ಬೆಂಗಳೂರು : ಚೀನಾ ಹಾಗೂ ಭಾರತದ ನಡುವಿನ ಸಂಬಂಧ ಹಳಸಿದ ಹಿನ್ನಲೆಯಲ್ಲಿ ಚೀನಾ APPಗಳಿಗೆ ಭಾರತ ಗೇಟ್ ಪಾಸ್ ನೀಡಿತ್ತು. ದೇಶದ ಕಾನೂನುಗಳನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ಚೀನಾ APPಗಳಿಗೆ ನಿಷೇಧ ಹೇರಲಾಗಿತ್ತು ಅದರಲ್ಲಿ ಬೈಟ್ ಡ್ಯಾನ್ಸ್ ಸಂಸ್ಥೆ ಹಲವು APPಗಳು ಸೇರಿತ್ತು. ಇದರಲ್ಲಿ ಪ್ರಮುಖವಾದದ್ದು TIK TOK.
TIK TOK ಬ್ಯಾನ್ ಆಗಿದ್ದು ಹಲವಾರು ಮಂದಿಗೆ ಬೇಸರ ಉಂಟು ಮಾಡಿತ್ತು. TIK TOK APP ನಿಷೇಧಗೊಂಡ ಬೆನ್ನಲ್ಲೇ ಭಾರತದ ಹಲವು APPಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ಆದರೆ TIK TOK APPನಷ್ಟು ಜನಪ್ರಿಯತೆಯನ್ನು ಗಳಿಸಲು ಸಾಧ್ಯವಾಗಲಿಲ್ಲ.
ಈ ನಡುವೆ ಟಿಕ್ ಟಾಕ್ ಹೊಸ ರೂಪದಲ್ಲಿ ಭಾರತಕ್ಕೆ ಕಾಲಿಡಲು ಸಜ್ಜಾಗಿದೆ ಅನ್ನುವ ಸುದ್ದಿ ಬಂದಿದೆ. TIK TOKನ ಮಾತೃ ಸಂಸ್ಥೆ ಬೈಟ್ ಡ್ಯಾನ್ಸ್ : TICK TOCK ಹೆಸರಿನ ಹೊಸ APP ನೋಂದಣಿಗಾಗಿ ಟ್ರೇಡ್ ಮಾರ್ಕ್ ತನ್ನದಾಗಿಸಲು ಅರ್ಜಿ ಸಲ್ಲಿಸಿದೆ. ಜುಲೈ 6 ರಂದು ಈ ಅರ್ಜಿ ಸಲ್ಲಿಕೆಯಾಗಿದ್ದು, TICK TOCK APP ಮನೋರಂಜನೆಯನ್ನು ಹೊಂದಿರುವ ಮಲ್ಟಿ ಮೀಡಿಯಾ ಎಂದಷ್ಟೇ ತಿಳಿಸಲಾಗಿದೆ.
ಹೀಗಾಗಿ ಇದು TIK TOK ನ ಹೊಸ ರೂಪ ಇರಬಹುದು ಅನ್ನುಮಾನ ವ್ಯಕ್ತವಾಗಿದೆ.
Discussion about this post