ಚಿಲ್ಲರೆ ವ್ಯಾಪಾರಿಯೊಬ್ಬ ಚಿಲ್ಲರೆ ಕೊಟ್ಟು ( coins buys motorbike ) ಬೈಕ್ ಖರೀದಿಸಿ ಇದೀಗ ವೈರಲ್ ಆಗಿದ್ದಾನೆ
ಕೋಲ್ಕತ್ತಾ : ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ವ್ಯಾಪಾರಿಯಾಗಿರುವ ಸುಬ್ರತಾ ಸರ್ಕಾರ್ ಗೆ ( Subrata Sarkar ) ಬೈಕ್ ಖರೀದಿಸಬೇಕು ಅನ್ನುವ ಆಸೆಯಿತ್ತು. ಆದರೆ ಅಷ್ಟು ಮೊತ್ತ ಕೊಟ್ಟು ಬೈಕ್ ಖರೀದಿಸುವುದು ಸುಲಭವಿರಲಿಲ್ಲ. ಹೀಗಾಗಿ ಒಂದಿಷ್ಟು ವರ್ಷ ಕಳೆಯಲಿ ಎಂದು ತಮ್ಮ ಆಸೆಯನ್ನು ತಮ್ಮಲ್ಲೇ ಅದುಮಿಟ್ಟುಕೊಂಡಿದ್ದಾರೆ. ( coins buys motorbike )
ಅಷ್ಟು ಹೊತ್ತಿಗೆ ನೋಟು ನಿಷೇಧವಾಯ್ತು. ಈ ವೇಳೆ ನಾಣ್ಯ ಚಲಾವಣೆ ಹೆಚ್ಚಿದ ಕಾರಣ ನಾಣ್ಯಗಳ ಚಲಾವಣೆ ಹೆಚ್ಚಾಯ್ತು. ಇನ್ನು ಸುಬ್ರತಾ ಅವರು ಚಿಲ್ಲರೆ ಅಂಗಡಿಯೊಂದನ್ನು ಇಟ್ಟುಕೊಂಡಿದ್ದ ಕಾರಣ ಗ್ರಾಹಕರು ಅತೀ ಹೆಚ್ಚು ಚಿಲ್ಲರೆಯನ್ನೇ ಕೊಡುತ್ತಿದ್ದರು. ಹೀಗೆ ಸಂಗ್ರಹವಾದ ಚಿಲ್ಲರೆಯಲ್ಲಿ ಎರಡು ರೂಪಾಯಿ ಮುಖಬೆಲೆಯ ನಾಣ್ಯವನ್ನು ಉಳಿತಾಯ ಎಂದು ಕವರ್ ನಲ್ಲಿ ಹಾಕಿ ಇಟ್ಟುಕೊಳ್ಳತೊಡಗಿದರು. ಮುಂದೊಂದು ದಿನ ಏನಾದರೂ ಖರೀದಿಸಬಹುದು ಅನ್ನುವುದು ಅವರ ಇಚ್ಛೆಯಾಗಿತ್ತು. ಆಗ ಇದೇ ಹಣದಲ್ಲಿ ಬೈಕ್ ಖರೀದಿಸುತ್ತೇನೆ ಅನ್ನುವ ಕಲ್ಪನೆ ಅವರಿಗೆ ಇರಲಿಲ್ಲ.
ಹೀಗೆ 2016ರ ನವೆಂಬರ್ ನಿಂದ ಪ್ರಾರಂಭವಾದ ಚಿಲ್ಲರೆ ಸಂಗ್ರಹ ಹಾಗೇ ಸಾಗಿತ್ತು. ಕಳೆದ ತಿಂಗಳು ಬೈಕ್ ಶೋ ರೂಮ್ ಮುಂದೆ ಸಾಗುವಾಗ ನಾನ್ಯಾಕೆ ಬೈಕ್ ಖರೀಸಬಾರದು ಅನ್ನುವ ಹಳೆಯ ಕನಸೊಂದು ಮತ್ತೆ ಚಿಗುರೊಡೆದಿದೆ. ತಡ ಮಾಡಲಿಲ್ಲ 17 ವರ್ಷದ ತನ ಮಗನಿಗೆ ಮನೆಯಲ್ಲಿ ಇಟ್ಟಿದ್ದ ನಾಣ್ಯ ಎಣಿಸಲು ಸೂಚಿಸಿದ್ದಾರೆ.
ಇದನ್ನೂ ಓದಿ : siddaramaiah : ನಿಮ್ಮ ಹಣ ಯಾರಿಗೆ ಬೇಕು…. ಸಿದ್ದರಾಮಯ್ಯ ಕೊಟ್ಟ ಕಾಸನ್ನು ವಾಹನದ ಮೇಲೆ ಎಸೆದ ಮುಸ್ಲಿಂ ಮಹಿಳೆ
ಈ ನಡುವೆ ಬೈಕ್ ಶೋ ರೂಮ್ ಮ್ಯಾನೇಜರ್ ಅನ್ನು ಸಂಪರ್ಕಿಸಿ ನಾಣ್ಯ ಕೊಟ್ಟು ಬೈಕ್ ಖರೀದಿಸಬಹುದೇ ಎಂದು ವಿಚಾರಿಸಿದ್ದಾರೆ. ಅವರು ಸರಿ ಅಂದ ಬೆನ್ನಲ್ಲೇ ತಲಾ 10 ಸಾವಿರ ರೂಪಾಯಿಯ 5 ಪ್ಯಾಕೆಟ್ ಮತ್ತು ದೊಡ್ಡ ಗೋಣೆ ಚೀಲದಲ್ಲಿ ನಾಣ್ಯಗಳನ್ನು ತುಂಬಿ ರಿಕ್ಷಾ ಮೂಲಕ ಶೋ ರೂಮ್ ಗೆ ತಲುಪಿಸಿದ್ದಾರೆ.
ಇದಾದ ಬಳಿಕ ಸತತ ಮೂರು ದಿನಗಳ ಕಾಲ 5 ಮಂದಿ ಸಿಬ್ಬಂದಿ ನಾಣ್ಯಗಳನ್ನು ಎಣಿಸಿದ್ದಾರೆ ಒಟ್ಟು 1 ಲಕ್ಷದ 50 ಸಾವಿರ ರೂಪಾಯಿ ನಾಣ್ಯದಲ್ಲೇ ಬಂದಿತ್ತು. ಉಳಿದ ಮೊತ್ತವನ್ನು ಸುಬ್ರತಾ ಕೊಟ್ಟಿದ್ದು, ಇದೇ ಮಂಗಳವಾರ ಬೈಕ್ ಕೀ ಹಸ್ತಾಂತರಿಸಲಾಗಿದೆ.
ಅಪ್ರಾಪ್ತ ಮಗನಿಗೆ ಬೈಕ್ ಕೊಟ್ಟ ತಾಯಿಗೆ 25,500 ರೂ ದಂಡ ವಿಧಿಸಿದ ಕೋರ್ಟ್
18 ವರ್ಷದ ತುಂಬದ ಮಕ್ಕಳಿಗೆ, ಲೈಸೆನ್ಸ್ ಇಲ್ಲದ ಮಕ್ಕಳಿಗೆ ವಾಹನ ಕೊಡುವ ಮುನ್ನ ಎಚ್ಚರ ವಹಿಸಿ. ತಪ್ಪು ಮಾಡಿದ್ರೆ ಮನೆ ಮಠ ಮಾರುವ ಪರಿಸ್ಥಿತಿ ಬಂದರೂ ಅಚ್ಚರಿ ಇಲ್ಲ
ಕಾರವಾರ : ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಲಯ ಅಪ್ರಾಪ್ತ ಮಗನಿಗೆ ವಾಹನ ಕೊಟ್ಟ ತಾಯಿಗೆ 25,500 ರೂ ದಂಡವನ್ನು ವಿಧಿಸಿದೆ. ಈ ಮೂಲಕ ಏನು ಮಾಡಿದರೂ ನಡೆಯುತ್ತದೆ ಅನ್ನುವ ಪೋಷಕರಿಗೆ ಎಚ್ಚರಿಕೆ ರವಾನಿಸಲಾಗಿದೆ.
ರೇಷ್ಮಾ ಅಲಿ ಶೇಖ್ ಅನ್ನುವವರು ತಮ್ಮ ಅಪ್ರಾಪ್ತ ಮಗನಿಗೆ ನಗರದಲ್ಲಿ ಸ್ಕೂಟಿ ಚಲಾಯಿಸಲು ನೀಡಿದ್ದರು. ಈ ವೇಳೆ ತಡೆದಿದ್ದ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಿಯಮಗಳ ಪ್ರಕಾರ ಆಪ್ತಾಪ್ತರಿಗೆ ವಾಹನ ಕೊಟ್ಟರೆ ಪೋಷಕರು ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಅದರಂತೆ ಮಗನಿಗೆ ವಾಹನ ಕೊಟ್ಟ ಕರ್ಮಕ್ಕೆ ತಾಯಿ ರೇಷ್ಮಾ ಅಲಿ ಶೇಖ್ 25 ಸಾವಿರ ದಂಡ ಕಟ್ಟಬೇಕಾಗಿದೆ.
Discussion about this post