ಟೋಕಿಯೋ : ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಟೋಕಿಯೋ 2020 ನಲ್ಲಿ ಭರ್ಜರಿಯಾಗಿ ಶುಭಾರಂಭ ಮಾಡಿದ್ದಾರೆ. ಮಹಿಳಾ ಸಿಂಗಲ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಸುಲಭವಾಗಿ ಗೆಲವು ದಾಖಲಿಸಿರುವ ಅವರು ಒಲಿಂಪಿಕ್ಸ್ ನಲ್ಲಿ ಭಾರತ ಮತ್ತೊಂದು ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ.
ಮಹಿಳಾ ಸಿಂಗಲ್ ಬ್ಯಾಡ್ಮಿಂಟನ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಇಸ್ರೇಲಿನ ಕೆಸ್ನಿಯಾ ಪೊಲಿಕರ್ಪೋವಾ ಎದುರು 21-7,21-10 ನೇರ ಗೇಮ್ ಗಳಲ್ಲಿ ಗೆಲವು ದಾಖಲಿಸಿದ ಸಿಂಧು ಮೊದಲ ಗೇಮ್ ನಲ್ಲಿ 13 ಅಂಕಗಳ ಭಾರೀ ಅಂತರದ ಗೆಲುವು ದಾಖಲಿಸಿದರು.
2016ರ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸಿಂಧು, ಈ ಬಾರಿ ಮತ್ತೊಂದು ಪದಕದ ಭರವಸೆ ಎನಿಸಿದ್ದಾರೆ.
Discussion about this post