ಬಾಲಿವುಡ್’ನ ಸೂಪರ್ ಜೋಡಿಗಳಲ್ಲಿ ಒಂದಾದ ರಣ್’ವೀರ್ ಹಾಗೂ ಹಾಗೂ ದೀಪಿಕಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಂತೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.
ಈ ನಡುವೆ ಪ್ರತಿಷ್ಠಿತ ಕಾಂಡೋಮ್ ಕಂಪೆನಿ ಕೂಡಾ ದೀಪ್-ವೀರ್ ಮದುವೆಗೆ ವಿನೂತನವಾಗಿ ಶುಭಾಶಯ ಕೋರಿದೆ..
ಡ್ಯೂರೆಕ್ಸ್ ಎಂಬ ಕಾಂಡೋಮ್ ಕಂಪೆನಿ ದೀಪಿಕಾ ಹಾಗೂ ರಣ್’ವೀರ್ ಮದುವೆಗೆ ಟ್ವಿಟ್ಟರ್ ಮೂಲಕ ಶುಭಾಶಯ ಹೇಳಿದ್ದು.
“ದೀಪಿಕಾ ಹಾಗೂ ರಣ್’ವೀರ್ಅಧಿಕೃತವಾಗಿ ಅದರ ಮೇಲೆ ರಿಂಗ್ ಹಾಕಿಕೊಳ್ಳುವುದಕ್ಕೆ ಶುಭಾಶಯಗಳು” ಎಂದು ಟ್ವೀಟ್ ಮಾಡಿದೆ. ಜೊತಗೆ ನಾವು ನಿಮ್ಮನ್ನು ಸುತ್ತುವರಿದಿದ್ದೇವೆ ಅಂದಿದೆ.
ಈ ಹಿಂದೆ 2017ರಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮದುವೆಯಾಗಿದ್ದಾಗಇದೇ ಡ್ಯೂರೆಕ್ಸ್ ಕಂಪೆನಿ “ವಿರಾಟ್ ಹಾಗೂ ಅನುಷ್ಕಾ ನಿಮಗೆ ಮದುವೆಯ ಶುಭಾಶಯಗಳು. ನಿಮ್ಮನಡುವೆ ಡ್ಯೂರೆಕ್ಸ್ ಬಿಟ್ಟು ಏನೂ ಬಾರದೇ ಇರಲಿ” ಎಂದು ಟ್ವೀಟ್ ಮಾಡಿತ್ತು.
ಇನ್ನು ಅಮುಲ್ ಸಂಸ್ಥೆಯೂ ವಿಭಿನ್ನವಾಗಿ ಶುಭಾಶಯ ಕೋರಿದೆ.
Discussion about this post