ಆನ್ ಲೈನ್ ಗಳಲ್ಲಿ ವಸ್ತುಗಳನ್ನು ಬುಕ್ ಮಾಡಿದ ಮೇಲೆ ಬುಕ್ ಮಾಡಿದ ವಸ್ತುವೇ ಮನೆಗೆ ತಲುಪುವ ಗ್ಯಾರಂಟಿ ಇಲ್ಲ. ಮೊನ್ನೆ ಮೊನ್ನೆ ಲ್ಯಾಪ್ ಟಾಪ್ ಬುಕ್ ಮಾಡಿದವನಿಗೆ ಹೆಂಚು ಸಿಕ್ಕಿತ್ತು. ಇದೀಗ ಐಫೋನ್ 12 ಬುಕ್ ಮಾಡಿದ ಗ್ರಾಹಕನೊಬ್ಬನ ಕೈಗೆ ನಿರ್ಮಾ ಸೋಪ್ ಕೊಟ್ಟಿದೆ.
ಗ್ರಾಹಕರೊಬ್ಬರು ಪ್ಲಿಪ್ ಕಾರ್ಟ್ ನಲ್ಲಿ ಐಫೋನ್ 12 ಬುಕ್ ಮಾಡಿದ್ದರು. ಇನ್ನೇನು ಮೊಬೈಲ್ ಕೈಗೆ ಸಿಗುತ್ತದೆ ಎಂದು ಕಾದಿದ್ದವರಿಗೆ ಪ್ಲಿಪ್ ಕಾರ್ಟ್ ಶಾಕ್ ಕೊಟ್ಟಿದೆ. ಡೆಲಿವರಿಯಾದ ಬಾಕ್ಸ್ ಅನ್ನು ತೆರೆದು ನೋಡಿದರೆ 53 ಸಾವಿರ ರೂಪಾಯಿ ಬೆಲೆಯ ಐಫೋನ್ ಇರಬೇಕಾದ ಜಾಗದಲ್ಲಿ 2 ನಿರ್ಮಾ ಸೋಪ್ ಗಳಿತ್ತು.
ಇದೀಗ ಈ ದೋಖಾ ಸ್ಟೋರಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Discussion about this post