗ ಹೇಳಿ ಕುಡುಕನಲ್ಲದ ಗಂಡನ ಕೊಡು ಅನ್ನುವ ಹಾಡಿನ ಕಥೆಯನ್ನು
People Who Buy Liquor Should Not Be Treated Like Cattle: Kerala High Court Directs Excise Commissioner To Ensure Proper Infrastructure At Liquor Store Kerala High Court Justice Devan Ramachandran
Discussion about this post