ಇಂಗ್ಲೆಂಡ್ ಪ್ರವಾಸದಲ್ಲಿರುವ 23 ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರಿಗೆ 20 ದಿನಗಳ ವಿರಾಮದ ಸಮಯದಲ್ಲಿ ಕೊರೋನಾ ಸೋಂಕು ತಗುಲಿದ್ದು, ಗುರುವಾರ ತಂಡದೊಂದಿಗೆ ಅವರು ಡರ್ಹ್ಯಾಮ್ಗೆ ತೆರಳುವುದಿಲ್ಲ ಎಂದು ಸುದ್ದಿ ಸಂಸ್ಥಯೊಂದು ವರದಿ ಮಾಡಿದೆ.
ಇನ್ನು ಕ್ರಿಕೆಟ್ ಬಜ್ ವರದಿಯ ಪ್ರಕಾರ ಕೊರೋನಾ ಸೋಂಕಿಗೆ ತುತ್ತಾಗಿರುವ ಆಟಗಾರನನ್ನು ಪ್ರತ್ಯೇಕಿಸಲಾಗಿದ್ದು ಮುಂಬರುವ ಮೂರು ದಿನಗಳ ಅಭ್ಯಾಸ ಪಂದ್ಯಕ್ಕಾಗಿ ತಂಡದೊಂದಿಗೆ ಡರ್ಹಾಮ್ಗೆ ಅವರು ಪ್ರಯಾಣಿಸುವುದಿಲ್ಲ ಅಂತ ತಿಳಿಸಿದೆ.
ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (ಡಬ್ಲ್ಯುಟಿಸಿ) ಅಂತಿಮ ಸೋಲಿನ ನಂತರ ಭಾರತೀಯ ಕ್ರಿಕೆಟಿಗರು ಮೂರು ವಾರಗಳ ವಿರಾಮದಲ್ಲಿದ್ದರು. ಈ ನಡುವೆ ಇಂಗ್ಲೆಂಡ್ ನಲ್ಲಿ ಡೆಲ್ಟಾ ರೂಪಾಂತರ ವು ವ್ಯಾಪಕವಾಗಿರುವುದರಿಂದ ಹೊರಗೆ ಹೋಗದಂತೆ ಜಯ್ ಶಾ ಕ್ರಿಕೆಟಿಗರಿಗೆ ಎಚ್ಚರಿಕೆ ನೀಡಿದ್ದರು.
ಇದೀಗ ಒಬ್ಬ ಆಟಗಾರನಿಗೆ ರೋಗಲಕ್ಷಣವಿಲ್ಲದಿದ್ದರೂ ಕೊರೋನಾ ಪಾಸಿಟಿವ್ ಆಗಿದೆ ಅನ್ನುವುದನ್ನು ಬಿಸಿಸಿಐ ಒಪ್ಪಿಕೊಂಡಿದ್ದು, ಆಟಗಾರನ ಹೆಸರನ್ನು ಬಹಿರಂಗಪಡಿಸಿಲ್ಲ. ಸದ್ಯ ಆ ಆಟಗಾರ ಕ್ವಾರಂಟೈನ್ನಲ್ಲಿದ್ದಾರೆ. ಗುರುವಾರ ಅವರು ತಂಡದೊಂದಿಗೆ ಡರ್ಹ್ಯಾಮ್ಗೆ ಪ್ರಯಾಣಿಸುವುದಿಲ್ಲ ಎಂದಷ್ಟೇ ಬಿಸಿಸಿಐ ಹೇಳಿದೆ.
ಮಾಹಿತಿಗಳ ಪ್ರಕಾರ ಆ ಆಟಗಾರನಿಗೆ ಡೆಲ್ಟಾ ರೂಪಾಂತರ ಸೋಂಕು ತಗುಲಿದೆ ಎನ್ನಲಾಗಿದೆ.
Discussion about this post