ನವದೆಹಲಿ : ಮಳೆ ಗಾಳಿಯಿಂದ ಜಾಮಾ ಮಸೀದಿಗೆ ಹಾನಿಯಾಗಿದ್ದು, ದಯವಿಟ್ಟು ರಿಪೇರಿ ಮಾಡಿಸಿಕೊಡಿ ಎಂದು ಇಮಾಮ್ ಒಬ್ಬರು ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಚಂಡಮಾರುತದ ಪರಿಣಾಮ ಭಾರಿ ಮಳೆ ಹಾಗೂ ಗಾಳಿಯಿಂದ ದೆಹಲಿಯ ಜಾಮಾ ಮಸೀದಿಗೆ ಹಾನಿಯಾಗಿದೆ. ಇದನ್ನು ರಿಪೇರಿ ಮಾಡಬೇಕಾದರೆ ಭಾರತೀಯ ಪುರಾತತ್ವ ಇಲಾಖೆಯ ಅನುಮತಿ ಬೇಕು. ಭಾರತೀಯ ಪುರಾತತ್ವ ಇಲಾಖೆಯ ಅನುಮತಿ ಇಲ್ಲದ ಹೊರತು ಇಲ್ಲಿ ಯಾವುದೇ ಕಾಮಗಾರಿಗಳನ್ನು ನಡೆಸುವ ಹಾಗಿಲ್ಲ.
ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಮಸೀದಿಯ ಶಾಹಿ ಇಮಾಮ್ ಬುಖಾರಿ, ಭಾರತೀಯ ಪುರಾತತ್ವ ಇಲಾಖೆಗೆ ನಿರ್ದೇಶನ ಕೊಟ್ಟು ದುರಸ್ತಿ ಕಾರ್ಯ ನಡೆಸಿಕೊಡಿ ಅಂದಿದ್ದಾರೆ.
17ನೇ ಶತಮಾನದ ಮಸೀದಿಯ ಕಟ್ಟಡದ ಹಲವು ಕಲ್ಲುಗಳು ಶಿಥಿಲಾವಸ್ಥೆಯಲ್ಲಿದೆ. ಲಾಕ್ ಡೌನ್ ಕಾರಣದಿಂದ ಮಸೀದಿಗೆ ಸಾರ್ವಜನಿಕರ ಪ್ರವೇಶವಿಲ್ಲ. ಹೀಗಾಗಿ ಚಂಡಮಾರುತ ಪರಿಣಾಮ ಮಸೀದಿಯ ಕಟ್ಟಡದ ಒಂದು ಭಾಗ ಕುಸಿದಾಗ ಅಪಾಯ ಸಂಭವಿಸಿಲ್ಲ. ಆದರೆ ಮುಂದಿನ ದಿನಗಳನ್ನು ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ದಯವಿಟ್ಟು ರಿಪೇರಿ ಮಾಡಿಸಿಕೊಡಿ ಎಂದು ಶಾಹಿ ಇಮಾಮ್ ಬುಖಾರಿ ಮನವಿ ಮಾಡಿದ್ದಾರೆ.
Discussion about this post