ಉಪ್ಪಿನಂಗಡಿ : ಈ PDO ಗಳು ಮನಸ್ಸು ಮಾಡಿದ್ರೆ ಗ್ರಾಮಗಳನ್ನು ಸಾಕಷ್ಟು ಅಭಿವೃದ್ಧಿ ಮಾಡಬಹುದು. ಆದರೆ ಆದ್ಯಾಕೋ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ನಿರೀಕ್ಷೆಯಷ್ಟು ಕೆಲಸ ಮಾಡೋದಿಲ್ಲ. ಕೆಲವೇ ಕೆಲವು ಅಧಿಕಾರಿಗಳು ಸರ್ಕಾರ ಕೊಟ್ಟಿರುವ ಅಧಿಕಾರ ಚಲಾಯಿಸುತ್ತಾರೆ. ಕನಿಷ್ಟ ಪಕ್ಷ ತಮ್ಮ ಗ್ರಾಮದ ವ್ಯಾಪ್ತಿಯ ರಸ್ತೆಗಳಲ್ಲಿ ಎಸೆಯಲ್ಪಡುವ ಕಸವನ್ನು ನಿಯಂತ್ರಿಸಿದ್ರೆ ಸಾಕಿತ್ತು.
ಈ ನಡುವೆ ಉಪ್ಪಿನಂಗಡಿ ಹೊಸ ಬಸ್ ನಿಲ್ದಾಣದಲ್ಲಿ ನಿಯಮ ಉಲ್ಲಘಿಸಿ ನಿಲ್ಲಿಸಿದ್ದ RTO ಅಧಿಕಾರಿಯ ವಾಹನಕ್ಕೆ ಜಿಲ್ಲಾ ಪಂಚಾಯತ್ PDO ಲಾಕ್ ಜಡಿದ ಘಟನೆ ನಡೆದಿದೆ.
ಉಪ್ಪಿನಂಗಡಿಯ ಹೊಸ ಬಸ್ ನಿಲ್ದಾಣ ಗ್ರಾಮ ಪಂಚಾಯತ್ ಉಸ್ತುವಾರಿಯಲ್ಲಿದ್ದು, ಸರ್ಕಾರಿ ಹಾಗೂ ಖಾಸಗಿ ಬಸ್ ಗಳು ಒಂದೇ ನಿಲ್ದಾಣಕ್ಕೆ ಆಗಮಿಸುತ್ತದೆ. ಸಾಕಷ್ಟು ಸಂಖ್ಯೆಯಲ್ಲಿ ಬಸ್ ಗಳು ಬರುವುದರಿಂದ ಸಾಕಷ್ಟು ಇಕ್ಕಟಿನ ಪರಿಸ್ಥಿತಿಯಾಗುತ್ತಿದೆ. ಹೀಗಾಗಿ ಲಘು ವಾಹನಗಳು ಪ್ರವೇಶಿಸದಂತೆ ಗ್ರಾಮ ಪಂಚಾಯತ್ ಆದೇಶಿಸಿದೆ.
ಹೀಗಿದ್ದರೂ RTO ಗೆ ಸೇರಿದ ತನಿಖಾ ತಂಡದ ವಾಹನವನ್ನು ಬಸ್ ನಿಲ್ದಾಣದ ಒಳಗೆ ನಿಲ್ಲಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಗ್ರಾಮ ಪಂಚಾಯತ್ PDO ಸರ್ಕಾರಿ ವಾಹನಕ್ಕೆ ಲಾಕ್ ಜಡಿದಿದ್ದಾರೆ.
ಇದಾದ ಬಳಿಕ ಸ್ಥಳಕ್ಕೆ ಬಂದ RTO ಅಧಿಕಾರಿಗಳು ಪಂಚಾಯತ್ ಗೆ ದಂಡ ಪಾವತಿಸಿ ವಾಹನ ತೆಗೆದುಕೊಂಡಿದ್ದಾರೆ.
ಈಗ ಹೇಳಿ ಅದೆಷ್ಟು ಪಿಡಿಓ ಗಳು ಇಂತಹ ಕಾರ್ಯಮಾಡಿದ್ದಾರೆ.
Discussion about this post