ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸೆಲೆಬ್ರೆಟಿಗಳು ಎಂದು ಕರೆಸಿಕೊಂಡವರ ಬಾಯಿಯಿಂದ ಚಿತ್ರ ವಿಚಿತ್ರ ಪದಗಳು ಉದುರುತ್ತಿದೆ. ಕನ್ನಡ ಡಿಕ್ಷನರಿಯಲ್ಲಿ ಇಲ್ಲದ ಪದಗಳನ್ನು ಇವರು ಹೇಳುತ್ತಿರುವುದರಿಂದ ಜನ ಗೂಗಲ್ ಮಾಡಿ ಸುಸ್ತಾಗಿದ್ದಾರೆ. ಮೊನ್ನೆ ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ ಅವರು ಪತ್ರವಳ್ಳಿ ಅನ್ನುವ ಪದ ಪ್ರಯೋಗ ಮಾಡಿದ್ದರು. ಅದಕ್ಕೆ ಅವರದ್ದೇ ಅರ್ಥ ಬೇರೆ ಕೊಟ್ಟಿದ್ದರು. ಪತ್ರವಳ್ಳಿ ಪದದ ಹಿಂದೆ ಬಿದ್ದ ಜನ ಗೂಗಲ್ ಮಾಡಿದ್ರು, ಸಾಹಿತ್ಯ ಪರಿಷತ್ತಿನ, ವಿಶ್ವವಿದ್ಯಾನಿಲಯದ ನಿಘಂಟು ತಿರುವು ಹಾಕಿದ್ರು. ಫಲಿತಾಂಶ ಸಿಗಲೇ ಇಲ್ಲ. ಕೊನೆಗೆ ಸುದೀಪ್ ಅವರೇ ವೇದಿಕೆ ಮೇಲೆ ಬಂತು. ಪತ್ರವಳ್ಳಿ ಅನ್ನುವ ಪದಕ್ಕೆ ನೀವು ಹೇಳಿದ ಅರ್ಥವೇ ಇಲ್ಲ ಎಂದು ಚಾಟಿ ಬೀಸಿದ್ರು.
ಇದೀಗ ದರ್ಶನ್ ಸರದಿ. 25 ಕೋಟಿ ವಂಚನೆ ವಿವಾದ ಇದೀಗ ದಿನಕ್ಕೊಂದು ತಿರುವು ಪಡೆಯುತ್ತಿದೆ. ನಾಲ್ಕೈದು ಜನ ಸುತ್ತ ನಡೆಯುತ್ತಿದ್ದ ಬೆಳವಣಿಗೆಗೆ ಇದೀಗ ಹೊಸ ಹೊಸ ಹೆಸರುಗಳು ಸೇರ್ಪಡೆಯಾಗುತ್ತಿದೆ. ಅದರಲ್ಲಿ ಜೋಗಿ ಖ್ಯಾತಿಯ ಪ್ರೇಮ್ ಹೆಸರು ಕೂಡಾ ಒಂದು. ಅದು ಪುಡಾಂಗ್ ಅನ್ನುವ ಬಿರುದನ್ನು ಬೇರೆ ಪ್ರೇಮ್ ಗೆ ತೊಡಿಸಿದ್ದಾರೆ ದರ್ಶನ್.
ಆ ಪದಕ್ಕೆ ಪ್ರೇಮ್ ತಿರುಗಿ ಬಿದ್ದಿರುವ ಶೈಲಿ ನೋಡಿದರೆ ಅದೊಂದು ಕೆಟ್ಟ ಪದ ಅನ್ನುವುದರಲ್ಲಿ ಅನುಮಾನವಿಲ್ಲ. ಹೊಗಳಿಕೆಯಾಗಿದ್ರೆ ಪ್ರೇಮ್ ಈ ಪರಿ ಸಿಟ್ಚಾಗುತ್ತಿರಲಿಲ್ಲ. ಹಾಗಾದ್ರೆ ಪುಡುಂಗು ಅಥವಾ ಪುಡಾಂಗ್ ಅನ್ನುವ ಪದದ ಅರ್ಥವೇನು ಎಂದು ನೋಡಿದ್ರೆ ಇದೊಂದು ಪಕ್ಕಾ ಪೋಕರಿಗಳ ಪೋಲಿ ಭಾಷೆ. ಮಾತ್ರವಲ್ಲದೆ ಇದು ಕನ್ನಡ ಭಾಷೆಯಂತು ಅಲ್ಲ.
ಪುಡಂಗು ಅಂದ್ರೆ ದೊಡ್ಡ ಜನ ಅನ್ನುವ ಅರ್ಥವಿದೆ. ಅಂದರೆ ಅವನ್ಯಾವ ದೊಡ್ಡ ಜನ ಎಂದು ಹೇಳ್ತಾರಲ್ಲ, ಆ ಅರ್ಥದಲ್ಲಿ ಪುಡಂಗು ಅನ್ನುವ ಪದವನ್ನು ಬಳಸುತ್ತಾರೆ. ಇನ್ನು ಕೆಲವರ ಪ್ರಕಾರ ಇದೊಂದು ಕೆಟ್ಟ ಭಾಷೆಯಲ್ಲ, ಯುವಕರು ಪರಸ್ಪರ ಕಾಲೆಳೆಯುವ ಸಲುವಾಗಿ ಪುಡಾಂಗು ಅಥಾವ ಪುಡುಂಗು ಅನ್ನುವ ಪದ ಬಳಸುತ್ತಾರಂತೆ. ನೀನೇನು ದೊಡ್ಡ ಸಾಧಕನೇ, ನೀನೇನು ಪವರ್ ಫುಲ್ ವ್ಯಕ್ತಿಯೇ ಅನ್ನುವುದಕ್ಕೆ ಪರ್ಯಾಯ ಪದವಾಗಿದೆ. ಮಾತ್ರವಲ್ಲದೆ ದಾದ ಗ್ಯಾಂಗ್ ಲೀಡರ್ ಅನ್ನುವ ಅರ್ಥದಲ್ಲೂ ಈ ಪದ ಬಳಸಲಾಗುತ್ತದೆ.
ಇನ್ನು ಪುಡಾಂಗು ಅಂದ್ರೆ ತೋಲಾಂಡಿ ಅನ್ನುವ ಅರ್ಥವೂ ಇದೆ. ಅಷ್ಟೇ ಅಲ್ಲದೆ ಇದು ತಮಿಳಿನ ಪುಡುಂಗುರಾನ ಅನ್ನುವ ಪದದಿಂದ ಬಂದಿರುವ ಶಬ್ಧ ಅನ್ನುವ ವಾದವೂ ಇದೆ. ‘ಎನ್ನ ಪಾ ಎನ್ನ ಪುಡುಂಗಿರೈ’ ಅನ್ನುವುದು ತಮಿಳಿನ ಒಂದು ಬೈಗುಳ. ಸಂದರ್ಭದ ಮೇಲೆ ಇದರ ಅರ್ಥ ಬದಲಾಗುತ್ತಿರುತ್ತದೆ. ಪುಡುಂಗಿರೈ ಅಂದ್ರೆ ‘ಏನು ಕೀಳ್ತಿದ್ದೀಯಾ’…? ಎಂಬ ಅರ್ಥವಿದೆ. ಜೊತೆಗೆ ಕಿತ್ತೋದವನು ಅನ್ನುವ ಅರ್ಥದಲ್ಲೂ ಇದನ್ನು ಬಳಸಲಾಗುತ್ತದೆ.
ಒಟ್ಟಿನಲ್ಲಿ ದರ್ಶನ್ ಪ್ರಯೋಗಿಸಿರುವ ಪದ ಕುಟುಂಬ ಸಮೇತರಾಗಿ ಕುಳಿತು ಕೇಳಬಹುದಾದ ಪದವಲ್ಲ. ಆದರೆ ಅದನ್ನು ನಮಗೆ ಹೇಗೆ ಬೇಕೋ ಹಾಗೇ ಅಥೈಸಿಕೊಳ್ಳಬಹುದಾಗಿದೆ.
ಮತ್ತೊಂದು ಇಂಟ್ರರೆಸ್ಟಿಂಗ್ ವಿಷಯ ಅಂದ್ರೆ ಚೀನಾದ ಶಾಂಘೈನಲ್ಲಿ pudong ಅನ್ನುವ ಜಿಲ್ಲೆಯೊಂದಿದೆ. 50 ಲಕ್ಷ ಜನ ಸಂಖ್ಯೆಯನ್ನು ಈ ಜಿಲ್ಲೆ ಹೊಂದಿದೆ. ಅಲ್ಲಿಗೆ ಪ್ರೇಮ್ ಒಂದಿಷ್ಟು ಸಮಾಧಾನ ಮಾಡಿಕೊಳ್ಳಬಹುದು.
ಇನ್ನು ಸಾಮಾಜಿಕ ಜಾಲದಲ್ಲಿ ದರ್ಶನ್ ಪ್ರಯೋಗಿಸಿದ ಪದಕ್ಕೆ ಫನ್ನಿ ಉತ್ತರವೊಂದು ಬಂದಿದೆ. ಓದಿ ಎಂಜಾಯ್ ಮಾಡಿ.
Discussion about this post