ನವದೆಹಲಿ : ದಿನದಿಂದ ದಿನಕ್ಕೆ ದೇಶದಲ್ಲಿ ಕೊರೋನಾ ಸೋಂಕಿನ ಅಬ್ಬರ ಏರಲಾರಂಭಿಸಿದೆ. ಅದರಲ್ಲೂ ಒಮಿಕ್ರೋನ್ ರೂಪಾಂತರಿ ವೈರಸ್ ಸೋಂಕಿತರ ಸಂಖ್ಯೆ ಏರುಗತಿಯಲ್ಲಿದ್ದು, ದೇಶದಲ್ಲಿ ಮೂರನೇ ಅಲೆಗೆ ಈಗಾಗಲೇ ಮುನ್ನುಡಿ ಬರೆದಾಗಿದೆ. ಜನ ಇನ್ನು ಎಚ್ಚರಿಕೆ ಮರೆತು ಓಡಾಡಿದ್ರೆ ಮೂರನೇ ಅಲೆಯನ್ನು ದೇವರಿಂದಲೂ ನಿಯಂತ್ರಿಸಲು ಸಾಧ್ಯವಿಲ್ಲ. ಹೀಗಾಗಿ ಮತ್ತೆ ಲಾಕ್ ಡೌನ್ ಜಾರಿಯಾದರೂ ಅಚ್ಚರಿಯಿಲ್ಲ.
ಈ ನಡುವೆ ದೇಶದ ವಿವಿಧ ರಾಜ್ಯಗಳಲ್ಲಿ ಒಮಿಕ್ರೋನ್ ಭಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಬಿಹಾರದಲ್ಲಿ ಕೊರೋನಾ ಪ್ರಕರಣಗಳು ಸಂಖ್ಯೆ ಅತ್ಯಂತ ವೇಗವಾಗಿ ಏರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಪಾಟ್ನಾದ ನಳಂದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ 87 ಮಂದಿ ವೈದ್ಯರು ಚೈನಾ ವೈರಸ್ ಗೆ ತುತ್ತಾಗಿದ್ದಾರೆ. ಇದರಲ್ಲಿ ಆಸ್ಪತ್ರೆಯ 17 ಮಂದಿ ಕಿರಿಯ ವೈದ್ಯರೂ ಸೇರಿದ್ದಾರೆ. ಅದೃಷ್ಟ ಅಂದ್ರೆ ಸೋಂಕಿಗೆ ಒಳಗಾದ ಕೆಲವರು ಸೌಮ್ಯ ಲಕ್ಷಣಗಳನ್ನು ಹೊಂದಿದ್ದರೆ ಉಳಿದವರು ಲಕ್ಷಣ ರಹಿತರಾಗಿದ್ದಾರೆ. ಸೋಂಕಿತರನ್ನು ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ಇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
Discussion about this post