ನವದೆಹಲಿ : ಸರ್ಕಾರಿ ಉದ್ಯೋಗ ಪಡೆಯಬೇಕು ಅನ್ನುವುದಾದ್ರೆ ಎಷ್ಟೆಲ್ಲಾ ಸರ್ಕಸ್ ಮಾಡಬೇಕು ಅನ್ನುವುದು ಪ್ರತಿಯೊಬ್ಬರಿಗೂ ಗೊತ್ತಿದೆ. ಕೇಂದ್ರ ಸರ್ಕಾರದ ಹುದ್ದೆಯನ್ನಾದರೂ ಕಷ್ಟಪಟ್ಟು ಪಡೆಯಬಹುದು, ಕರ್ನಾಟಕದಲ್ಲಿ ಕೆಪಿಎಸ್ಸಿ ನಡೆಸುವ ಪರೀಕ್ಷೆಗಳಲ್ಲಿ ಗೆದ್ದರೂ ಉದ್ಯೋಗ ಪಡೆಯುವುದು ಸುಲಭದ ಮಾತಲ್ಲ.
ಅದಕ್ಕೆ ಸಾಕ್ಷಿ ಆ ಸಂಸ್ಥೆಗೆ ಮೆತ್ತಿಕೊಂಡಿರುವ ಕಳಂಕ. ಈಗಾಗಲೇ ಅದೆಷ್ಟು ಬಾರಿ ಕೋರ್ಟ್ ಈ ಸಂಸ್ಥೆಯನ್ನು ಉಗಿದು ಉಪ್ಪಿನಕಾಯಿ ಹಾಕಿದೆ. ಆದರೆ ಈ ಸಂಸ್ಥೆಗೆ ಕಾಯಕಲ್ಪ ಕೊಡಬಲ್ಲ ವ್ಯಕ್ತಿ ಇನ್ನೂ ಹುಟ್ಟಿಯೇ ಇಲ್ಲ.
ಈ ನಡುವೆ ರಾಜಸ್ಥಾನದ ಮೂವರು ಸಹೋದರಿಯರು ಒಂದೇ ಸಲ ಅಲ್ಲಿನ ರಾಜ್ಯ ಆಡಳಿತ ಸೇವೆಗೆ ಆಯ್ಕೆಯಾಗುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.
ರಾಜಸ್ಥಾನದ ಹನುಮಾನಗಡದ ಸಹೋದರಿಯರಾದ ಅನ್ಶು, ರೀತು ಮತ್ತು ಸುಮನ್ ಅವರು 2018ರ ರಾಜಸ್ಥಾನ ಆಡಳಿತಾತ್ಮಕ ಸೇವೆ (ಆರ್ಎಎಸ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂವರೂ ಸಹದೇವ ಸಹರನ್ ಎಂಬ ರೈತನ ಮಕ್ಕಳಾಗಿದ್ದು. ವಿಶೇಷವೆಂದರೆ ಈ ಸಹೋದರಿಯರ ಅಕ್ಕಂದಿರಾದ ರೋಮಾ ಮತ್ತು ಮಂಜು ಕೂಡ ಆರ್ಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಈಗಾಗಲೇ ಸರ್ಕಾರಿ ಹುದ್ದೆಯಲ್ಲಿದ್ದಾರೆ.
Discussion about this post