ಟೋಕಿಯೋ : ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಭರ್ಜರಿ ಗೆಲುವು ಸಾಧಿಸಿದ್ದ ಹಾಕಿ ಇಂಡಿಯಾ, ಎರಡನೇ ಪಂದ್ಯದಲ್ಲಿ ಸೋಲಿನ ಕಹಿ ಉಂಡಿದೆ. ನ್ಯೂಜಿಲೆಂಡ್ ಎದುರು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡ ಟೀಂ ಇಂಡಿಯಾ ಆಸ್ಟ್ರೇಲಿಯಾ ಎದುರು ಎಡವಿತು. ಹೀಗಾಗಿಯೇ 7-1 ಗೋಲುಗಳ ಅಂತರದಿಂದ ಸೋಲು ಅನುಭವಿಸಿತು.
ಪಂದ್ಯದ ಪ್ರಾರಂಭದಲ್ಲೇ ಆಸ್ಟ್ರೇಲಿಯಾ ತಂಡ ಅಗ್ರೇಸಿವ್ ಹೋರಾಟಕ್ಕೆ ಇಳಿದಿತ್ತು. 8ನೇ ನಿಮಿಷದಲ್ಲಿ ಭಾರತ ತಂಡಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಆದರೆ ಹರ್ಮನ್ ಪ್ರೀತ್ ಅವಕಾಶವನ್ನು ಕೈ ಚೆಲ್ಲಿದರು. ಉದಾದ ಮೂರೇ ನಿಮಿಷದಲ್ಲಿ ಆಸ್ಟ್ರೇಲಿಯಾಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಡೇನಿಯಲ್ ಬೀಲೆ ಗೋಲಾಗಿ ಪರಿವರ್ತಿಸಿದರು. ಹೀಗಾಗಿ ಆಸ್ಟ್ರೇಲಿಯಾ 1-0 ಮುನ್ನಡೆ ಪಡೆಯಿತು.
ಎರಡನೇ ಕ್ವಾರ್ಟರ್ ನಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು ಜೆರಾಮಿ ಹ್ಯಾವರ್ಡ್ ಗೋಲಾಗಿ ಪರಿವರ್ತಿಸಿದದರು. ಇದರ ಬೆನ್ನಲ್ಲೇ ಫ್ಲಿನ್ ಓಗಿಲ್ವಿಯೇ ಗೋಲು ಬಾರಿಸಿದರು. ಇನ್ನೇನು ಎರಡನೇ ಕ್ವಾರ್ಟರ್ ಮುಗಿಯಲು ಕೆಲವೇ ನಿಮಿಷಗಳಿದೆ ಅನ್ನುವಾಗ ಜೋಶುವಾ ಬ್ಲಿಟ್ ಗೋಲು ಬಾರಿಸಿ 4-0 ಮುನ್ನಡೆ ಸಾಧಿಸಿತು.
ಮೂರನೇ ಕ್ವಾರ್ಟರ್ ನಲ್ಲಿ ಭಾರತದ ದಿಲ್ ಪ್ರೀತ್ ಸಿಂಗ್ ಗೋಲು ಬಾರಿಸಿ 4-1ರ ಹೋರಾಟಕ್ಕೆ ಸಜ್ಜಾದರು. ಆದರೆ ಬ್ಲೇಕ್ ಗೋವರ್ ಗೋಲು ಬಾರಿಸಿ 5-1ರ ಹೋರಾಟಕ್ಕೆ ಏರಿದರು. ಇನ್ನು ಅಂತಿಮ ಸುತ್ತಿನ ಹೋರಾಟದಲ್ಲಿ ಆಸ್ತ್ಟೇಲಿಯಾ ಎರಡು ಗೋಲು ಬಾರಿಸಿ 7-1 ಅಂತರದಲ್ಲಿ ಗೆಲುವು ಬರೆಯಿತು.
Discussion about this post