ಅಂಧ್ರದಲ್ಲಿ ಘೋರ ದುರಂತ ನಡೆದಿದ್ದು, ಏಳು ಕಾರ್ಮಿಕರು ಸುಟ್ಟು ಹೋಗಿದ್ದಾರೆ
ಅಂಧ್ರ ಪ್ರದೇಶ : ಚಲಿಸುತ್ತಿದ್ದ ಆಟೋ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಕಾರಣ, ಬೆಂಕಿ ಹೊತ್ತಿಕೊಂಡು ಏಲು ಮಂದಿ ಸಜೀವ ದಹನವಾದ ಘಟನೆ ಆಂಧ್ರದ ಶ್ರೀಸತ್ಯಸಾಯಿ ಜಿಲ್ಲೆಯ ತಾಡಿಮರ್ರಿ ಎಂಬಲ್ಲಿ ನಡೆದಿದೆ.
ಇಂದು ಬೆಳಗ್ಗೆ ಗುಡಂಪಲ್ಲಿಯಿಂದ ಚಿಲ್ಲಕೊಂಡಯ್ಯ ಪಲ್ಲಿಗೆ 7 ಮಂದಿ ಕಾರ್ಮಿಕರು ಕೃಷಿ ಕೆಲಸದ ಸಲುವಾಗಿ ಆಟೋದಲ್ಲಿ ತೆರಳುತ್ತಿದ್ದರು. ಈ ವೇಳೆ ಹೈಟೆನ್ಸನ್ ತಂತಿ ತುಂಡಾಗಿ ರಿಕ್ಷಾ ಮೇಲೆಯೇ ಬಿದ್ದಿದೆ. ಪರಿಣಾಮ ಏಕಾಏಕಿ ಆಟೋಗೆ ಬೆಂಕಿ ಹತ್ತಿ, 7 ಮಂದಿ ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ.
ಆಟೋದಲ್ಲಿ ಒಟ್ಟು 10 ಮಂದಿ ಪ್ರಯಾಣಿಕರಿದ್ದರು ಅನ್ನಲಾಗಿದ್ದು, ಉಳಿದವರಿಗೂ ಗಂಭೀರ ಗಾಯಗಳಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇನ್ನು ಆಟೋ ಟಾಲಕ ಘಟನೆ ಸಂದರ್ಭದಲ್ಲಿ ರಿಕ್ಷಾದಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾನೆ. ಇದೀಗ ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದೀಗ ಬಂದಿರುವ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ 10ಕ್ಕೆ ತಲುಪಿದೆ ಅನ್ನಲಾಗಿದೆ.
Discussion about this post