ಪ್ರಪಂಚಾದ್ಯಂತ 300 ದಶಲಕ್ಷ ಜನ ಅಸ್ತಮಾಕ್ಕೆ ತುತ್ತಾಗುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ? ವಿಶ್ವ ಆರೋಗ್ಯ ಸಂಸ್ಥೆ(WHO)ವರದಿ ಪ್ರಕಾರ ವರ್ಷದಲ್ಲಿ ಪ್ರಪಂಚಾದ್ಯಂತ 2,50,000 ಜನ ಅಸ್ತಮಾಕ್ಕೆ ಬಲಿಯಾಗುತ್ತಿದ್ದಾರೆ.
ಅಸ್ತಮಾ ಈ ಮಟ್ಟದಲ್ಲಿ ಅಪಾಯಕಾರಿಯಾಗಿದ್ದರೂ ಅನೇಕರಿಗೆ ಅದರ ಬಗ್ಗೆ ಅರಿವಿಲ್ಲ.ಹೀಗಾಗಿ ರೋಗದ ಬಗ್ಗೆ ಈ ಅರಿವನ್ನು ಮೂಡಿಸಲು, ಗ್ಲೋಬಲ್ ಇನಿಶಿಯೇಟಿವ್ ಫಾರ್ ಆಸ್ತಮಾ (GINA) ಮತ್ತು ಯುಎಸ್ ಮೂಲದ ನ್ಯಾಷನಲ್ ಹಾರ್ಟ್ ಲಂಗ್ ಅಂಡ್ ಬ್ಲಡ್ ಇನ್ಸ್ಟಿಟ್ಯೂಟ್ (ಎನ್ಎಚ್ಎಲ್ಬಿ), ಮತ್ತು ವಿಶ್ವ ಆಸ್ತಮಾ ಫೌಂಡೇಶನ್ ವಾರ್ಷಿಕ ಕಾರ್ಯಕ್ರಮವನ್ನು ಆಯೋಜಿಸುತ್ತದೆ, ಅದೇ ವಿಶ್ವ ಆಸ್ತಮಾ ದಿನ.
ಶ್ವಾಸಕೋಶಕ್ಕೆ ಸಂಬಂಧಿಸಿದ ಈ ಕಾಯಿಲೆಯು ವಿಶ್ವಾದ್ಯಂತ ಸುಮಾರು 235 ದಶಲಕ್ಷ ಜನರನ್ನು ಕಾಡುತ್ತಿದೆ ಎಂದು ಅಂದಾಜಿಸಲಾಗಿದೆ. ಈ ಕಾಯಿಲೆಯ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಮೂಡಿಸಲು, ರೋಗ ನಿವಾರಣೆಗೆ ಇರುವ ಔಷಧ, ಚಿಕಿತ್ಸಾ ಪದ್ಧತಿಗಳ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಪ್ರತಿವರ್ಷ ಮೇ ತಿಂಗಳ ಮೊದಲ ಮಂಗಳವಾರವನ್ನು ವರ್ಲ್ಡ್ ಅಸ್ತಮಾ ಡೇ ಎಂದು ಆಚರಿಸಲಾಗುತ್ತದೆ. ಈ ಬಾರಿ ಮೇ 5 ಅನ್ನು ಅಸ್ತಮಾ ದಿನವನ್ನಾಗಿ ಗುರುತಿಸಲಾಗಿದೆ.
ಎದೆಯಲ್ಲಿ ಬಿಗಿತ, ಉಸಿರಾಡಲು ಕಷ್ಟವಾಗುವುದು, ಪದೇ ಪದೇ ಬರುವ ಕೆಮ್ಮು, ಒಂದು ರೀತಿಯ ಉಸಿರುಗಟ್ಟಿದಂತೆ ಅನಿಸುವುದು ಇವು ಅಸ್ತಮಾ ಕಾಯಿಲೆಯ ಲಕ್ಷ ಣವಾಗಿವೆ. ಆರಂಭಿಕ ಹಂತದಲ್ಲಿ ಮಾರಣಾಂತಿಕವಲ್ಲದಿದ್ದರೂ ಸೂಕ್ತ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಮಾರಕವಾಗುವ ಕಾಯಿಲೆ ಇದಾಗಿದೆ. ಅಸ್ತಮಾವನ್ನು ಪೂರ್ತಿಯಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಅದರ ಪರಿಣಾಮಗಳನ್ನು ಮತ್ತು ಲಕ್ಷ ಣಗಳನ್ನು ಕಡಿಮೆಗೊಳಿಸಬಹುದು. ಕೆಲವರಿಗೆ ಬಾಲ್ಯದಲ್ಲಿ ಕಾಡುವ ಅಸ್ತಮಾ ವಯಸ್ಕರಾಗುವಾಗ ಇಲ್ಲವಾಗುತ್ತದೆ ಅಥವಾ ಕೆಲವರಿಗೆ ಬಾಲ್ಯದಲ್ಲಿ ಇಲ್ಲದ್ದು ವಯಸ್ಕರಾಗುವ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಹಾಗಾದರೆ ಅಸ್ತಮಾವನ್ನು ಗೆಲ್ಲುವುದು ಹೇಗೆ, ತುಂಬಾ ಸುಲಭ ಮುನ್ನೆಚ್ಚರಿಕೆ ಅನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಪಾಲಿಸಿದರೆ ಆಯ್ತು.
Discussion about this post