ಕನ್ನಡ ಯೂಟ್ಯೂಬ್ ಲೋಕದಲ್ಲಿ ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ವಾಹಿನಿ ಅಂದ್ರೆ ಅದು ಡಾಕ್ಟರ್ ಬ್ರೋ. ಟೈಟಲ್ ನೋಡಿಯೇ ವಿಚಿತ್ರವಾಗಿದೆಯಲ್ಲ ಅಂದುಕೊಂಡ್ರೆ, ಈ ವಾಹಿನಿಯನ್ನು ನಡೆಸುವವರೂ ಅಷ್ಟೇ ಸ್ಪೆಷಲ್ ಆಗಿದ್ದಾರೆ.
ಬದುಕಿನಲ್ಲಿ ಏನೂ ಸಾಧಿಸಲಾಗದು ಎಂದು ಕೈ ಕಟ್ಟಿ ಕೂತವರಿಗೆ ಹಾಗೂ ಅಂದುಕೊಂಡಿದ್ದನ್ನು ಮಾಡಲೇಬೇಕು ಎಂದು ಪಣ ತೊಟ್ಟವರಿಗೆ ಈ ವಾಹಿನಿಯ ಮಾಲಕ ಒಂದು ಆದರ್ಶವೇ ಸರಿ.
ಅಂದ ಹಾಗೇ ಈ ಚಾನೆಲ್ ನನ್ನು ನಡೆಸುತ್ತಿರುವುದು ಗಗನ್ ಶ್ರೀನಿವಾಸಯ್ಯ ಅಂತಾ. ಬೆಂಗಳೂರು ಹೊರವಲಯದಲ್ಲಿ ಹುಟ್ಟಿ ಬೆಳೆದ ಗಗನ್ ಗೆ ಓದು ತಲೆಗೆ ಹತ್ತಲಿಲ್ಲ. ಹಾಗಂತ ಪಠ್ಯೇತರ ಚಟುವಟಿಕೆಯಲ್ಲಿ ಮುಂದಿದ್ದ ಹುಡುಗನಿಗೆ ಸಾಕಷ್ಟು ಕನಸುಗಳಿತ್ತು. ನಾನೊಬ್ಬ ಢಿಪರೆಂಟ್ ಅನ್ನುವುದನ್ನು ತೋರಿಸಬೇಕಿತ್ತು.
Discussion about this post