ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲು ಹೈಕಮಾಂಡ್ ನಿರ್ಧರಿಸಿದೆಯಂತೆ
ಬೆಂಗಳೂರು : ರಾಜ್ಯ ಬಿಜೆಪಿಯ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿದ್ದ ದೆಹಲಿ ನಾಯಕರು, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿಗೆ ಹೊಸ ಮುಖಗಳನ್ನು ಪರಿಚಯಿಸಲು ನಿರ್ಧರಿಸಿದ್ದಾರೆ. ಹಿರಿಯ ನಾಯಕರೆಂದು ಕರೆಸಿಕೊಂಡವರು ಹಿರಿತನ ಮೆರೆಯದೆ 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಹೀನಾಯವಾಗಿ ಸೋಲಿಸಿದ್ದರು. ಹೀಗಾಗಿಯೇ ವಿಜಯೇಂದ್ರ ( B. Y. Vijayendra )ಪಟ್ಟಾಭಿಷೇಕ ನಡೆಯಲಿದೆ ಅನ್ನಲಾಗಿದೆ.
ಸೋಲಿನ ನಂತರವಾದ್ರೂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ರೂಪಿಸುತ್ತಾರೆ ಅಂದು ಕೊಂಡ್ರೆ ಅಲ್ಲೂ ದೆಹಲಿಯ ಬಿಜೆಪಿ ನಾಯಕರಿಗೆ ರಾಜ್ಯ ನಾಯಕರು ನಿರಾಶೆಯ ಸುದ್ದಿ ಕೊಟ್ಟಿದ್ದಾರೆ. ಹೀಗಾಗಿ ಇದೀಗ ರಾಜ್ಯ ಬಿಜೆಪಿಗೆ ಹೊಸ ಶಕ್ತಿ ತುಂಬಲು ಬಿಜೆಪಿ ಹೈಕಮಾಂಡ್ ಪ್ರವೇಶವಾಗಿದೆ.
ಈ ನಿಟ್ಟಿನಲ್ಲಿ ಬಿಜೆಪಿ ಹೊಸ ರಾಜ್ಯಾಧ್ಯಕ್ಷರ ನೇಮಕ ಕುರಿತಂತೆ ಚರ್ಚೆಗಳು ದೆಹಲಿಯಲ್ಲಿ ನಡೆದಿದ್ದು, ಜೆಡಿಎಸ್ ಬಿಜೆಪಿ ಮೈತ್ರಿಯನ್ನು ಸರಿ ತೂಗಿಸಿಕೊಂಡು ಹೋಗಬಲ್ಲ ನಾಯಕನಿಗಾಗಿ ತಲಾಶ್ ನಡೆಸಲಾಗಿತ್ತು. ಜೊತೆಗೆ ಜಾತಿ ಲೆಕ್ಕಚಾರವನ್ನೂ ನಡೆಸಿ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲು ಹೈಕಮಾಂಡ್ ನಿರ್ಧರಿಸಿದೆಯಂತೆ. ಒಂದು ವೇಳೆ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದರೆ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪ್ರತಿಪಕ್ಷದ ನಾಯಕನ ಹುದ್ದೆ ಕೈ ತಪ್ಪಲಿದೆ. ಮಾತ್ರವಲ್ಲದೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜೀ ಬಳಗಕ್ಕೂ ಸಾಕಷ್ಟು ಹಿನ್ನಡೆಯಾಗಲಿದೆ.
Read This : varthur santhosh tiger nail pendant ಪ್ರಕರಣ : ನಟ ದರ್ಶನ್ ರನ್ನು ತಕ್ಷಣ ಬಂಧಿಸಿ
ಇನ್ನು ಈಗಾಗಲೇ ರಾಜ್ಯದ ಕೆಲ ನಾಯಕರನ್ನು ದೆಹಲಿಗೆ ಕರೆಸಿಕೊಂಡಿರುವ ವರಿಷ್ಠರು, ಜೆಡಿಎಸ್ ಜೊತೆಗಿನ ಮೈತ್ರಿ ಕುರಿತಂತೆ ಬಹಿರಂಗ ಹೇಳಿಕೆ ಕೊಟ್ಟ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಅನ್ನುವ ಮಾಹಿತಿಗಳು ಲಭ್ಯವಾಗಿದೆ.
ನಾನು ಬಿಎಸ್ವೈ ಪುತ್ರ ಅನ್ನುವ ಕಾರಣಕ್ಕಾಗಿ ನನ್ನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡೋದಿಲ್ಲ. ಆದರೆ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಕುರಿತಂತೆ ನನಗೆ ಯಾವುದೇ ಮಾಹಿತಿಗಳಿಲ್ಲ. ಯಡಿಯೂರಪ್ಪನವರು ಪುತ್ರನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಅನ್ನುವುದು ಸುಳ್ಳು ಎಂದು ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಇನ್ನು ಪ್ರತಿಪಕ್ಷದ ನಾಯಕನ ಆಯ್ಕೆಯ ವಿಳಂಭವನ್ನು ಒಪ್ಪಿಕೊಂಡಿರುವ ವಿಜಯೇಂದ್ರ, ಸೂಕ್ತ ಸಮಯದಲ್ಲಿ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಅಂದಿದ್ದಾರೆ.
Discussion about this post