ನವದೆಹಲಿ : ಕೊರೋನಾ ಕಾರಣದಿಂದ ಎಲ್ಲಾ ವಿದೇಶ ಪ್ರವಾಸಗಳನ್ನು ರದ್ದುಗೊಳಿಸಿದ್ದ ಪ್ರಧಾನಿ ನರೇಂದ್ರ ಮೋದಿ, ದೊಡ್ಡ ಗ್ಯಾಪ್ ಬಳಿಕ ಇದೀಗ ಅಮೆರಿಕಾ ಪ್ರವಾಸ ಕೈಗೊಳ್ಳಲು ಸಜ್ಜಾಗಿದ್ದಾರೆ. ಅಮೆರಿಕಾ ಅಧ್ಯಕ್ಷ ಬೈಡೆನ್ ನೇತೃತ್ವದಲ್ಲಿ ಕ್ವಾಡ್ ( ಆಸ್ಟ್ರೇಲಿಯಾ, ಅಮೆರಿಕಾ, ಜಪಾನ್ ಹಾಗೂ ಭಾರತ ಸದಸ್ಯತ್ವದ ಸಮಿತಿ ) ಸಭೆ ನಿಗದಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಪ್ಟಂಬರ್ 22 ರಿಂದ 27ರವರೆಗೆ ಅಮೆರಿಕಾಗೆ ತೆರಳುವ ಸಾಧ್ಯತೆಗಳಿದೆ.
2019ರಲ್ಲಿ ಟ್ರಂಪ್ ಅಧ್ಯಕ್ಷರಾಗಿದ್ದ ವೇಳೆ ಅಮೆರಿಕಾಗೆ ಭೇಟಿ ನೀಡಿದ್ದ ಮೋದಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಾದ ಬಳಿಕ ಅಮೆರಿಕಾಗೆ ಹೋಗಿರಲಿಲ್ಲ.
ಈ ಪ್ರವಾಸ ಹಲವು ಉದ್ದೇಶಗಳನ್ನು ಹೊಂದಿದ್ದು, ಕ್ವಾಡ್ ಶೃಂಗ ಸಭೆಗೆ ತೆರಳಿದರೆ, ಅಮೆರಿಕಾ ಅಧ್ಯಕ್ಷರ ಜೊತೆ ದ್ವಿಪಕ್ಷೀಯ ಮಾತುಕತೆ, ಮತ್ತು ವಿಶ್ವ ಸಂಸ್ಥೆಯ 76ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಭಾಷಣ ಮಾಡಬಹುದಾಗಿದೆ.
Discussion about this post