ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರ ಕುರಿತಂತೆ ರಾಜಕೀಯ ಮೇಲಾಟ ಮುಂದುವರಿದಿದೆ. ಪ್ರತ್ಯೇಕದ ರಾಜ್ಯದ ಪರ ಹೇಳಿಕೆ ಕೊಟ್ಟು ಮತ ಪಡೆಯಬಹುದು ಅನ್ನುವ ಪಕ್ಷಗಳ ಲೆಕ್ಕಚಾರ ಉಲ್ಟಾ ಹೊಡೆದಿದ್ದು, ಹೀಗಾಗಿ ಒಗ್ಗಟ್ಟಿನ ಮಂತ್ರದ ರಣತಂತ್ರ ರೂಪುಗೊಂಡಿದೆ.
ಅದರಲ್ಲೂ ಬಿಜೆಪಿಗೆ ಇದೀಗ ಕಾಂಗ್ರೆಸ್ ದೊಡ್ಡ ಎದುರಾಳಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ಜೆಡಿಎಸ್ ದೊಡ್ಡ ಶತ್ರುವಾಗಿದೆ. ಈ ಹಿಂದೆ ವಿಧಾನಸಭೆಯಲ್ಲಿ ಯಡಿಯೂರಪ್ಪ ಘೋಷಿಸಿದಂತೆ ಜೆಡಿಎಸ್ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ. ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ವೇಳೆ ಮಾತನಾಡಿದ್ದ ಯಡಿಯೂರಪ್ಪ, ಕಾಂಗ್ರೆಸ್ ನಮಗೆ ಸ್ಪರ್ಧಿಯಲ್ಲ,ಜೆಡಿಎಸ್ ಪಕ್ಷವೇ ನಮ್ಮ ಎದುರಾಳಿ, ಅಪ್ಪ ಮಕ್ಕಳ ಅಸಲಿ ಮುಖವಾಡವನ್ನು ಕಳಚುವುದೇ ನನ್ನ ಗುರಿ ಎಂದು ಗುಡುಗಿದ್ದರು.
ಅಂದು ವಿಧಾನಸಭೆಯಲ್ಲಿ ಯಡಿಯೂರಪ್ಪ ಗುಡುಗಿದ್ದು ಹೀಗೆ..
ಅದರಂತೆ ಪ್ರತ್ಯೇಕ ರಾಜ್ಯ ವಿಚಾರದಲ್ಲಿ ಕುಮಾರಸ್ವಾಮಿ ವಿರುದ್ಧ ಯಡಿಯೂರಪ್ಪ ವಾಗ್ದಾಳಿ ಮುಂದುವರಿಸಿದ್ದು, ದೇವೇಗೌಡರತ್ತವೂ ಗುರಿ ಇಟ್ಟಿದ್ದಾರೆ.
ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಮಾಡುತ್ತಿರುವ ಅವಾಂತರಗಳಿಗೆ ದೇವೇಗೌಡರೇ ಕಾರಣ, ಹೀಗಾಗಿ ಎಂದು ಆರೋಪಿಸಿರುವ ಯಡಿಯೂರಪ್ಪ, ನನ್ನ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ.
2019ರ ಚುನಾವಣೆಯಲ್ಲಿ ಏನಾಗಲಿದೆ – ಯಡಿಯೂರಪ್ಪ ಭವಿಷ್ಯ
ಬೆಂಗಳೂರಿನಲ್ಲಿ ಮಾತನಾಡಿದ ಅವರು ಉತ್ತರ ಕರ್ನಾಟಕ ವಿಚಾರದಲ್ಲಿ ಬೆಂಕಿ ಹಚ್ಚಿದ್ದು ಕುಮಾರ ಸ್ವಾಮಿ, ಆದರೆ ನನ್ನನ್ನು ಸಿಕ್ಕಿಸಲಾಗುತ್ತಿದೆ. ಹೀಗಾಗಿ ನಾನು ಮಾಜಿ ಪ್ರಧಾನಿ ದೇವೇಗೌಡರಿಗೆ ಮೂರು ಪ್ರಶ್ನೆಗಳನ್ನು ಕೇಳುತ್ತೇನೆ, ಅದಕ್ಕೆ ದೇವೇಗೌಡರು ಉತ್ತರ ನೀಡಬೇಕು ಎಂದಿದ್ದಾರೆ.
1.ಉತ್ತರ ಕರ್ನಾಟಕಕ್ಕೇ ಲಿಂಗಾಯತ ಸಿಎಂಗಳ ಕೊಡುಗೆ ಎನು ಎಂದು ಕೇಳಿದ್ದು ಯಾರು ?
2.ಉತ್ತರ ಕರ್ನಾಟಕದಿಂದ ರಾಜ್ಯಕ್ಕೆ ಏನು ಕೊಡುಗೆ ಏನು ಎಂದು ಹುಬ್ಬಳ್ಳಿಯಲ್ಲಿ ಪ್ರಶ್ನಿಸಿದವರು ಯಾರು?
3.ಚನ್ನಪಟ್ಟಣದಲ್ಲಿ ಜಾತಿ ಆಧಾರದಲ್ಲಿ ಮತ ಕೇಳಿದ್ದು ಯಾರು?
ಇವು ದೇವೇಗೌಡರಿಗೆ ಯಡಿಯೂರಪ್ಪ ಎಸೆದ ಮೂರೇ ಮೂರು ಪ್ರಶ್ನೆಗಳು.
ಆದರೆ ಈ ಪ್ರಶ್ನೆಗಳಿಗೆ ದೇವೇಗೌಡರು ಉತ್ತರಿಸುವುದಿಲ್ಲ. ಉತ್ತರಿಸಿದರೆ ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಏಟಿನ ರುಚಿನ ಜೆಡಿಎಸ್ ಉಣಬೇಕಾಗುತ್ತದೆ.
Discussion about this post