ಯಾರು ಯಾವ ಕ್ಷೇತ್ರಕ್ಕೆ ನಿಲ್ಲಬೇಕು ಅನ್ನುವುದನ್ನು ಪಕ್ಷಗಳು ಘೋಷಿಸುವುದು ಸಂಪ್ರದಾಯ. ಆದರೆ ಒಂದು ಹೆಜ್ಜೆ ಮುಂದೆ ಹೋಗಿರುವ ಯಡಿಯೂರಪ್ಪ (Yediyurappa) ಶಿಕಾರಿಪುರದಲ್ಲಿ ತಮ್ಮ ಮಗನಿಗೆ ಟಿಕೆಟ್ ಖಚಿತ ಎಂದು ಘೋಷಿಸಿದ್ದಾರೆ.
ಬೆಂಗಳೂರು : ಅನಂತಕುಮಾರ್ ನಿಧನ ಬಳಿಕ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಲು ಡಿಎನ್ಎ ಅಡ್ಡಿ ಬಂದಿತ್ತು.(B. S. Yediyurappa) ಆದರೆ ಅದು ಕೇವಲ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಮಾತ್ರ ಸೀಮಿತ. ಉಳಿದ ಸಾಕಷ್ಟು ಕ್ಷೇತ್ರಗಳಲ್ಲಿ ಡಿಎನ್ಎಗೆ ಬೆಲೆ ನೀಡಲಾಗಿದೆ.
ಈ ನಡುವೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ಮಾಜಿ ಸಿಎಂ ಯಡಿಯೂರಪ್ಪ (Yediyurappa) ತಮ್ಮ ಶಿಕಾರಿಪುರ ಕ್ಷೇತ್ರವನ್ನು ಪುತ್ರ ವಿಜಯೇಂದ್ರನಿಗೆ ಬಿಟ್ಟು ಕೊಟ್ಟಿದ್ದಾರೆ. ಯಡಿಯೂರಪ್ಪ ಪಕ್ಷದ ನಾಯಕರ ಮೇಲೆ ಮುನಿಸಿಕೊಂಡು ದಿಢೀರ್ ನಿವೃತ್ತಿ ಘೋಷಿಸಿದ್ದಾರೆ ಅನ್ನುವ ಸುದ್ದಿಗಳಿವೆ. ಆದರೆ ಮೂಲಗಳ ಪ್ರಕಾರ ಇದು ಹೈಕಮಾಂಡ್ ಜೊತೆ ಚರ್ಚಿಸಿಯೇ ಪ್ರಕಟಿಸಿರುವ ನಿರ್ಧಾರ.
ಇದನ್ನೂ ಓದಿ : 68th National Film Awards : 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಫುಲ್ ಲಿಸ್ಟ್ ಇಲ್ಲಿದೆ
ರಾಜ್ಯ ಬಿಜೆಪಿಯನ್ನು ಪುನರ್ ಸಂಘಟನೆ ಮಾಡಲು ಹೊರಟಿರುವ ಸಂದರ್ಭದಲ್ಲಿ ಯಡಿಯೂರಪ್ಪ (Yediyurappa) ಹಾಗೂ ವಿಜಯೇಂದ್ರ ಅವರನ್ನೂ ಬಳಸಿಕೊಳ್ಳಲು ಡೆಲ್ಲಿ ನಾಯಕರು ನಿರ್ಧರಿಸಿದ್ದಾರೆ. ಈ ಕಾರಣದಿಂದಲೇ ಯಡಿಯೂರಪ್ಪ, ಪುತ್ರನಿಗೆ ಕ್ಷೇತ್ರ ಘೋಷಣೆ ಮಾಡಿದ್ದಾರೆ. ಸಾಕಷ್ಟು ತಿಂಗಳ ಹಿಂದೆಯೇ ಯಡಿಯೂರಪ್ಪ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದರು. ಆದರೆ ತಡೆಯಿರಿ ಅನ್ನುವ ಸಂದೇಶ ಬಂದ ಕಾರಣ ಅವರು ತೀರ್ಮಾನ ಪ್ರಕಟಿಸಿರಲಿಲ್ಲ. ಇದೀಗ ಹಸಿರು ನಿಶಾನೆ ಸಿಕ್ಕ ಕಾರಣ ಅವರು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
ಇನ್ನು ಯಡಿಯೂರಪ್ಪ ಅವರನ್ನು ಸೈಡಿಗೆ ಸರಿಸಿ ರಾಜ್ಯದಲ್ಲಿ ಚುನಾವಣೆ ಎದುರಿಸುವುದು ಬಿಜೆಪಿಗೆ ಅಸಾಧ್ಯ. ಹೀಗಾಗಿಯೇ ಅವರಿಗೆ ಪಕ್ಷದಲ್ಲಿ ಉನ್ನತ ಹುದ್ದೆಯೊಂದು ಸಿಗುವುದು ಖಚಿತ ಅನ್ನಲಾಗಿದೆ. ಈ ಹಿಂದೆ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿದ್ದ ಸಂತೋಷ್ ಜೀಯವರು ಪಾರ್ಟಿ ಮುಂದುವರಿಯಬೇಕು ಅಂದ್ರೆ ಡಿಎನ್ಎ ಆಧಾರದಲ್ಲಿ ಟಿಕೆಟ್ ಕೊಟ್ರೆ ಹೇಗೆ ಅಂದಿದ್ದರು. ಆದರೆ ಯಡಿಯೂರಪ್ಪ ಅವರ ಡಿಎನ್ಎ ಮುಂದುವರಿಯದಿದ್ರೆ ರಾಜ್ಯದಲ್ಲಿ ಬಿಜೆಪಿ ಪ್ರತಿಪಕ್ಷ ಸ್ಥಾನದಲ್ಲಿ ಕೂರಬೇಕಾಗುತ್ತದೆ. ಹೀಗಾಗಿಯೇ ಬಿಜೆಪಿಗೆ ಯಡಿಯೂರಪ್ಪ ಕುಟುಂಬ ಅನಿವಾರ್ಯವಾಗಿದೆ.
ಇದನ್ನು ಓದಿ : flipkart bounce scooter : ಪ್ಲಿಪ್ ಕಾರ್ಟ್ ನಲ್ಲಿ ಬೌನ್ಸ್ ಇಲೆಕ್ಟ್ರಿಕ್ ಸ್ಕೂಟರ್ : ಕೇವಲ 60 ಸಾವಿರ ರೂಪಾಯಿ
Discussion about this post