ಕೆಲ ದಿನಗಳ ಹಿಂದೆ ಕೃಷ್ಣ ಜನ್ಮಾಷ್ಟಮಿಯಂದು ಕೇರಳ ಯುವತಿಯೊಬ್ಬಳು ಮಾಡಿದ ನೃತ್ಯ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆ ಬಾಲಕಿ ಯಾರು, ವೈರಲ್ ಆಗಿದ್ದು ಹೇಗೆ ಅನ್ನುವ ಕುರಿತಂತೆ Torrent Spree ಈ ಸಂಬಂಧ ವಿಶೇಷ ವರದಿಯನ್ನು ಕೂಡಾ ಪ್ರಕಟಿಸಿತ್ತು.
ಈ ವೈರಲ್ ವಿಡಿಯೋ ಕುರಿತಂತೆ ಪಕ್ಕಾ ಸುದ್ದಿಯನ್ನು ಕನ್ನಡಿಗರಿಗೆ ಮೊದಲು ಕೊಟ್ಟಿದ್ದು ನಿಮ್ಮ ನೆಚ್ಚಿನ Torrent Spree. ಹಾಗಿದ್ದರೂ ನಮ್ಮಲ್ಲೇ ಮೊದಲು ಎಂದು ನಾವು ಹೇಳಿಕೊಂಡಿಲ್ಲ ಬಿಡಿ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕೆಲ ಕಿಡಿಗೇಡಿಗಳು ಆ ಯುವತಿಯನ್ನು ಅನುಕರಿಸಲು ಹೋಗಿದ್ದರು. ಕೃಷ್ಣನ ಮೇಲಿನ ಭಕ್ತಿಯಿಂದ, ಆ ಬಾಲಕಿಯ ನಟನೆ ಮೇಲಿನ ಅಭಿಮಾನದಿಂದ ಹೋಗಿದ್ದರೆ ಏನಾಗುತ್ತಿರಲಿಲ್ಲ. ಬದಲಾಗಿ ವಿಡಂಬನೆ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.
ಅದರಲ್ಲೂ ಚಿಕ್ಕಮಗಳೂರಿನ ಪುಡಾರಿಗಳು ಬಿಯರ್ ಬಾಟಲಿ ಇಟ್ಟು ಕೃಷ್ಣನನ್ನೇ ಅವಮಾನಿಸಿದ್ದರು. ಇದು ಆಸ್ತಿಕರ ಅಸಹನೆಗೆ ಕಾರಣವಾಗಿತ್ತು.
ಕಿಡಿಗೇಡಿಗಳು ಮಾಡಿದ ಟಿಕ್ ಟಾಕ್ ವಿಡಿಯೋ ಮೂಲ ಕಂಡು ಹಿಡಿಯಲು ಮುಂದಾದ ಕಾರ್ಕಳದ ಹಿಂದೂ ಸಂಘಟನೆ ಕಾರ್ಯಕರ್ತರು, ಟಿಕ್ ಟಾಕ್ ಶೂರರ ವಿಳಾಸ ಪತ್ತೆ ಮಾಡಿದ್ದಾರೆ.
ದಕ್ಷಿಣ ಕ್ನನಡ ಜಿಲ್ಲೆಯ ಮೂಡುಬಿದಿರೆಯ ಹುಡುಗನೊಬ್ಬ ಈ ತಂಡದಲ್ಲಿದ್ದು, ಅವನಿಗೆ ಎಚ್ಚರಿಕೆ ನೀಡಿ, ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಇದರಿಂದ ಭಯಗೊಂಡ ಮೂರು ಟಿಕ್ ಟಾಕ್ ಕಲಾವಿದರು ಕ್ಷಮೆ ಕೇಳಿದ್ದಾರೆ. ವೀಡಿಯೋ ಮೂಲಕ ತಮ್ಮ ತಪ್ಪಾಗಿದೆ ಎಂದು ಕೇಳಿಕೊಂಡಿದ್ದಾರೆ.
Discussion about this post