ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಬಿಳಿನೆಲೆ ಗ್ರಾಮದ ಕೈಕಂಬದ ಮೂಲೆಮನೆ ಮನೆಯೊಂದರ ಶೌಚಾಲಯದಲ್ಲಿ ಚಿರತೆ ಲಾಕ್ ಆದ ಘಟನೆ ಕೆಲ ತಿಂಗಳ ಹಿಂದೆ ನಡೆದಿತ್ತು. ನಾಯಿಯನ್ನು ಅಟ್ಟಿಸಿಕೊಂಡು ಹೋದ ಸಂದರ್ಭದಲ್ಲಿ ಶೌಚಾಲಯದಲ್ಲಿ ಸಿಲುಕಿಕೊಂಡ ಚಿರತೆ 12 ಗಂಟೆಗಳ ಕಾಲ ಆತಂಕ ಸೃಷ್ಟಿಸಿತ್ತು.
ಇದಾದ ಬಳಿಕ ಮೊನ್ನೆ ಮೊನ್ನೆ ಅಜ್ಜಿಯೊಬ್ಬರ ಮೇಲೆ ದಾಳಿ ನಡೆಸಲು ಬಂದ ಚಿರತೆಯನ್ನು ವಾಕಿಂಗ್ ಸ್ಟಿಕ್ ನಿಂದ ಹೊಡೆದು ಓಡಿಸದ ಘಟನೆಯೂ ನಡೆದಿತ್ತು. ಹೀಗೆ ವನ್ಯಜೀವಿಗಳೊಂದಿಗಿನ ಮಾನವನ ಸಂಘರ್ಷದ ಸುದ್ದಿಗಳು ಬರ್ತಾನೆ ಇರ್ತಾವೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ ‘ಶೌಚಾಲಯದಲ್ಲಿ ಸಿಂಹ’.
ಬೃಹತ್ ಗಾತ್ರದ ಸಿಂಹವೊಂದು ಶೌಚಾಲಯದೊಳಗಿನಿಂದ ಬರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಮಹಿಳೆಯರೆಲ್ಲಾ ಮಾತನಾಡುವ ಧ್ವನಿ ಕೂಡಾ ಕೇಳಿಸುತ್ತಿದೆ. ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ಕೂಡಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು,ಗುಜರಾತ್ನ ಸೌರಾಷ್ಟ್ರ ಪ್ರದೇಶದಲ್ಲಿ ಸೆರೆಯಾದ ದೃಶ್ಯ ಅನ್ನಲಾಗಿದೆ.
Loo is not always safe & reliver for humans, sometime it can be used by others too…@susantananda3 @ParveenKaswan @PraveenIFShere @Saket_Badola pic.twitter.com/MNs9pwCycC
— WildLense® Eco Foundation 🇮🇳 (@WildLense_India) October 2, 2021
Keeping the forest clean…
— Susanta Nanda IFS (@susantananda3) October 3, 2021
Shared by @WildLense_India pic.twitter.com/KvIKq4lhnP
Loo is not always safe & reliver for humans, sometime it can be used by others too…@susantananda3 @ParveenKaswan @PraveenIFShere @Saket_Badola pic.twitter.com/MNs9pwCycC
— WildLense® Eco Foundation 🇮🇳 (@WildLense_India) October 2, 2021
Video of lion coming out of a public toilet goes viral, leaves netizens stunned The lion is seen walking out of a public toilet at its own pace, as he looks around
Discussion about this post