ಕೊಚ್ಚಿ : ಇಡೀ ದೇಶದಲ್ಲಿ ಕೊರೋನಾ ಸೋಂಕು ಅಬ್ಬರಿಸುತ್ತಿದ್ದ ಸಂದರ್ಭದಲ್ಲಿ ವುಹಾನ ವೈರಸ್ ಅನ್ನು ಕಟ್ಟಿ ಹಾಕಿದ್ದ ಕೇರಳದಲ್ಲಿ ಇದೀಗ ಸೋಂಕು ಅಬ್ಬರಿಸುತ್ತಿದೆ. ಪರಿಸ್ಥಿತಿ ನೋಡಿದರೆ ಎರಡನೆ ಅಲೆಯ ಅಂತ್ಯವಾಗುವ ಮುನ್ನವೇ ಮೂರನೇ ಅಲೆ ಎದ್ದು ನಿಂತಿದೆ ಅನ್ನುವಂತಿದೆ ಪರಿಸ್ಥಿತಿ. ಇದೇ ಕಾರಣದಿಂದ ಕೇರಳದ ಅನೇಕ ಕಡೆಗಳಲ್ಲಿ ಲಾಕ್ ಡೌನ್ ವಿಧಿಸಲಾಗಿದೆ. ಹೀಗಾಗಿ ಹೊಟೇಲ್ ಗಳಲ್ಲಿ ಪಾರ್ಸೆಲ್ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗಿದೆ.
ಈ ನಡುವೆ ಏರುತ್ತಿರುವ ಕೋಳಿಮಾಂಸದ ದರ ಹೋಟೆಲ್ ಮಾಲೀಕರನ್ನು ಕಂಗಾಲು ಮಾಡಿದೆ. ದರ ಏರಿಕೆಯ ಹೊಡೆತದಿಂದ ತತ್ತರಿಸಿರುವ ಹೊಟೇಲ್ ಮಾಲೀಕರು ಇದೀಗ ಚಿಕನ್ ಐಟಂಗಳನ್ನು ಮೆನುವಿನಿಂದ ಡಿಲೀಟ್ ಮಾಡಿದ್ದಾರೆ. Kerala Hotel and Restaurant Association ಹೇಳುವ ಪ್ರಕಾರ ಕಳೆದ ಎರಡು ವಾರಗಳಿಗೆ ಹೋಲಿಸಿದರೆ ಕೋಳಿಮಾಂಸದ ದರ ದುಪ್ಪಟಾಗಿದೆ.
ಕೇರಳದ ಹೊಟೇಲ್ ಗಳೇ ಕೋಳಿಮಾಂಸದ ಖರೀದಿಯಲ್ಲಿ ಮುಂಚೂಣಿಯಲ್ಲಿದೆ.ಶೇ80ರಷ್ಟು ಕೋಳಿ ಮಾಂಸವನ್ನು ಹೊಟೇಲ್ ಗಳಿಗೆ ಖರೀದಿಸುತ್ತವೆ. ಆದರೆ ಲಾಕ್ ಡೌನ್ ಕಾರಣದಿಂದ ಗ್ರಾಹಕರು ಕೂತು ತಿನ್ನುವಂತಿಲ್ಲ. ಕೇವಲ ಪಾರ್ಸೆಲ್ ಗಳಿಗೆ ಅವಕಾಶ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಗ್ರಾಹಕರು ಕೂಡಾ ಸಿಗುತ್ತಿಲ್ಲ. ಈ ವೇಳೆ ಏರುತ್ತಿರುವ ಕೋಳಿ ಮಾಂಸದ ದರ ಹೊಟೇಲ್ ಮಾಲೀಕರನ್ನು ಮತ್ತಷ್ಟು ನಷ್ಟಕ್ಕೆ ದೂಡುವಂತೆ ಮಾಡಿದೆ. ಏರಿದ ಕೋಳಿ ಮಾಂಸದ ದರಕ್ಕೆ ಅನುಗುಣವಾಗಿ ಫುಡ್ ಐಟಂ ದರ ಏರಿಸಿದರೆ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿ ಕಾಡುತ್ತಿದೆ. ಹೀಗಾಗಿ ಚಿಕನ್ ಐಟಂಗಳನ್ನೇ ಮೆನುವಿನಿನಿಂದ ತಾತ್ಕಾಲಿಕವಾಗಿ ತೆಗೆಯಲಾಗಿದೆ.
ಆದರೆ ಪೌಲ್ಟಿ ಫಾರಂ ಮಾಲೀಕರ ವಾದವೇ ಬೇರೆ, ದರ ಏರಿಕೆ ಅನ್ನುವುದು ತಾತ್ಕಾಲಿಕ, ದರ ಏರಿದೆ ಎಂದು ಹೋಟೇಲ್ ಮಾಲೀಕರು ನಮ್ಮತ್ತ ಬೊಟ್ಟು ಮಾಡುತ್ತಿದ್ದಾರೆ. ಕೋಳಿ ಮಾಂಸದ ದರ ನೆಲ ಕಚ್ಚಿದ ಸಂದರ್ಭದಲ್ಲಿ ಯಾವುದಾದರೂ ಹೊಟೇಲ್ ಮಾಲೀಕರು ಚಿಕನ್ ಐಟಂ ದರವನ್ನು ಕಡಿಮೆ ಮಾಡಿದ ಉದಾಹರಣೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಕೇರಳದಲ್ಲಿ ಕೊರೋನಾ ಸೋಂಕಿನ ಅಲೆ ಭೀತಿ ಶುರುವಾಗಿದೆ. ಹೀಗಾಗಿ ಕೋಳಿ ಸಾಕಾಣಿಕೆದಾರರು ಹೊಸ ಮರಿಗಳ ಸಾಕಾಣಿಕೆ ಪ್ರಾರಂಭಿಸಿಲ್ಲ. ಒಂದು ವೇಳೆ ಮೂರನೇ ಅಲೆ ಅಬ್ಬರಿಸಿದರೆ ಬಂಡವಾಳ ನಷ್ಟವಾಗುವ ಭಯ ಅವರಲ್ಲಿದೆ. ಹೀಗಾಗಿ ದರ ಏರಿಕೆಯಾಗಿದೆ ಹೊರತು ಇದರಲ್ಲಿ ಯಾಲ ಲಾಭಿಗಳಿಲ್ಲ ಅಂದಿದ್ದಾರೆ.
Discussion about this post