Uttarkashi Tunnel ಕುಸಿತ ಪ್ರಕರಣದಲ್ಲಿ ಕಾರ್ಮಿಕರ ರಕ್ಷಣೆಗೆ ಸಮರೋಪಾದಿ ಕ್ರಮ
Uttarkashi Tunnel ಒಳಗಡೆ ಸಿಲುಕಿಕೊಂಡಿರುವ 41 ಕಾರ್ಮಿಕರನ್ನು ಸುರಕ್ಷಿತವಾಗಿ ಕರೆ ತರುವ ನಿಟ್ಟಿನಲ್ಲಿ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ. ಈಗಾಗಲೇ ನಾಲ್ಕೈದು ಹಂತಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಅಂತರರಾಷ್ಟ್ರೀಯ ತಜ್ಞರು ಸೇರಿದಂತೆ ಅನೇಕರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮಹಮೂದ್ ಅಹ್ಮದ್ ವಹಿಸಿಕೊಂಡಿದ್ದು, 11 ದಿನಗಳ ಕಾಲದಿಂದ ಉತ್ತರಕಾಶಿ ಸಮೀಪದ ಸಿಲ್ ಕ್ಯಾರಾದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಶೀಘ್ರದಲ್ಲೇ ರಕ್ಷಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ : ಉಗ್ರರ ವಿರುದ್ಧ ಕಾರ್ಯಾಚರಣೆ : ಮಂಗಳೂರಿನ ಕ್ಯಾಪ್ಟನ್ ಎಂವಿ ಪ್ರಾಂಜಲ್ ( mv pranjal ) ಸೇರಿ ನಾಲ್ವರು ಹುತಾತ್ಮ
ಈಗಾಗಲೇ ಅಮೆರಿಕಾದ ಅಗರ್ ಯಂತ್ರ 45 ಮೀಟರ್ ಗೂ ಅಧಿಕ ಆಳಕ್ಕೆ ಕೊಳವೆ ಮಾರ್ಗ ಕೊರೆದಿದ್ದು, ಇನ್ನು 12 ಮೀಟರ್ ಕೊರೆದ್ರೆ ಒಂದು ಹಂತದ ಕಾರ್ಯಾಚರಣೆ ಮುಕ್ತಾಯವಾಗುತ್ತದೆ. ಬಳಿಕ 800 ಮಿಮೀ ವ್ಯಾಸದ ಕಬ್ಬಿಣದ ದೊಡ್ಡ ಕೊಳವೆಗಳನ್ನು ಸುರಂಗದೊಳಗೆ ಇಳಿಸಲಾಗುತ್ತದೆ. ನಂತರ NDRF ಸಿಬ್ಬಂದಿ ಈ ಬೃಹತ್ ಕೊಳವೆ ಮಾರ್ಗದ ಮೂಲಕವೇ ಕಾರ್ಮಿಕರನ್ನು ಹೊರ ತರಲಿದ್ದಾರೆ.
ಈ ನಡುವೆ ಸ್ಥಳದಲ್ಲಿ 41 ಅಂಬ್ಯುಲೆನ್ಸ್ ಗಳನ್ನು ನೇಮಿಸಲಾಗಿದ್ದು, ಕಾರ್ಮಿಕರು ಸುರಂಗದಿಂದ ಹೊರ ಬಂದ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಸ್ಥಳೀಯ ಆಸ್ಪತ್ರೆಯಲ್ಲೂ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಜಿಲ್ಲೆಯ ಇತರ ಆಸ್ಪತ್ರೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.
#WATCH | Uttarkashi (Uttarakhand) tunnel rescue | Welding experts have been called from Delhi to the Silkyara tunnel site where the rescue operation is underway to bring out the trapped workers. pic.twitter.com/QsNVZKg2Tq
— ANI (@ANI) November 23, 2023
ಇದರೊಂದಿಗೆ ಕಾರ್ಮಿಕರ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾದ್ರೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಲಿಕಾಫ್ಟರ್ ಒಂದನ್ನು ಕೂಡಾ ತರಿಸಿಕೊಳ್ಳಲಾಗಿದೆ. ಯಾವುದೇ ಕ್ಷಣದಲ್ಲಿ ಬೇಕಾದ್ರೂ ಕಾರ್ಮಿಕರನ್ನು ಏರ್ ಲಿಫ್ಟ್ ಮಾಡಬಹುದಾಗಿದೆ.
ಇನ್ನು ಕಾರ್ಯಾಚರಣೆ ವೇಳೆ ಕೆಲವೊಂದು ತಾಂತ್ರಿಕ ತೊಂದರೆಗಳು ಎದುರಾಗುತ್ತಿದೆ. ಹೀಗಾಗಿ ಸ್ಥಳಕ್ಕೆ ದೆಹಲಿಯಿಂದ Welding expertsಗಳನ್ನು ಕರೆಸಿಕೊಳ್ಳಲಾಗಿದೆ.
Discussion about this post