ತಿರುವನಂತಪುರಂ : ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜನಸಂಖ್ಯಾ ನಿಯಂತ್ರಣ ನೀತಿ ಜಾರಿಗೊಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಜೊತೆಗೆ ಕಡಿಮೆ ಮಕ್ಕಳನ್ನು ಹೊಂದಿರುವ ಕುಟುಂಬಕ್ಕೆ ಸರ್ಕಾರಿ ಸೌಲಭ್ಯಗಳನ್ನು ಕೂಡಾ ಅನೇಕ ರಾಜ್ಯ ಸರ್ಕಾರಗಳು ಘೋಷಿಸಿದೆ. ಇಂತಹ ಯೋಜನೆಗಳು ಮುಸ್ಲಿಂರನ್ನು ಟಾರ್ಗೇಟ್ ಮಾಡಿದೆ ಅನ್ನುವ ಆರೋಪಗಳು ಕೂಡಾ ಕೇಳಿ ಬಂದಿದೆ.
ಈ ನಡುವೆ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಕ್ಕೆ ಬಂಪರ್ ಆಫರ್ ಒಂದನ್ನು ಕೇರಳದ ಚರ್ಚ್ ಒಂದರ ಬಿಷಪ್ ಘೋಷಿಸಿದ್ದಾರೆ. ಸಿರೋ ಮಲಬಾರ್ ಚರ್ಚ್ನ ಮಾರ್ ಜೊಸೆಫ್ ಮಾಡಿರುವ ಘೋಷಣೆ ಪ್ರಕಾರ ತಮ್ಮ ಚರ್ಚ್ನ ವ್ಯಾಪ್ತಿಯಲ್ಲಿರುವ ಕ್ರಿಶ್ಚಿಯನ್ ದಂಪತಿಗಳಿಗೆ 5ಕ್ಕಿಂತ ಹೆಚ್ಚು ಮಕ್ಕಳಿದ್ದಲ್ಲಿ 4ನೇ ಮಗುವಿನ ನಂತರದ ಮಕ್ಕಳಿಗೆ ಚರ್ಚ್ನ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನಲ್ಲಿ ಉಚಿತ ಶಿಕ್ಷಣ ದೊರೆಯಲಿದೆ. ಜೊತೆಗೆ ಪ್ರತಿ ತಿಂಗಳು ಈ ಮಕ್ಕಳಿಗೆ 1500 ರೂಪಾಯಿ ಪ್ರೋತ್ಸಾಹ ಧನವೂ ಸಿಗಲಿದೆ.
ಅಂದ ಹಾಗೇ ಈ ಯೋಜನೆ ಪಡೆಯುವ ದಂಪತಿ 2000ನೇ ಇಸವಿಯ ನಂತರ ಮದುವೆಯಾಗಿರಬೇಕು ಎಂದು ಸಿರೋ ಮಲಬಾರ್ ಚರ್ಚ್ನ ಮಾರ್ ಜೊಸೆಫ್ ಘೋಷಿಸಿದ್ದಾರೆ.
Discussion about this post