ಕಾಂಗ್ರೆಸ್ ಗೆ ಬಂದ 4 ವರ್ಷದಲ್ಲಿ ಜಮೀರ್ (zameer ahmed) ಕರ್ನಾಟಕದ ಮುಸ್ಲಿಂರ ನಾಯಕನಾಗಿ ಬೆಳೆದು ನಿಂತಿದ್ದಾರೆ
ಬೆಳಗಾವಿ : ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ಕದನ ಪ್ರಾರಂಭವಾಗಿದೆ. ಚುನಾವಣೆ ನಡೆಯಬೇಕು, ಫಲಿತಾಂಶ ಬರಬೇಕು, ಗೆಲ್ಲಬೇಕು, ಹೈಕಮಾಂಡ್ ಒಪ್ಪಬೇಕು ಇಷ್ಟೆಲ್ಲಾ ಪ್ರಕ್ರಿಯೆ ಬಾಕಿ ಇದ್ದರೂ ಕಾಂಗ್ರೆಸ್ ನಲ್ಲಿ ವಿಧಾನಸೌಧದ ಮೂರನೇ ಮಹಡಿ ಹತ್ತಲು ಸಿಕ್ಕಾಪಟ್ಟೆ ನೂಕು ನುಗ್ಗಲು. ಕೆಲ ನಾಯಕರಂತೂ ಲಕ್ ಹೊಡೆಯಬಹುದು ಅನ್ನುವ ನಿರೀಕ್ಷೆಯಲ್ಲಿದ್ದಾರೆ.(zameer ahmed)
ಈ ನಡುವೆ ಜಮೀರ್ ಅಹ್ಮದ್ ಖಾನ್ (zameer ahmed) ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗ್ತಾರೆ ಎಂದು ವಿರಕ್ತ ಮಠದ ಕುಮಾರೇಶ್ವರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಜಿಲ್ಲೆಯ ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ನಡೆದ ಭಾವೈಕ್ಯತೆ ಸಮಾರಂಭದಲ್ಲಿ ಮಾತನಾಡಿದ ಅವರು ಮಹಾಂತೇಶ್ ಕೌಜಲಗಿ ಮುಂದೆ ಶಾಸಕರಾದರೆ,ಜಮೀರ್ ಮುಂದೆ ಸಿಎಂ ಆಗ್ತಾರೆ ಅಂದಿದ್ದಾರೆ.
ಇದನ್ನೂ ಓದಿ : 68th National Film Awards : 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಫುಲ್ ಲಿಸ್ಟ್ ಇಲ್ಲಿದೆ
ಹಿಂದು ಮುಸ್ಲಿಂ ಭಾವೈಕ್ಯತೆ ಜಮೀರ್ ಅವರಲ್ಲೂ ಇದೆ. ಜಮೀರ್(zameer ahmed) ಹೆಸರು ರಾಜ್ಯದಲ್ಲಿ ತುಂಬಾ ಹೆಸರುವಾಸಿಯಾಗಿದೆ. ಅವರು ಕೇವಲ ಮುಸ್ಲಿಂ ನಾಯಕನಷ್ಟೇ ಅಲ್ಲ. ಎಲ್ಲಾ ಸಮುದಾಯಕ್ಕೂ ಸಹಾಯ ಮಾಡಿದ ಹಿರಿಮೆ ಅವರದ್ದು ಎಂದು ಕುಮಾರೇಶ್ವರ ಸ್ವಾಮೀಜಿ ಜಮೀರ್ ಅವರನ್ನು ಹೊಗಳಿ ಅಟ್ಟಕೇರಿಸಿದ್ದಾರೆ.
ನಟಿ ಜೊತೆ ವಿವಾಹಿತನ ನಟನ ಪ್ರೇಮ ಪ್ರಸಂಗ : ನಡು ರಸ್ತೆಯಲ್ಲೇ ಚಳಿ ಬಿಡಿಸಿದ ಪತ್ನಿ
ಅನೈತಿಕ ಸಂಬಂಧ ಅನ್ನುವುದು ನಿಧಾನ ವಿಷ ಎಂದು ಗೊತ್ತಿದ್ದರೂ ಚಟ ಬಿಡಬೇಕಲ್ವ. ಹೀಗೆ ನಟನೊಬ್ಬ ಪತ್ನಿಗೆ ಕೈ ಕೊಟ್ಟ ಕರ್ಮಕ್ಕೆ ನಡು ರಸ್ತೆಯಲ್ಲೇ ಧರ್ಮದೇಟು ತಿಂದಿದ್ದಾನೆ
ಜನ ಸಾಮಾನ್ಯರ ಅನೈತಿಕ ಸಂಬಂಧದ ಗಲಾಟೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ. ಹಾಗಿದ್ದ ಮೇಲೆ ಸೆಲೆಬ್ರೆಟಿಗಳ ಅನೈತಿಕ ಸಂಬಂಧದ ಕಥೆ ಹೇಳಬೇಕಾ. ಮೊನ್ನೆ ಮೊನ್ನೆ ತನಕವೂ ಇದೇ ಕರ್ಮಕ್ಕೆ ಪವಿತ್ರಾ ಲೋಕೇಶ್ ಹಾಗೂ ನರೇಶ್ ಸುದ್ದಿಯಲ್ಲಿದ್ದರು. ಇದೇ ಕಾರಣಕ್ಕೆ ನರೇಶ್ ಪತ್ನಿ ರಮ್ಯಾ ಚಪ್ಪಲಿ ಕೈಗೆತ್ತಿಕೊಂಡಿದ್ದರು. ಇದೀಗ ಇಂತಹುದೇ ಸುದ್ದಿ ದೂರದ ಒಡಿಸ್ಸಾದಿಂದ ಬಂದಿದೆ. ಒಡಿಯಾ ಚಿತ್ರರಂಗದ ಬಾಬುಶಾನ್ ಮೊಹಂತಿ ಮತ್ತು ನಟಿ ಪ್ರಕೃತಿ ವಿಶ್ರಾ ಪರಸ್ಪರ ಪ್ರೀತಿಸುತ್ತಿದ್ದಾರೆ. ಜೊತೆಗೆ ಸುತ್ತಾಟಗಳು ಜೋರಾಗಿಯೇ ಸಾಗಿತ್ತು. ಆದರೆ ಬಾಬುಶಾನ್ ಮೊಹಂತಿ ವಿವಾಹಿತ ಅನ್ನುವುದು ಗಮನಿಸಬೇಕಾದ ಅಂಶ.
ಗಂಡ ದಾರಿ ತಪ್ಪಿರುವುದನ್ನು ತಿಳಿಸಿದ ಬಾಬುಶಾನ್ ಮೊಹಂತಿ ಪತ್ನಿ ತೃಪ್ತಿ ಕೆಂಡಾಮಂಡಲರಾಗಿದ್ದಾರೆ. ಅನೇಕ ಸಲ ಈ ಬಗ್ಗೆ ಕಿತ್ತಾಟಗಳು ನಡೆದಿತ್ತು. ಆದರೆ ಗಂಡ ಸುಧಾರಿಸಿರಲಿಲ್ಲ. ಮತ್ತೊಂದು ಹೆಣ್ಣಿನ ಬಾಳು ಹಾಳಾಗುತ್ತಿದೆ ಅನ್ನುವುದು ಗೊತ್ತಿದ್ದರೂ ಪ್ರಕೃತಿ ಮಿಶ್ರಾ ಮೊಹಂತಿ ಸಂಬಂಧ ತೊರೆದಿರಲಿಲ್ಲ. ಹೀಗಾಗಿಯೇ ಇಬ್ಬರ ಸಂಬಂಧ ಅಂತ್ಯಗೊಳಿಸಲು ಬೀದಿಗಿಳಿದ ತೃಪ್ತಿ, ಗಂಡ ಹಾಗೂ ಆತನ ಪ್ರೇಯಸಿ ಜೊತೆಗೆ ಹೋಗುತ್ತಿರುವ ವೇಳೆಯಲ್ಲಿ ಕಾರು ಅಡ್ಡ ಹಾಕಿ ನಾಲ್ಕು ಏಟು ಕೊಟ್ಟಿದ್ದಾರೆ.
Read : sr viswanath birthday : 3 ಟನ್ ಮಟನ್, 5 ಟನ್ ಚಿಕನ್ 20 ಸಾವಿರ ಮೊಟ್ಟೆ : ಬಿಡಿಎ ಅಧ್ಯಕ್ಷರ ಅದ್ದೂರಿ ಬರ್ತ್ ಡೇ
ಆದರೆ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಬಾಬುಶಾನ್ ಮೊಹಂತಿ, ನಾನು ಪ್ರಕೃತಿ ಜೊತೆ ಸಿನಿಮಾ ಮಾಡಿದ್ದು ನ್ನ ಕುಟುಂಬದವರಿಗೆ ನೋವು ತಂದಿದೆ ಅನ್ನುವುದು ಗೊತ್ತಿರಲಿಲ್ಲ. ಕುಟುಂಬದವರಿಗೆ ಇಷ್ಟ ಇಲ್ಲ ಅಂದ್ರೆ ನಾನು ಪ್ರಕೃತಿ ಜೊತೆ ಸಿನಿಮಾ ಮಾಡುವುದಿಲ್ಲ. ಮಾತ್ರವಲ್ಲದೆ ಭವಿಷ್ಯದಲ್ಲಿ ಯಾವ ನಟಿಯ ಜೊತೆಗೂ ಸಿನಿಮಾ ಮಾಡೋದಿಲ್ಲ ಅಂದಿದ್ದಾರೆ. ಇನ್ನು ಈ ಗಲಾಟೆ ಸಂಬಂಧ ಪ್ರಕೃತಿ ತಾಯಿ ಮಗಳ ಮೇಲೆ ಹಲ್ಲೆಯಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಈ ಸಂಬಂಧ ಇದೀಗ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Discussion about this post