ಸೇನಾ ನೆಲೆಯ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದ ವೇಳೆ ಕಾರ್ಯಾಚರಣೆ ( 3 Soldiers Killed)
ರಾಜೌರಿಯಿಂದ 25 ಕಿ.ಮೀ ದೂರದಲ್ಲಿ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಸೇನಾ ಪಡೆ ಹೊಡೆದುರುಳಿಸಿದೆ. ಸೇನಾ ಶಿಬಿರದ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಲು ಮುಂದಾದ ವೇಳೆ ಈ ಕಾರ್ಯಾಚರಣೆ ನಡೆದಿದೆ. ಈ ವೇಳೆ ಮೂವರು ಸೈನಿಕರು ಹುತ್ಮಾತರಾಗಿದ್ದಾರೆ. ( 3 Soldiers Killed)
ದರ್ಹಾಲ್ ಏರಿಯಾದ ಬುದ್ಧ ಕನಾದಿ ಸಮೀಪದ ಪರ್ಗಾಲ್ನ ಸೇನಾ ಶಿಬಿರದ ಸಮೀಪ ಈ ಘಟನೆ ನಡೆದಿದ್ದು, ರಕ್ಷಣಾ ಬೇಲಿಯನ್ನು ದಾಟಿ ಉಗ್ರರು ಬರಲು ಯತ್ನಿಸಿದಾಗ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಉಗ್ರರು ಆತ್ಮಾಹುತಿ ದಾಳಿ ಮಾಡಿದ್ದಾರೆ. ಘಟನೆಯಲ್ಲಿ ಐವರು ಯೋಧರಿಗೆ ಗಾಯಗಳಾಗಿದ್ದು, ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ : Heart attack : ಹೃದಯಾಘಾತದಿಂದ ಪಿಯುಸಿ ವಿದ್ಯಾರ್ಥಿ ಸಾವು
ಬುದ್ಗಾಮ್‌ನಲ್ಲಿ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಕೊಂದ ಬೆನ್ನಲ್ಲೇ ಈ ದಾಳಿ ನಡೆದಿದೆ. ಕಾರ್ಯಾಚರಣೆ ಇನ್ನು ಪ್ರಗತಿಯಲ್ಲಿದೆ.
Discussion about this post