ಮೊಬೈಲ್ ಲ್ಯಾಪ್ ಟಾಪ್ ಗಳ ಜೊತೆಗೆ ಚಾರ್ಜರ್ ಒಯ್ಯುವ ಸಮಸ್ಯೆ ಇರೋದಿಲ್ಲ – ( USB-C charging port)
ನವದೆಹಲಿ : ( USB-C charging port) ಮೊಬೈಲ್ ಕಂಪನಿಗಳು ಬದಲಾದಂತೆ ಚಾರ್ಜರ್ ಗಳೂ ಕೂಡಾ ಬದಲಾಗುತ್ತಿತ್ತು. ಒಂದೊಂದು ಮೊಬೈಲ್ ಗೆ ಒಂದೊಂದು ಚಾರ್ಜರ್. ಇನ್ನು ಲ್ಯಾಪ್ ಟಾಪ್ ಕಥೆಯೂ ಕೂಡಾ ಇದೇ ರೀತಿ. ಒಂದೊಂದು ಕಂಪನಿಯದ್ದು ಒಂದೊಂದು ಚಾರ್ಜರ್. ಈ ಎಲ್ಲಾ ಸಮಸ್ಯೆಗಳಿಗೆ ಮಂಗಳ ಹಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಹೊಸ ಎಲೆಕ್ಟ್ರಾನಿಕ್ ಉಪಕರಣ ಖರೀದಿಸಿದ ವೇಳೆ ಇನ್ಮುಂದೆ ಹೊಸ ಚಾರ್ಜರ್ ಖರೀದಿಸುವ ತಲೆ ನೋವು ಇರೋದಿಲ್ಲ. ಮೊಬೈಲ್, ಲ್ಯಾಪ್ ಟಾಪ್ ಹೀಗೆ ವಿವಿಧ ಇಲೆಕ್ಟ್ರಾನಿಕ್ ಉಪಕರಣಗಳಿಗೆ ಒಂದೇ ರೀತಿಯ ಚಾರ್ಜರ್ ಫೋರ್ಟ್ ಕಡ್ಡಾಯ ಮಾಡಿ ಆದೇಶ ಹೊರಡಿಸುವ ಸಾಧ್ಯತೆಗಳಿದೆ.
ಇದನ್ನು ಓದಿ : Illegal Relationship : ಪತ್ನಿಯ 300 ಪವನ್ ಚಿನ್ನ ಕದ್ದು ಪ್ರೇಯಸಿಗೆ ನೀಡಿದ ಖದೀಮ ಅಂದರ್
ಈ ಸಂಬಂಧ ಚರ್ಚೆ ನಡೆಸಲು ಆಗಸ್ಟ್ 17 ರಂದು ಗ್ರಾಹಕ ಸಚಿವಾಲಯ ಉದ್ಯಮಿಗಳ ಸಭೆ ಕರೆದಿದೆ. 2 ರೀತಿಯ ಚಾರ್ಜಿಂಗ್ ಪೋರ್ಟ್ ಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಟ್ಯಾಬೆಲ್ಟ್, ಇಯರ್ ಬಡ್ ಹೀಗೆ ಈ ಶ್ರೇಣಿಯ ಸಾಧನೆಗಳಿಗೆ ಒಂದು ರೀತಿಯ ಚಾರ್ಜರ್ ಪೋರ್ಟ್ ಮತ್ತು ಫೀಟರ್ ಫೋನ್ ಗಳಿಗಾಗಿ ಒಂದು ಚಾರ್ಜಿಂಗ್ ಪೋರ್ಟ್ ತರಲು ಯೋಜನೆಗಳು ತಯಾರಾಗಿದೆ.
ದೇಶದಲ್ಲಿ ಹೆಚ್ಚುತ್ತಿರುವ ಇ ತ್ಯಾಜ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಜ್ಜೆ ಇಟ್ಟಿದೆ. ದೇಶದಲ್ಲಿ ಸೃಷ್ಟಿಯಾಗುವ ಇ ತ್ಯಾಜ್ಯದ ಪೈಕಿ ಶೇ 25ರಷ್ಟು ತ್ಯಾಜ್ಯವನ್ನು ಮಾತ್ರ ನಿರ್ವಹಣೆ ಮಾಡಲಾಗುತ್ತಿದೆ.
Discussion about this post