ಬೆಂಗಳೂರು : ಕನ್ನಡ ಚಿತ್ರರಂಗವನ್ನು ವಿಶ್ವಮಟ್ಟಕ್ಕೆ ಒಯ್ದ ಚಿತ್ರಗಳ ಪೈಕಿ ಯಶ್ ಅಭಿನಯಮದ ಕೆಜಿಎಫ್ ಕೂಡಾ ಒಂದು. ಬಿಡುಗಡೆಯಾಗಿರುವ ಚಾಪ್ಟರ್ 1 ಈಗಾಗಲೇ ಚಿಂದಿ ಉಡಾಯಿಸಿದೆ. ಇನ್ನು ಚಾಪ್ಟರ್ 2 ಬಗ್ಗೆಯೂ ಸಾಕಷ್ಟು ನಿರೀಕ್ಷೆಗಳಿದೆ. ಆದರೆ ಕೊರೋನಾ ಮಹಾಮಾರಿಯ ಕಾರಣದಿಂದ ಹಾಕಿರುವ ಬಂಡವಾಳದ ಬಗ್ಗೆ ಆತಂಕವಿದೆ.
ಈ ನಡುವೆ ಕೆಜಿಎಫ್ ಚಾಪ್ಟರ್ 2 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದು ಅನುಮಾನ ಎನ್ನಲಾಗಿದ್ದು, ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುವ ಸಾಧ್ಯತೆಗಳಿದೆ. ಈ ಸಂಬಂಧ ಈಗಾಗಲೇ 255 ಕೋಟಿ ಮೊತ್ತದ ಮಾತುಕತೆಯೂ ನಡೆದಿದೆ ಅನ್ನುವ ಸುದ್ದಿಗಳು ಹರಿದಾಡುತ್ತಿದೆ.
ಈ ನಡುವೆ ಕೆಜಿಎಫ್ -2 ಚಿತ್ರದ ದಕ್ಷಿಣ ಭಾರತ ಭಾಷೆಗಳ ಸ್ಯಾಟ್ಲೈಟ್ ಹಕ್ಕನ್ನು ಝೀ ನೆಟ್ವರ್ಕ್ ಖರೀದಿಸಿದೆ. ವರ ಮಹಾಲಕ್ಷ್ಮಿ ದಿನ ಈ ಸಂಬಂಧ ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆಯೊಂದಿಗೆ ಜೀ ವಾಹಿನಿ ಒಪ್ಪಂದಕ್ಕೆ ಸಹಿ ಹಾಕಿದೆ. ಭಾರೀ ಮೊತ್ತಕ್ಕೆ ಕೆಜಿಎಫ್-2 ಸ್ಯಾಟ್ ಲೈಟ್ ಹಕ್ಕು ಖರೀದಿಯಾಗಿದೆ ಅನ್ನಲಾಗಿದೆ.
ನಿರ್ಮಾಪಕ ವಿಜಯ್ ಕಿರಗಂದೂರ್ ಒಪ್ಪಂದ ಪತ್ರವನ್ನು ಜೀ ಕನ್ನಡ ವಾಹಿನಿ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ ಅವರಿಗೆ ಹಸ್ತಾಂತರಿಸಿದ್ದು, ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳ ಸ್ಯಾಟ್ ಲೈಟ್ ಹಕ್ಕನ್ನು ಝೀ ಹೊಂದಲಿದೆ.
Discussion about this post