ಮರದಿಂದ ಒಂದು ಮರಕ್ಕೆ ಹಾರಿ ಹಣ್ಣು ಹಂಪಲು ತಿನ್ನುವ ಮಂಗ ಮೆಟ್ರೋದಲ್ಲಿ ಪ್ರಯಾಣಿಸಿ ಸುದ್ದಿಯಲ್ಲಿದೆ. ದೆಹಲಿಯಲ್ಲಿ ಲೌಕ್ ಡೌನ್ ತೆರವುಗೊಂಡ ಬೆನ್ನಲ್ಲೇ ಮೆಟ್ರೋ ಸಂಚಾರ ಕೂಡಾ ಪ್ರಾರಂಭಗೊಂಡಿದೆ. ಹೀಗಾಗಿ ಜನ ಕೂಡಾ ಮೆಟ್ರೋ ಹತ್ತಲಾರಂಭಿಸಿದ್ದಾರೆ. ಈ ನಡುವೆ ದೆಹಲಿ ಮೆಟ್ರೋದಲ್ಲಿ ಮಂಗನ ಸವಾರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಯಮುನಾ ಬ್ಯಾಂಕ್ ನಿಲ್ಡಾಣದಿಂದ ಐಪಿ ನಿಲ್ದಾಣದ ತನಕ ಮಂಗ ಪ್ರಯಾಣ ಬೆಳೆಸಿದ್ದು, ರೈಲಿನೊಳಗಡೆ ಇದ್ದಷ್ಟು ಹೊತ್ತು ಯಾರಿಗೂ ಯಾವುದೇ ತೊಂದರೆ ಕೊಟ್ಟಿಲ್ಲ ಅನ್ನುವುದೇ ನೆಮ್ಮದಿಯ ವಿಚಾರ.
Discussion about this post