ಹಂತಕ vamanjoor praveen ನನ್ನು ಬಿಡುಗಡೆ ಮಾಡದಂತೆ ಕಮಿಷನರ್ ಮೊರೆ ಹೋದ ಕುಟುಂಬಸ್ಥರು
ಮಂಗಳೂರು : 1994 ಫೆಬ್ರವರಿಯ ಮಧ್ಯರಾತ್ರಿ ( 1994 Vamanjoor serial murder case) ವಾಮಂಜೂರಿನಲ್ಲಿ ನಡೆದ ಭೀಕರ ಕೊಲೆ ಪ್ರಕರಣ ಆರೋಪಿ ಪ್ರವೀಣನಿಗೆ (vamanjoor Praveen) ಬಿಡುಗಡೆ ಭಾಗ್ಯ ಲಭಿಸಿದೆ ಅನ್ನುವ ಸುದ್ದಿಗಳು ಹರಿದಾಡುತ್ತಿದೆ. ಇದು ಆತನ ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದ್ದು, ಅವನು ಹೊರಗೆ ಬಂದ್ರೆ ಮತ್ತೆ ನಾಲ್ವರನ್ನು ಕೊಂದು ಬಿಡ್ತಾನೆ ಅಂತಾ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿಯಾಗಿರುವ ಕುಟುಂಬ ಸದಸ್ಯರು ಪ್ರವೀಣ ಬಿಡುಗಡೆಯಾಗಿ ಬಂದರೆ ಮತ್ತೆ ಕೊಲೆ ಮಾಡುವ ಸಾಧ್ಯತೆಗಳಿದೆ. ಹೀಗಾಗಿ ಆತನ್ನು ( vamanjoor Praveen) ಬಿಡುಗಡೆ ಮಾಡಬಾರದು ಎಂದು ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ : Darshan NikitaThukral: ದರ್ಶನ್ ಮತ್ತು ನನ್ನ ಸಂಬಂಧ ಹಾಳು ಮಾಡಿದ್ದು ನಿಖಿತಾ : ಓಂಪ್ರಕಾಶ್ ರಾವ್ ಸ್ಫೋಟಕ ಹೇಳಿಕೆ
ಇನ್ನು ಈ ಬಗ್ಗೆ ಮಾತನಾಡಿರುವ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್, ಸನ್ನಡತೆ ಆಧಾರದಲ್ಲಿ ಪ್ರವೀಣನ ಬಿಡುಗಡೆ ಮಾಡಲಾಗುತ್ತಿದೆ ಅನ್ನುವ ಮಾಹಿತಿ ತಿಳಿದು ಕುಟುಂಬಸ್ಥರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಗ್ರಾಮಾಂತರ ಎಸ್ಪಿಯವರ ಜೊತೆಗೆ ಮಾತನಾಡುತ್ತೇನೆ. ಈ ವಿಚಾರದಲ್ಲಿ ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಈ ನಡುವೆ ಮಂಗಳೂರು ಗ್ರಾಮಾಂತರ ಪೊಲೀಸರು ಪ್ರವೀಣ್ ಕುಮಾರ್ ಸಂಬಂಧಿ ಮತ್ತು ಅಪ್ಪಿ ಶೇರಿಗಾರ್ತಿಯ ಪುತ್ರ ಸೀತಾರಾಮ್, ಪ್ರವೀಣನ ಪತ್ನಿ ಅನಸೂಯ ಮತ್ತು ಸಹೋದರ ಪ್ರದೀಪ್ ಅವರ ಹೇಳಿಕೆಗಳನ್ನು ದಾಖಲಿಸಿದ್ದಾರೆ.
ಘಟನೆಯ ಹಿನ್ನಲೆ
ದ.ಕ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೆರಿಯಡ್ಕ ನಿವಾಸಿಯಾಗಿದ್ದ ಪ್ರವೀಣ, ಮಂಗಳೂರಿನ ಚಿಲಿಂಬಿಯಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದ. ಆಗ ಸಿಂಗಲ್ ನಂಬರ್ ಲಾಟರಿ ಚಟಕ್ಕೆ ಬಿದ್ದು ಬೀದಿ ಪಾಲಾಗಿದ್ದ. ಹಾಗಂತ ಚಟ ಬಿಟ್ಟಿರಲಿಲ್ಲ. ಹೀಗಾಗಿ ಕಾಸು ಸಿಕ್ರೆ ಸಾಕು ಎಂದು ಕಾಯುತ್ತಿದ್ದ.
ಅದರಂತೆ 1994 ಫೆಬ್ರವರಿ 23 ರಂದು ರಾತ್ರಿ ವಾಮಂಜೂರಿನಲ್ಲಿದ್ದ ಅತ್ತೆಯ ಮನೆಗೆ ( ತಂದೆಯ ತಂಗಿ ) ಬಂದಿದ್ದ. ಈ ವೇಳೆ ಹಣದಾಸೆಗಾಗಿ ಅತ್ತೆ ಅಪ್ಪಿ ಶೇರಿಗಾರ್ತಿ (75) ಅವರ ಪುತ್ರಿ ಶಕುಂತಲಾ (36), ಮೊಮ್ಮಗಳು ದೀಪಿಕಾ(9) ಮತ್ತು ಅಪ್ಪಿ ಅವರ ಪುತ್ರ ಗೋವಿಂದ (30) ರನ್ನು ಹಾರೆಯ ಹಿಡಿಯಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ.

ಕೆಲವೇ ದಿನಗಳಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು. ಅಪರಾಧ ಒಪ್ಪಿಕೊಂಡಿದ್ದ ಪ್ರವೀಣ ಕಳವು ಮಾಡಿದ್ದ ಚಿನ್ನಾಭರಣಗಳನ್ನು ಬಚ್ಚಿಟ್ಟಲ್ಲಿಂದ ವಶಪಡಿಸಿಕೊಳ್ಳಲಾಗಿತ್ತು. ಈ ನಡುವೆ ವಿಚಾರಣೆ ಸಂದರ್ಭದಲ್ಲಿ ವಿಚಾರಣೆಗಾಗಿ ಬೆಳಗಾವಿಯ ಹಿಂಡಲಗ ಜೈಲಿನಿಂದ ಮಂಗಳೂರು ಜೈಲಿಗೆ ಕರೆತರುತ್ತಿದ್ದಾಗ ಹುಬ್ಬಳ್ಳಿಯ ಕುಂದಗೋಳದ ಹೊಟೇಲ್ ನಲ್ಲಿ ಊಟ ಮಾಡುತ್ತಿದ್ದ ವೇಳೆ ಬೆಂಗಾವಲು ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ.
ಹಾಗೇ ತಪ್ಪಿಸಿಕೊಂಡವನ್ನು ಸುಮಾರು ವರ್ಷ ಸಿಕ್ಕಿರಲಿಲ್ಲ. ಪ್ರವೀಣನ ಭಯದಿಂದ ಪ್ರವೀಣನ ಸುಳಿವು ನೀಡುವವರಿಗೆ 1 ಲಕ್ಷ ರೂ. ನಗದು ಬಹುಮಾನವನ್ನು ಸಂತ್ರಸ್ತರ ಕುಟುಂಬದವರೇ ಘೋಷಿಸಿದ್ದರು. ಹೀಗೆ ತಲೆ ಮರೆಸಿಕೊಂಡಿದ್ದ ಪ್ರವೀಣ್ ಗೋವಾಕ್ಕೆ ತೆರಳಿ ಅಲ್ಲಿ ಬೇರೆ ಹೆಸರಿನಲ್ಲಿ ಪರಿಚಯಿಸಿಕೊಂಡು ಯುವತಿಯೋರ್ವಳನ್ನು ಮದುವೆಯಾಗಿ ಮಗು ಕರುಣಿಸಿದ್ದ. 1999 ರಲ್ಲಿ ಮಂಗಳೂರಿನ ಆಗಿನ ಇನ್ಸ್‌ಪೆಕ್ಟರ್ ಜಯಂತ್ ಶೆಟ್ಟಿ ನೇತೃತ್ವದ ರೌಡಿ ನಿಗ್ರಹ ದಳ ಆತನನ್ನು ಪತ್ತೆ ಹಚ್ಚಿ ಬಂಧಿಸಿ ಮತ್ತೆ ಜೈಲಿಗಟ್ಟಿತ್ತು.
ಇನ್ನು ಮಂಗಳೂರಿನ ನ್ಯಾಯಾಲಯವು ಈತನ ಭೀಕರ ಕೃತ್ಯಕ್ಕೆ ಗಲ್ಲು ಶಿಕ್ಷೆ ವಿಧಿಸಿತ್ತು. ಕೆಳ ಹಂತದ ನ್ಯಾಯಾಲಯದ ನೀಡಿದ್ದ ತೀರ್ಪನ್ನು ಹೈಕೋರ್ಟ್ ಮತ್ತು 2003 ರಲ್ಲಿ ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಬಳಿಕ ಮರಣ ದಂಡನೆ ಶಿಕ್ಷೆ ರದ್ದು ಕೋರಿ ರಾಷ್ಟ್ರಪತಿಗೆ ಕ್ಷಮಾಪಣೆಯ ಅರ್ಜಿಯನ್ನೂ ಸಲ್ಲಿಸಿದ್ದ. 2013 ಏಪ್ರಿಲ್ 4ರಂದು ರಾಷ್ಟ್ರಪತಿಯವರು ಈ ಅರ್ಜಿಯನ್ನು ತಿರಸ್ಕರಿಸಿದ್ದರು. 2014 ಜನವರಿ 22 ರಂದು ಸುಪ್ರೀಂ ಕೋರ್ಟ್ ಈತನ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು. ಪ್ರಸ್ತುತ Hindalaga prison in Belagaviಯಲ್ಲಿ ಪ್ರವೀಣ ಶಿಕ್ಷೆ ಅನುಭವಿಸುತ್ತಿದ್ದಾನೆ.
ಇದೀಗ 62 ವರ್ಷದ ಪ್ರವೀಣನಿಗೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಬಿಡುಗಡೆ ಭಾಗ್ಯ ಸಿಕ್ಕಿದೆ. ಸನ್ನಡತೆಯ ಆಧಾರದಲ್ಲಿ ಅದಿಕಾರಿಗಳು ಈತನ ಹೆಸರನ್ನು ಪಟ್ಟಿಯಲ್ಲಿ ಸೇರಿಸಿದ್ದಾರೆ. ಆದರೆ ಕುಟುಂಬಸ್ಥರಿಗೆ ಇದು ಆತಂಕ ತಂದಿಟ್ಟಿದೆ.
Discussion about this post