ಸುದ್ದಿಮನೆಗಳಲ್ಲಿ ಸದಾ ಆಚಾತುರ್ಯಗಳು ನಡೆಯುತ್ತಿರುತ್ತದೆ. ಕೆಲವೊಮ್ಮೆ ಇವು ಫನ್ನಿ ಅನ್ನಿಸಿಕೊಂಡ್ರೆ ಮತ್ತೆ ಕೆಲವೊಮ್ಮೆ ಮುಜುಗರಕ್ಕೂ ಕಾರಣವಾಗುತ್ತದೆ. ಹೀಗೆ ಕೆನಡಾದ ಗ್ಲೋಬಲ್ ನ್ಯೂಸ್ ನಲ್ಲೂ ಎಡವಟ್ಟು ನಡೆದಿದ್ದು ವೀಕ್ಷಕರು ಇದನ್ನು ಎಂಜಾಯ್ ಮಾಡಿದ್ದಾರೆ.
ಕೆನಡಾ ಹವಮಾನ ತಜ್ಞ ಹಾಗೂ ಸುದ್ದಿವಾಚಕ Anthony Farnell ಕಳೆದ ಭಾನುವಾರ ಹವಮಾನ ವರದಿ ಪ್ರಸ್ತುತ ಪಡಿಸುತ್ತಿದ್ದರು. ಈ ವೇಳೆ ನಾಯಿಮರಿಯೊಂದು ತೆರೆಯ ಮೇಲೆ ಕಾಣಿಸಿಕೊಂಡಿದೆ. ಗ್ರೀನ್ ಮ್ಯಾಟ್ ಮೇಲೆ ಗ್ರಾಫಿಕ್ಸ್ ಪ್ರಸಾರವಾಗುತ್ತಿದ್ದ ನಾಯಿ ಮರಿ ಕೂಡಾ ಮೋಡ, ಆಕಾಶಗಳಲ್ಲಿ ಓಡಾಡುವಂತೆ ಕಾಣಿಸಿದೆ.
ಕಾರ್ಯಕ್ರಮ ಪ್ರಸಾರವಾದ ಅಷ್ಟೂ ಸಮಯ ನಾಯಿ ಮರಿ ತೆರೆಯಲ್ಲೇ ಓಡಾಟ ನಡೆಸುತ್ತಿತ್ತು. ಆದರೆ ಅಂಥೋನಿಯವರು ಯಾವುದೇ ಗಲಿಬಿಲಿಗೆ ಒಳಗಾಗದೆ ಹವಮಾನ ವರದಿಯನ್ನು ಪ್ರಸ್ತುತ ಪಡಿಸಿದ್ದಾರೆ. ಜೊತೆಗೆ ವರದಿ ಮುಗಿಸುವಾಗಲೂ ಕೂಡಾ ತನ್ನ ಮೆಚ್ಚಿನ ನಾಯಿ ಮರಿ ಚಾರ್ಲಿ ಹೆಸರು ಉಲ್ಲೇಖಿಸಿ ಕಾರ್ಯಕ್ರಮ ಮುಗಿಸಿದ್ದಾರೆ.
ಯಾರಿಗೂ ಮುಜುಗರವಾಗದಂತೆ ಅವರು ವರದಿ ಪ್ರಸ್ತುತ ಪಡಿಸಿದ ರೀತಿಯ ಸ್ಟುಡಿಯೋದಲ್ಲಿ ಕೂತಿದ್ದ ಸುದ್ದಿ ವಾಚಕರು ಕೂಡಾ ಭೇಷ್ ಅಂದಿದ್ದಾರೆ. ಹಾಗಾದ್ರೆ ಈ ಎಡವಟ್ಟು ಹೇಗೆ ನಡೆಯಿತು. ಕೊರೋನಾ ಕಾರಣದಿಂದ ಅಂಥೋನಿ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ. ಹೀಗಾಗಿಯೇ ಅವರ ಮನೆಯ ನಾಯಿ ಮರಿಯೂ ತೆರೆಯ ಮೇಲೆ ಕಾಣಿಸಿಕೊಳ್ಳುವಂತಾಗಿದೆ. ಹಾಗಂತ ಇದೇನು ಹೊಸದಲ್ಲ ಗ್ಲೋಬಲ್ ನ್ಯೂಸ್ ಪರದೆಯ ಮೇಲೆ ಹಲವಾರು ಸಲ ನಾಯಿ ಮರಿ ಕಾಣಿಸಿಕೊಂಡಿದೆ.
Discussion about this post