ಹಿಮಾಚಲ ಪ್ರದೇಶ : ರಾಜ್ಯದಲ್ಲಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ವರುಣನನ ಅಬ್ಬರಕ್ಕೆ ಧರ್ಮಶಾಲಾ ಪೂರ್ತಿ ಮುಳುಗಿದ್ದು, ಧರ್ಮಶಾಲಾದ ಹಲವು ಕಟ್ಟಡಗಳು ನೀರಿನಿಂದ ಅವೃತವಾಗಿದೆ. ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ.
ಮಳೆ ನೀರನ್ನು ತಡೆದುಕೊಳ್ಳಲು ಧರ್ಮಶಾಲಾದ ಚರಂಡಿಗಳು ವಿಫಲವಾಗಿದ್ದು, ಮಳೆ ನೀರು ಹರಿದು ಹೋಗಲು ಸಾಧ್ಯವಾಗದೆ ನೀರು ತನ್ನ ಹಾದಿಯನ್ನೇ ಬದಲಿಸಿ ಹರಿದುಕೊಂಡು ಹೋಗಿದೆ. ಇದರಿಂದಾಗಿ ಬಹುತೇಕ ಕಡೆಗಳಲ್ಲಿ ಕಾರು, ಬೈಕು ನೀರಿನಲ್ಲಿ ತೇಲಿ ಹೋಗಿದೆ.
ಮಳೆಯ ಅಬ್ಬರದಿಂದ ಭಗ್ಸುನಾಗ್ ನಲ್ಲಿರುವ ಸರ್ಕಾರಿ ಶಾಲೆಯ ಕಟ್ಟಡಕ್ಕೆ ಹಾನಿಯಾಗಿದೆ. ಜೊತೆಗೆ ಅಕ್ಕ ಪಕ್ಕದ ಹೋಟೆಲ್ ಗಳು ಮಳೆ ನೀರಿನಲ್ಲಿ ಮುಳುಗಿ ನಿಂತಿದೆ. ಮಾಂಜ್ಹಿ ಖಾದ್ ನಲ್ಲಿ ಎರಡು ಕಟ್ಟಡಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಮಂಡಿ ಪಠಾಣ್ ಕೋಟಿ ಹೆದ್ದಾರಿಯ ಸೇತುವೆಯೊಂದು ಸಂಪೂರ್ಣವಾಗಿ ಹಾನಿಗೊಂಡಿದ್ದು, ಎರಡು ಬದಿಯಲ್ಲಿ ವಾಹನ ಸಂಚಾರವನ್ನು ತಡೆಯಲಾಗಿದೆ.
ಇನ್ನು ಹಲವು ಕಡೆಗಳಲ್ಲಿ ಭೂಕುಸಿತದ ಭೀತಿ ಎದುರಾಗಿದ್ದು, ಅಪಾಯದಲ್ಲಿರುವ ಪ್ರದೇಶದಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ. ಜುಲೈ 16ರ ತನಕ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ ಹವಮಾನ ಇಲಾಖೆ ತಿಳಿಸಿದ್ದು, ಮುಂದೇನು ಕಾದಿದೆಯೋ ಎಂದು ಜನ ಆತಂಕದಲ್ಲಿದ್ದಾರೆ.
Discussion about this post