Advertisements

Tag: Devegowda

ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ ಜಿಟಿ ದೇವೇಗೌಡ

ಮೋದಿ ಎರಡನೇ ಬಾರಿಗೆ ಕೂಡ ಭಾರಿ ಅಂತರದಿಂದ ಗೆದ್ದರು. ಅವರಿಗೆ ಸ್ವಹಿತಾಸಕ್ತಿ ಇಲ್ಲ. ಅವರನ್ನು ಅವರು ದೇಶಕ್ಕಾಗಿ ಅರ್ಪಿಸಿಕೊಂಡಿದ್ದರಿಂದ ಮತ್ತೆ ಪ್ರಧಾನಿಯಾಗಿದ್ದಾರೆ. ಮೋದಿ ಯಾವತ್ತೂ ದೇಶ, ದೇಶವೆಂದು ಹೇಳುತ್ತಾರೆ. ಹಾಗೇ ಎಲ್ಲರೂ ದೇಶಕ್ಕಾಗಿ ದುಡಿಯಬೇಕು ಎಂದು ಹೇಳುತ್ತಾರೆ. ನಾನು ಸಂಸದನಂತೆ ಸರಳವಾಗಿ ಇರುತ್ತೇನೆ ಎನ್ನುತ್ತಾರೆ ಎಂದು ನರೇಂದ್ರ ಮೋದಿಯವರನ್ನು ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅಚ್ಚರಿ ಅನ್ನುವಂತೆ ಹೊಗಳಿದ್ದಾರೆ. ಬೆಳಗಾವಿಯ ರಾಣಿ…

Advertisements

ತುಮಕೂರಿನಲ್ಲಿ ದೇವೇಗೌಡರ ಸೋಲಿಗೆ ಸೊಸೆಯಂದಿರೇ ಕಾರಣ : ಯುವ ಕಾಂಗ್ರೆಸ್ ಮುಖಂಡನ ಆರೋಪ

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹೆಚ್.ಡಿ. ದೇವೇಗೌಡರು ಸೋಲುವುದಕ್ಕೆ ಅವರ ಇಬ್ಬರು ಸೊಸೆಯಂದಿರು ಕಾರಣ ಎಂದು ಹೊಳೆನರಸೀಪುರದ ಜನ ಹೇಳುತ್ತಿದ್ದಾರೆ ಅಂತಾ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರ ಪುತ್ರ ಆರ್. ರಾಜೇಂದ್ರ ಹೇಳಿದ್ದಾರೆ. ಗೌಡರ ಇಬ್ಬರೂ ಸೊಸೆಯಂದಿರು ತಮ್ಮ ತಮ್ಮ ಮಕ್ಕಳಿಗೆ ಟಿಕೆಟ್ ಕೊಡಲೇಬೇಕು ಎಂದು ಪಟ್ಟು ಹಿಡಿದರು. ಹೀಗಾಗಿ…

ಕರ್ನಾಟಕವೇನು…ದೇವೇಗೌಡರ ಅಪ್ಪನ ಮನೆ ಆಸ್ತೀನಾ..?ಪ್ರೀತಂಗೌಡರ ಪ್ರಶ್ನೆ ಉತ್ತರವೆಲ್ಲಿದೆ…

ರಾಮನಗರ ಗಂಡನಿಗೆ, ಚನ್ನಪಟ್ಟಣ ಹೆಂಡತಿಗೆ, ಮಂಡ್ಯ ಮಗನಿಗೆ, ಪಕ್ಕದ ಜಿಲ್ಲೆ ಹಾಸನ ಅಣ್ಣನ ಮಗನಿಗೆ. ಕರ್ನಾಟಕ ದೇವೇಗೌಡರ ಅಪ್ಪನ ಮನೆ ಆಸ್ತೀನಾ..? ಎಂದು ಹಾಸನ ಶಾಸಕ ಪ್ರೀತಂಗೌಡ ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗೌಡರೇನೂ ದೇವೇಗೌಡರ ಕುಟುಂಬಕ್ಕೆ ಜಿಪಿಎ ಮಾಡಿಕೊಟ್ಟಿಲ್ಲ. ನಾವು ಯಾರೂಹ ಬಾಂಡೆಡ್ ಲೇಬರ್ಸ್ ಅಲ್ಲ ಎಂದು ದೇವೇಗೌಡ ಹಾಗೂ ಅವರ ಕುಟುಂಬದ ತೀವ್ರ ವಾಗ್ದಾಳಿ…

ಸುಮಲತಾ ಸೋಲಿಸಲು ಜೆಡಿಎಸ್ ರಣತಂತ್ರ : ಮರೆತವರನ್ನು ಮತ್ತೆ ನೆನಪಿಸಿಕೊಂಡ ದೇವೇಗೌಡರು

ಜೆಡಿಎಸ್ ವರಿಷ್ಠರ ವಿರುದ್ಧ ಇರುವ ದೊಡ್ಡ ಆರೋಪ ಅಂದ್ರೆ, ಪಕ್ಷದಲ್ಲಿ ನಾಯಕರಿಗೆ ಬೆಳೆಯಲು ಅವಕಾಶವಿಲ್ಲ. ಕುಟುಂಬಕ್ಕೆ ಆಪ್ತರಾದವರಿಗೆ ಮಾತ್ರ ಇಲ್ಲಿ ಬೆಳೆಯಲು ಅವಕಾಶ ಅನ್ನುವುದು. ಇದು ಹೌದು ಅನ್ನುವ ಅನೇಕ ಉದಾಹರಣೆಗಳನ್ನು ರಾಜಕೀಯ ವಿಶ್ಲೇಷಕರು ಕೊಡುತ್ತಾರೆ. ಇದೀಗ ಇದೇ ಸಾಲಿನಲ್ಲಿ ಮುನ್ನಲೆಗೆ ಬಂದಿರುವುದು ಮಾಜಿ ಸಚಿವ ಎಸ್.ಡಿ.ಜಯರಾಂ ಕುಟುಂಬ. ಮಂಡ್ಯದ ನಾಯಕರಾಗಿದ್ದ ಎಸ್,ಡಿ, ಜಯರಾಂ ನಿಧನವಾದ ನಂತ್ರ ಉಪಚುನಾವಣೆಯಲ್ಲಿ ಅವರ ಪತ್ನಿ…

ಅಯ್ಯೋಯ್ಯೋ…ಜೆಡಿಎಸ್ ನಲ್ಲಿ ಎನೋ ರಾಂಗ್ ಆಗಿದೆ…

ರಾತ್ರಿ ವೇಳೆ ಜೆಡಿಎಸ್​ ನಾಯಕಿಯರಿಗೆ ಹಾಗೂ ಕಾರ್ಯಕರ್ತೆಯರಿಗೆ ದೂರವಾಣಿ ಕರೆ ಮಾಡದಂತೆ ರಾಜ್ಯ ಜೆಡಿಎಸ್​ ಖಡಕ್ ಎಚ್ಚರಿಕೆ ನೀಡಿದೆ. ಇಂತಹುದೊಂದು ಒಕ್ಕಣೆಯ ಕರಪತ್ರ ಜೆಡಿಎಸ್ ಕಚೇರಿಯ ನೊಟೀಸ್ ಬೋರ್ಡ್ ನಲ್ಲಿ ರಾರಾಜಿಸುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಜೆಡಿಎಸ್​, ತಮ್ಮ ಪಕ್ಷದಿಂದ ಯಾವುದೇ ಲೋಪವಾಗದಂತೆ ಜಾಗರೂಕತೆಯಿಂದ ಹೆಜ್ಜೆ ಇಡುತ್ತಿದೆ. ಒಂದು ವೇಳೆ ಪಕ್ಷಕ್ಕೆ ಯಾವುದೇ ರೀತಿಯಿಂದ ಕೆಟ್ಟ ಹೆಸರು ಬಂದರೆ,…

ನೀರು ಹಾಕಿ ಬಸ್ ಓಡಿಸೋಕೆ ಆಗುತ್ತಾ….ದೇವೇಗೌಡರ ಪ್ರಶ್ನೆ

ಗಣೇಶ ಚತುರ್ಥಿಯ ಒಳಗಾಗಿ ಸಾರಿಗೆ ಸಂಸ್ಥೆಗಳ ಪ್ರಯಾಣಿಕ ದರ ಏರಿಕೆಯ ಅನಿವಾರ್ಯತೆಗೆ ಸರ್ಕಾರ ಸಿಲುಕಿದೆ. ಪ್ರಯಾಣಿಕರ ದರ ಏರಿಸದಿದ್ದರೆ ಕೋಟಿ ಕೋಟಿ ನಷ್ಟ ಗ್ಯಾರಂಟಿ. ಆದರೆ ಜನತೆಯ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೋ ಅನ್ನುವ ಆತಂಕವೂ ಕಾಡುತ್ತಿದೆ. ಈ ನಡುವೆ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಪ್ರಧಾನಿ ದೇವೇಗೌಡರು ಸಾರಿಗೆ ಸಂಸ್ಥೆಯ ಬಸ್ ದರ ಏರಿಕೆ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇಂಧನ ದರ ಹೀಗೆ ಏರಿಕೆಯಾಗುತ್ತಿದ್ದರೆ…

ರಾಷ್ಟ್ರೀಯ ಮಟ್ಟದಲ್ಲಿ ಸಿಎಂ ಮಾನ ಹರಾಜು ಹಾಕಿದ ಸೂಪರ್ ಸಿಂ

ನಿಮಗೆ ಆಗದವರು ಯಾರಾದರೂ ಇದ್ದಾರೆ ರಾಜಕಾರಣಿಗಳಿಗೆ ಹೇಳಿ…ಅದ್ಭುತವಾಗಿ ನಿಮ್ಮ ಶತ್ರುವಿನ ಮಾನ ಹರಾಜು ಹಾಕುತ್ತಾರೆ. ಎಲ್ಲಿ ಹೇಗಿರಬೇಕು ಅನ್ನುವ ಜ್ಞಾನವಿಲ್ಲದೆ ವರ್ತಿಸುವ ಇವರು, ದರ್ಪ, ದೌಲತ್ತುಗಳಲ್ಲೇ ಮುಳುಗಿ ಹೋಗಿರುತ್ತಾರೆ. ನಿನ್ನೆ ರಾತ್ರಿ ಮಾಜಿ ಪ್ರಧಾನಿ ದೇವೇಗೌಡರ ಹಿರಿಯ ಪುತ್ರ, ರಾಜ್ಯದ ಸಿಎಂ ಅವರ ಸಹೋದರ, ಲೋಕೋಪಯೋಗಿ ಸಚಿವರೂ ಆಗಿರುವ ಹೆಚ್.ಡಿ. ರೇವಣ್ಣ ಆಡಿದ್ದು ಕೂಡಾ ಹೀಗೆ. ನೆರೆಯಿಂದ ಸಂತ್ರಸ್ಥರಾಗಿರುವ ಜನರಿಗೆ ಸಾಂತ್ವಾನ…

ಮೂರೇ ಮೂರು ಪ್ರಶ್ನೆಗೆ ಉತ್ತರಿಸಿ ದೇವೇಗೌಡರೇ…

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರ ಕುರಿತಂತೆ ರಾಜಕೀಯ ಮೇಲಾಟ ಮುಂದುವರಿದಿದೆ. ಪ್ರತ್ಯೇಕದ ರಾಜ್ಯದ ಪರ ಹೇಳಿಕೆ ಕೊಟ್ಟು ಮತ ಪಡೆಯಬಹುದು ಅನ್ನುವ ಪಕ್ಷಗಳ ಲೆಕ್ಕಚಾರ ಉಲ್ಟಾ ಹೊಡೆದಿದ್ದು, ಹೀಗಾಗಿ ಒಗ್ಗಟ್ಟಿನ ಮಂತ್ರದ ರಣತಂತ್ರ ರೂಪುಗೊಂಡಿದೆ. ಅದರಲ್ಲೂ ಬಿಜೆಪಿಗೆ ಇದೀಗ ಕಾಂಗ್ರೆಸ್ ದೊಡ್ಡ ಎದುರಾಳಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ಜೆಡಿಎಸ್ ದೊಡ್ಡ ಶತ್ರುವಾಗಿದೆ. ಈ ಹಿಂದೆ ವಿಧಾನಸಭೆಯಲ್ಲಿ ಯಡಿಯೂರಪ್ಪ ಘೋಷಿಸಿದಂತೆ ಜೆಡಿಎಸ್ ವಿರುದ್ಧ…