ಬಳ್ಳಾರಿ : ಮದುವೆಯಾಗದೇ ಹುಚ್ಚು ಬಿಡೋದಿಲ್ಲ, ಹುಚ್ಚು ಬಿಡದೆ ಮದುವೆಯಾಗಲ್ಲ ಅನ್ನುವುದು ಹಳೆಯ ಗಾದೆ ಮಾತು.
ಹೀಗೆ ಮದುವೆ ಹುಚ್ಚು ಹತ್ತಿಸಿಕೊಂಡಿದ್ದ ಯುವಕನೊಬ್ಬ ಮದುವೆ ಮಾಡಿಸಿ ಎಂದು ಮೊಬೈಲ್ ಟವರ್ ಏರಿ ಕುಳಿತ ಘಟನೆ ಬಳ್ಳಾರಿ ಹೊಸಪೇಟೆಯ ಮರಿಯಮ್ಮನಹಳ್ಳಿಯಲ್ಲಿ ನಡೆದಿದೆ.
ಆರನೇ ವಾರ್ಡ್ ಯುವಕ ಚಿರಂಜೀವಿ ಗೋಸಂಗಿ (30) ಹಾಗೂ ಪಕ್ಕದ ಮನೆಯ ಉಮಾ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರ ಮನೆಯವರೂ ಮದುವೆಗೂ ಒಪ್ಪಿದ್ದಾರೆ. ಆದರೆ ಕೊರೋನಾ ಕಾರಣದಿಂದ ಮದುವೆ ವಿಳಂಭವಾಗುತ್ತಿದೆ. ಇದರಿಂದ ಬೇಸತ್ತ ಚಿರಂಜೀವಿ, ಕಂಠ ಪೂರ್ತಿ ಕುಡಿದು ಮೊಬೈಲ್ ಟವರ್ ಏರಿ ಬೇಗ ಮದುವೆ ಮಾಡಿ ಎಂದು ಹುಚ್ಚಾಟ ತೋರಿಸಿದ್ದಾನೆ.
ಸ್ಥಳಕ್ಕೆ ಸಿಪಿಐ ವಸಂತ ವಿ ಅಸೋದೆ, ಅಪರಾಧ ವಿಭಾಗದ ಪಿಎಸ್ಐ ಬಿ ಮೀನಾಕ್ಷಿ, ಸಿಬ್ಬಂದಿ ಹಾಗೂ ಸ್ಥಳಕ್ಕೆ ದೌಡಾಯಿಸಿ ಯುವಕನ ಮನವೊಲಿಸಿ ಯತ್ನಿಸಿದ್ದಾರೆ. ತಕ್ಷಣ ಮೊಬೈಲ್ ಟವರ್ ಏರಿದ ಯುವಕರ ತಂಡ ಚಿರಂಜೀವಿಯನನ್ನು ಕೆಳಗಿಳಿಸಿ ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕ ದಾಖಲಿಸಿದ್ದಾರೆ.
Discussion about this post